Jio 2024: 365 ದಿನ ರಿಚಾರ್ಜ್ ಮಾಡುವ ಅಗತ್ಯ ಇಲ್ಲ, Jio ಗ್ರಾಹಕರಿಗೆ ಇನ್ನೊಂದು ಆಕಾರ್ಷಕ ರಿಚಾರ್ಜ್ ಪ್ಲ್ಯಾನ್.
ಗ್ರಾಹಕರಿಗೆ ಕಡಿಮೆ ಬೆಲೆಗೆ ಇನ್ನೊಂದು ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ Jio
Jio Annual Recharge Plans 2024: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾದ Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ.
ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ. ಸದ್ಯ JIo ತನ್ನ ಗ್ರಾಹಕರಿಗೆ 336 ದಿನಗಳ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಅತಿ ಕಡಿಮೆ ಬೆಲೆ ಜಿಯೋ ಬಳಕೆದಾರರು ವರ್ಷದ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಇದೀಗ ನಾವುಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
![Reliance Jio 3178 Rs Recharge Plan](https://nadunudi.in/wp-content/uploads/2024/01/Reliance-Jio-3178-Rs-Recharge-Plan.png)
Jio ಗ್ರಾಹಕರಿಗೆ ಇನ್ನೊಂದು ಆಕಾರ್ಷಕ ರಿಚಾರ್ಜ್ ಪ್ಲ್ಯಾನ್
ಸದ್ಯ 2024 ರಲ್ಲಿ ಜಿಯೋ ತನ್ನ ಬಳಕೆದಾರರಿಗೆ ಭರ್ಜರಿ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ಪ್ರತಿನಿತ್ಯ 4.21 ರೂ. ಖರ್ಚು ಮಾಡುವ ಮೂಲಕ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಪಡೆಯಬಹುದು. ಈ ಯೋಜನೆಯು ನಿಮಗೆ ಅನಿಯಮಿತ ಕರೆಯ ಜೊತೆಗೆ 3600 SMS ಸೌಲಭ್ಯವನ್ನು ನೀಡಲಿದೆ.
ಈ ಯೋಜನೆಯು ಕಡಿಮೆ ಡೇಟಾ ಬಳಕೆದಾರರಿಗೆ ಸಹಾಯವಾಗಲಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟಾಗಿ 24GB ಡೇಟಾ ಲಭ್ಯವಾಗಲಿದೆ. ಡೇಟಾ ಖಾಲಿಯಾದ ಬಳಿಕ 64Kbps ವೇಗದ ಮಿತಿಯ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಬಳಕೆದಾರರು ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
![Jio And Airtel Same Recharge Plan](https://nadunudi.in/wp-content/uploads/2024/01/Jio-And-Airtel-Same-Recharge-Plan.jpg)
365 ದಿನ ರಿಚಾರ್ಜ್ ಮಾಡುವ ಅಗತ್ಯ ಇಲ್ಲ
ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು.
ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ 912.5GB ಡೇಟಾವನ್ನು ನೀಡುತ್ತದೆ. ಪ್ರತಿ ನಿತ್ಯ 2.5GB ಡೇಟಾ ಲಭ್ಯವಿರುವ ಕಾರಣ ಬಳಕೆದಾರರು ಡೇಟಾ ಮಿತಿಯಿಲ್ಲದೆ ಎಷ್ಟು ಬೇಕಾದರೂ ಡೇಟಾವನ್ನು ಬಳಸಿಕೊಳ್ಳಬಹುದು.