Aadhaar Authentication: ಆಧಾರ್ ಕಾರ್ಡ್ ನಿಯಮದಲ್ಲಿ ಮತ್ತೆ ಬಹುದೊಡ್ಡ ಬದಲಾವಣೆ, ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ

ಆಧಾರ್ ಕಾರ್ಡ್ ನಿಯಮದಲ್ಲಿ ಮತ್ತೆ ಬದಲಾವಣೆ

Aadhaar Card Authentication History Checking Process: ದೇಶದಲ್ಲಿ ಇತ್ತೀಚಿಗೆ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿದೆ. ವಂಚಕರು ತಂತ್ರಜ್ಞಾನಗಳನ್ನು ದುರುದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಜನರನ್ನು ಸುಲಭವಾಗಿ ವಂಚನೆ ಮಾಡುತ್ತಿದ್ದಾರೆ. ಇನ್ನು ಮುಖ್ಯವಾಗಿ ವಂಚಕರು ಜನರ Aadhaar Card ಅನ್ನು ಬಳ್ಸಿಕೊಂಡು ವಂಚನೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಆಧಾರ್ ನ ಬಗ್ಗೆ ಸ್ವಲ್ಪ ಮಾಹಿತಿ ಇದ್ದರು ಕೂಡ ನಾನಾ ವಿಧಾನದ ಮೂಲಕ ವಂಚನೆಗೆ ಸ್ಕೆಚ್ ಹಾಕುತ್ತಾರೆ. ಈ ವಂಚನೆಯ ತಡೆಗಾಗಿ ಸರ್ಕಾರ ಆಧಾರ್ ಕಾರ್ಡ್ ನಿಯಮದಲ್ಲಿ ಮತ್ತೆ ಬಹುದೊಡ್ಡ ಬದಲಾವಣೆ ಮಾಡಿದೆ. ನೀವು ಈ ರೀತಿ ಮಾಡುವುದರಿಂದ ಆಧಾರ್ ಸ್ಕಾಮ್ ನಿಂದ ಪಾರಾಗಲು ಸಾಧ್ಯವಾಗುತ್ತದೆ.

Aadhaar Card Authentication History Checking Process
Image Credit: Paytm

ಆಧಾರ್ ಕಾರ್ಡ್ ನಿಯಮದಲ್ಲಿ ಮತ್ತೆ ಬಹುದೊಡ್ಡ ಬದಲಾವಣೆ
ಸಾಮಾನ್ಯವಾಗಿ ಎಲ್ಲ ಕೆಲಸಗಳಿಗೂ ಆಧಾರ್ ಮಾಹಿತಿ ನೀಡುವುದು ಅಗತ್ಯವಾಗಿದೆ. ದೇಶದಲ್ಲಿ ಆಧಾರ್ ಕಾರ್ಡ್ ಬಳಕೆ ಹೆಚ್ಚಾಗಿ ನಡೆಯುತ್ತಿದೆ. ಆಧಾರ್ ಕಾರ್ಡ್ ಮುಖ್ಯ ದಾಖಲೆ ಆಗಿರುವ ಕಾರಣಕ್ಕೆ ಜನರು ಹೆಚ್ಚಾಗಿ ಆಧಾರ್ ಅನ್ನು ಬಳಸುತ್ತಾರೆ. ಇನ್ನು ಆಧಾರ್ ಬಯೋಮೆಟ್ರಿಕ್ ಮಾಹಿತಿಯನ್ನು ಇಟ್ಟುಕೊಂಡು ವಂಚಕರು ಸಾಕಷ್ಟು ಜನರನ್ನು ವಂಚಿಸಿದ್ದಾರೆ. ಹೀಗಾಗಿ ನೀವು ಆಧಾರ್ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವ ಮುನ್ನ ಸ್ವಲ್ಪ ಎಚ್ಚರದಿಂದಿರಿ.

ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ
ಸದ್ಯ ಭಾರತೀಯ ವೈಶಿಷ್ಟ್ಯ ಗುರುತಿನ ಪ್ರಾಧಿಕಾರ ಇದೀಗ Aadhaar Card Authentication ಬಗ್ಗೆ ಮಹತ್ವದ ಮಾಹಿತಿಯ್ನನು ಹೊರಡಿಸಿದೆ. ಸದ್ಯ UIDAI ಆಧಾರ್ ಕಾರ್ಡ್ ಸುರಕ್ಷತೆಗಾಗಿ ಸಾಕಷ್ಟು ಕ್ರಮ ಕೈಗೊಂಡಿದೆ. ನೀವು ನಿಮ್ಮ Aadhaar Card Authentication ಅನ್ನು ಆಗ ಪರಿಶೀಲಿಸಿಕೊಳ್ಳುತ್ತಿರುವು ಉತ್ತಮ. ನೀವು https://resident.uidai.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಅನ್ನು ಸೇಫ್ಟಿ ಮಾಡಿಕೊಳ್ಳಬಹುದು.

Aadhaar Card Authentication
Image Credit: Hindustantimes

ಈ ವೆಬ್ ಸೈಟ್ ನಲ್ಲಿ Aadhaar Card Authentication History ಮೇಲೆ ಟ್ಯಾಪ್ ಮಾಡಿ, ಆಧಾರ್ ಸಂಖ್ಯೆ ಮತ್ತು ಸೀಕ್ರೆಟ್ ಕೋಡ್ ಹಾಕಿ ಜನರೇಟ್ OTP ಕ್ಲಿಕ್ ಮಾಡಬೇಕು. ನಂತರ ನಿಮ್ಮ ನೋಂದಾಯಿತ ನಂಬರ್ ಗೆ OTP ಬರುತ್ತದೆ. ಆ OTP ನಮೂದಿಸಿದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ ಬಳಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯಬಹುದು. ಈ ವೆಬ್ ಸೈಟ್ ನಲ್ಲಿ ನೀವು ಸುಲಭವಾಗಿ Aadhaar Card Authentication History ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group