Aadhaar Card: ಮನೆಯಲ್ಲಿ ನಾಯಿ ಸಾಕುವವರಿಗೆ ಇನ್ನೊಂದು ರೂಲ್ಸ್, ನಾಯಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯ

ಇನ್ನುಮುಂದೆ ನಾಯಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯ....!

Aadhaar Card For Dog: ಭಾರತೀಯ ಪ್ರಜೆಯಾದವರಿಗೆ Aadhaar Card ಎಷ್ಟು ಮುಖ್ಯ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದೇಶದಲ್ಲಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಅನ್ನು ಹೊಂದಿರುವುದು ಅಗತ್ಯ. ತಮ್ಮ ಐಡೆಂಟಿಟಿಗಾಗಿ ಜನರು ಆಧಾರ್ ಕಾರ್ಡ್ ಅನ್ನು ಹೊಂದುತ್ತಾರಷ್ಟೇ. ಇನ್ನು 5 ವರ್ಷದ ಮಕ್ಕಳಿಗೂ ಕೂಡ ಸರ್ಕಾರ ಆಧಾರ್ ಕಾರ್ಡ್ ಅನ್ನು ಕಡ್ಡಾಗೊಳಿಸಿದೆ.

5 ವರ್ಷದ ಮಕ್ಕಳು ಬಾಲ್ ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಜನರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸುವುದು ಸಾಮಾನ್ಯ ವಿಷಯ. ಆದರೆ ನಿಮಗೆ ಗೊತ್ತೇ…? ಇದೀಗ ಕೇಂದ್ರ ಸರ್ಕಾರ ನಾಯಿಗಳಿಗೂ (Dog) ಕೂಡ ಆಧಾರ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ಈ ಬಗ್ಗೆ ನೀವು ಮಾಹಿತಿ ತಿಳಿಯಲು ಈ ಲೇಖನವನ್ನು ಓದಬಹುದು.

Aadhaar Card For Dog
Image Credit: Goodreturns

ಇನ್ನುಮುಂದೆ ನಾಯಿಗಳಿಗೂ ಆಧಾರ್ ಕಾರ್ಡ್ ಕಡ್ಡಾಯ….!
ಹೌದು, ಮುಂದಿನ ದಿನಗಳಲ್ಲಿ ನಾಯಿಗಳಿಗೂ ಕೂಡ ಆಧಾರ್ ಕಾರ್ಡ್ ಕಡ್ಡಾಯವಾಗಲಿದೆ. ನಾಯಿಗಳು ಕೂಡ ಮನುಷ್ಯರಂತೆ ಇನ್ನುಮುಂದೆ ಆಧಾರ್ ಕಾರ್ಡ್ ಹೊಂದಬೇಕಾಗುತ್ತದೆ. ನಾಯಿಗಳು ಕೂಡ ಇನ್ನುಮುಂದೆ ತಮ್ಮ ಐಡೆಂಟಿಯನ್ನು ಹೊಂದಿರಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆ. ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಈಗಾಗಲೇ 100 ನಾಯಿಗಳಿಗೆ ಆಧಾರ್ ಕಾರ್ಡ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನು 100 ನಾಯಿಗಳು ದೆಹಲಿಯ ಟರ್ಮಿನಲ್ 1 ವಿಮಾನ ನಿಲ್ದಾಣ, ಇಂಡಿಯಾ ಗೇಟ್ ಮತ್ತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ನಡೆಸುತ್ತಿರುವ ದೆಹಲಿ ನಾಯಿ ಆಶ್ರಯ ಸೇರಿದಂತೆ ವಿವಿಧ ಸ್ಥಳಗಳಿಗೆ ಸೇರಿವೆ ಎಂದು ಹೇಳಲಾಗಿದೆ. ಬೀದಿ ನಾಯಿಗಳನ್ನು ರಕ್ಷಿಸುವ ಮತ್ತು ಸ್ಥಳಾಂತರಿಸುವ ಉದ್ದೇಶದಿಂದ NGO ಗಳು ಈ ನಿಯಮವನ್ನು ಜಾರಿಗೆ ತಂದಿವೆ.

Street Dogs adhaar card
Image Credit: Republicbharat

ನಾಯಿಗಳಿಗಾಗಿ ಸ್ಕ್ಯಾನರ್ ಒಳಗೊಂಡ ಟ್ಯಾಗ್ ಕಾರ್ಡ್
ಏಪ್ರಿಲ್ 27 ರಂದು ನಾಯಿಗಳಿಗೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಇಂದಿನಿಂದ ಈ ಕಾರ್ಯ ಆರಂಭವಾಗಿದೆ. ಸಂಬಂಧಪಟ್ಟ ನಾಯಿಗಳಿಗೆ ಆಧಾರ್ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಈ ಕುರಿತು ಪ್ರಾಣಿ ಕಾರ್ಯಕರ್ತೆ ಮಾನವಿ ರೈ ಮಾತನಾಡಿ, ಈ ಆಧಾರ್ ಕಾರ್ಡ್ ನಾಯಿಗಳಿಗೆ ಸಂಜೀವಿನಿಯಾಗಿದೆ. “ಇಂದು ಈ QR ಆಧಾರಿತ ಟ್ಯಾಗ್‌ ಗಳು ನಮ್ಮ ನಾಯಿಗಳಿಗೆ ವಿಶೇಷವಾಗಿ ಸಂಕಷ್ಟದ ಸಮಯದಲ್ಲಿ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲು ನನಗೆ ಸಂತೋಷವಾಗಿದೆ” ಎಂದು ಅವರು ಹೇಳಿದರು.

Join Nadunudi News WhatsApp Group

ಇನ್ನು Pawfriend.in ಎಂಬ ಎನ್‌ಜಿಒ ಇದನ್ನು ಕಂಡುಹಿಡಿದಿದೆ. ನಾಯಿಗಳಿಗೆ ನೀಡಲಾಗುವ ಆಧಾರ್ ಕಾರ್ಡ್‌ ನಲ್ಲಿ ಕ್ಯೂಆರ್ ಕೋಡ್ ಅನ್ನು ಅಳವಡಿಸಲಾಗಿದೆ. ಇದು ಮೈಕ್ರೋಚಿಪ್‌ ಗಳನ್ನು ಒಳಗೊಂಡಿದೆ ಮತ್ತು ನಾಯಿಗಳು ಕಳೆದುಹೋದರೆ, ನಾಯಿಯ ಬಗ್ಗೆ ವಿವರಗಳನ್ನು ಪಡೆಯಲು ಈ ಟ್ಯಾಗ್‌ ಗಳಲ್ಲಿನ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

Aadhaar Card For Dog Latest Update
Image Credit: Telugu Newsx

Join Nadunudi News WhatsApp Group