Aadhar Bandh: ಕೆಲವೇ ದಿನಗಳಲ್ಲಿ ಇಂತವರ ಆಧಾರ್ ಕಾರ್ಡ್ ನಿಷ್ಕ್ರಿಯ, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ.

ಕೆಲವು ಜನರ ಆಧಾರ್ ಕಾರ್ಡ್ ಇನ್ನೇನು ಕೆಲವೇ ದಿನಗಳಲ್ಲಿ ನಿಷ್ಕ್ರಿಯ ಆಗಲಿದೆ.

Aadh=ar card is inactive: ಪ್ರಸ್ತುತ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರತಿಯೊಬ್ಬ ವ್ಯಕ್ತಿಗೂ ಮುಖ್ಯ ದಾಖಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಯಾವುದೇ ಕಚೇರಿ ಸಂಬಂಧಿತ ಕೆಲಸಕ್ಕೆ ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ.

ಆಧಾರ್ ನೊಂದಿಗೆ ಎಲ್ಲ ರೀತಿಯ ವೈಯಕ್ತಿಕ ದಾಖಲೆಯನ್ನು ಲಿಂಕ್ ಮಾಡುವಂತೆ ಈಗಾಗಲೆ ಸರ್ಕಾರ ಸೂಚಿಸಿದೆ. ಸಾಕಷ್ಟು ಅನುಕೂಲಕರ ಸೇವೆಗಳನ್ನು ಆಧಾರ್ ನಲ್ಲಿ ಜಾರಿಗೊಳಿಸಲಾಗಿದೆ. ಇನ್ನು ಆಧಾರ್ ಪ್ರಾಧಿಕಾರ UIDAI ಹೊಸ ನೀತಿಯನ್ನು ತರುತ್ತಿದೆ. ನೀವು ಆಧಾರ್ ಕಾರ್ಡ್ ಸಂಬಂಧಿತ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Big update for Aadhaar card holders
Image Credit: Blog.wego

ಆಧಾರ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್
ಆಧಾರ್ ಕಾರ್ಡ್ ಅನ್ನು 10 ವರ್ಷ ಗಳ ಬಳಿಕ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಜನರಿಗೆ ಯಾವುದೇ ಕೆಲಸ ಮಾಡಬೇಕಿದ್ದರೂ ಆಧಾರ್ ಕಾರ್ಡ್ ಬೇಕಿದೆ. ನೂತನ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಆದರೆ ಇತ್ತೀಚಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು UIDAI ಈಗಾಗಲೇ ಆದೇಶ ಹೊರಡಿಸಿದೆ. ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ ಮಾಡದೆ ಇರುವ ಆಧಾರ್ ಕಾರ್ಡ್ ನವೀಕರಣ ಕಡ್ಡಾಯವಾಗಿದೆ.

ಆಧಾರ್ ಕಾರ್ಡ್ ನವೀಕರಣ ಕಡ್ಡಾಯ
ಆಧಾರ್ ಕಾರ್ಡ್ ಪಡೆದು ಹತ್ತು ವರ್ಷವಾದರೆ ಇದೀಗ ಕಾರ್ಡ್ ಅನ್ನು ಮತ್ತೊಮ್ಮೆ ಅಪ್ಡೇಟ್ ಮಾಡಬೇಕಾಗಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುವುದು ಮತ್ತು ದುರುಪಯೋಗ ತಪ್ಪಿಸುವುದು ಆಗಿದೆ.

Aadhaar card renewal is mandatory
Image Credit: Zeebiz

ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗು ಮೊಬೈಲ್ ನಂಬರ್ ಗಳ ವಿವರ ನವೀಕರಣಕ್ಕೆ 50 ರೂಪಾಯಿ ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ ನವೀಕರಣಕ್ಕೆ 100 ರೂಪಾಯಿಗಳ ಸೇವಾ ಶುಲ್ಕ ಇದ್ದು ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ.

Join Nadunudi News WhatsApp Group

ಆಧಾರ್ ನವೀಕರಣ ಆಗದಿದ್ದರೆ ಕಾರ್ಡ್ ನಿಷ್ಕ್ರಿಯ
ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದಿದ್ದು ಪ್ರಸ್ತುತ ವಿಳಾಸದ ಮಾಹಿತಿ ಇಲ್ಲದಿದ್ದರೆ ಅಥವಾ ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಣ ಮಾಡದಿದ್ದರೆ ಅಂತವರ ವಿರುದ್ಧ ಯುಐಡಿಎಐ ಕಠಿಣ ಕ್ರಮ ಕೈಗೊಳ್ಳಲಿದೆ.

If Aadhaar is not updated the card is inactive
Image Credit: Moneycontrol

ಆಧಾರ್ ನವೀಕರಣ ಆಗದೆ ಇದ್ದಾರೆ ಆಧಾರ್ ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದು ಯುಐಡಿಎಐ ಆದೇಶ ನೀಡಿದೆ. ಹೀಗಾಗಿ ನಿಮ್ಮ ಹತ್ತು ವರ್ಷದ ಆಧಾರ್ ಕಾರ್ಡ್ ನವೀಕರಣ ಆಗದಿದ್ದರೆ ಇಂದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ನವೀಕರಣ ಮಾಡಿಕೊಳ್ಳುವುದು ಸೂಕ್ತ.

Join Nadunudi News WhatsApp Group