Voter ID: ಹೊಸ ವೋಟರ್ ID ಮಾಡಿಸುವವರಿಗೆ ಕೇಂದ್ರದ ಹೊಸ ರೂಲ್ಸ್, ನಿಯಮ ಬದಲಾವಣೆ.

ನೀವು ಹೊಸ Voter ID ಗೆ ಅರ್ಜಿ ಸಲ್ಲಿಸುವವರಾದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

Aadhaar Card Is Not Mandatory For Voter ID: ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ Voter ID ದಾಖಲೆಯನ್ನು ಹೊಂದಿರಬೇಕು. ಭಾರತೀಯರಿಗೆ Voter ID ಮುಖ್ಯ Identity ದಾಖಲೆಯಾಗಿದೆ. ಭಾರತೀಯರಿಗೆ ಮತದಾನ ಹಕ್ಕಾಗಿರುತ್ತದೆ. ತಮ್ಮ ಮತದಾನದ ಹಕ್ಕನ್ನು ಪಡೆಯಲು ಭಾರತದ ಪ್ರತಿ ಪ್ರಜೆ Voter ID ಹೊಂದಿರುವುದು ಕಡ್ಡಾಯ.

ಇನ್ನು Election Commission of India ಈ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮವನ್ನು ರೂಪಿಸಿದೆ. ಸದ್ಯ ಹೊಸದಾಗಿ ವೋಟರ್ ಕಾರ್ಡ್ ಮಾಡಿಸುವ ಜನರಿಗೆ ಕೇಂದ್ರ ಸರ್ಕಾರ ಹೊಸ ನಿಯಮವನ್ನ ಜಾರಿಗೆ ತಂದಿದ್ದು ಇನ್ನುಮುಂದೆ ಜನರು ಬಹಳ ಸುಲಭವಾಗಿ ಹೊಸದಾದ ವೋಟರ್ ಕಾರ್ಡ್ ಮಾಡಿಸಬಹುದು. 

Aadhaar Card Is Not Mandatory For Voter ID
Image Credit: Newsclick

ಹೊಸ Voter ID ಮಾಡಿಸುವವರಿಗೆ ಮಹತ್ವದ ಮಾಹಿತಿ
ಯಾವುದೇ ವ್ಯಕ್ತಿ Voter ID ಮಾಡಿಸಿದರು ಭಾರತೀಯ ಚುನಾವಣಾ ಆಯೋಗದ ನಿಯಮದ ಪ್ರಕಾರವೇ ಮಾಡಿಸಬೇಕಾಗುತ್ತದೆ. ದೇಶದಲ್ಲಿ 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷದವರು ತಮ್ಮ ಮತ ಚಲಾಯಿಸಲು Voter ID ಹೊಂದಿರುವುದು ಕಡ್ಡಾಯ. Voter ID ಇಲ್ಲದೆ ಇದ್ದರೆ ಆ ವ್ಯಕ್ತಿ ಮತ ಹಾಕುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಇನ್ನು 18 ವರ್ಷ ಮೇಲ್ಪಟ್ಟವರು Voter ID ಗೆ ಅರ್ಜಿ ಸಲ್ಲಿಸಿ ದಾಖಲೆಯನ್ನು ಪಡೆಯಬೇಕಿದೆ. ಇದೀಗ ಚುನಾವಣಾ ಆಯೋಗ ವೋಟರ್ ಐಡಿ ಮಾಡಿಸುವಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಚುನಾವಣಾ ಆಯೋಗದ ಈ ನಿರ್ಧಾರ ಹೊಸ ವೋಟರ್ ಐಡಿ ಮಾಡಿಸುವವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ನೀವು ಹೊಸ Voter ID ಗೆ ಅರ್ಜಿ ಸಲ್ಲಿಸುವವರಾದರೆ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ.

Important information for new Voter ID candidates
Image Credit: Undefined

ಇನ್ನುಮುಂದೆ Voter ID ಮಾಡಿಸಲು Aadhaar Card ಕಡ್ಡಾಯವಲ್ಲ
ಇತೀಚೆಗೆ Aadhaar Card ಪ್ರಮುಖ ದಾಖಲೆಯಾಗಿದೆ. ಆಧಾರ್ ಇಲ್ಲದೆ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ ಎನ್ನಬಹುದು. ಇನ್ನು ಈ Voter ID ಮಾಡಿಸಲು ನಿಮಗೆ ಮುಖ್ಯವಾಗಿ Aadhaar Card ಅಗತ್ಯವಿರುತ್ತದೆ. ಆದರೆ ಇದೀಗ ಭಾರತೀಯ ಚುನಾವಣಾ ಆಯೋಗ ಈ ನಿಯಮದಲ್ಲಿ ಬದಲಾವಣೆಯನ್ನು ತರಲು ನಿರ್ಧರಿಸಿದೆ.

Join Nadunudi News WhatsApp Group

ಚುನಾವಣಾ ಆಯೋಗದ ಹೊಸ ಮಾರ್ಗಸೂಚಿ
ಇನ್ನುಮುಂದೆ Voter ID ಯನ್ನು ಮಾಡಿಸಲು ಆಧಾರ್ ಕಾರ್ಡ್ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ವೋಟರ್ ಐಡಿ ಪಡೆಯುವಾಗ ಅರ್ಜಿ ನಮೂನೆಯಲ್ಲಿ ಆಧಾರ್ ಮಾಹಿತಿ ನೀಡಿಲ್ಲದಿದ್ದರು ವೋಟರ್ ಐಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಮತದಾರರ ಗುರುತಿನ ಚೀಟಿ ಮಾಡಲು ಆಧಾರ್ ಸಂಖ್ಯೆಯನ್ನು ಭರ್ತಿ ಮಾಡುವ ಅಗತ್ಯವನ್ನು ಶೀಘ್ರದಲ್ಲೇ ರದ್ದುಗೊಳಿಸಲಾಗುವುದು ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

Join Nadunudi News WhatsApp Group