Aadhaar Card: ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯ ಇಲ್ಲ, ಕೇಂದ್ರ ಸರ್ಕಾರದ ಅಧಿಕೃತ ಘೋಷಣೆ.
ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಮಾನ್ಯ ಎಂದು ತಿಳಿಸಿದ ಕೇಂದ್ರ ಸರ್ಕಾರ
Aadhaar Card New Rule: ಸದ್ಯ ದೇಶದಲ್ಲಿ ವ್ಯಕ್ತಿಯ ವೈಯಕ್ತಿಕ ದಾಖಲೆಗಳಲ್ಲಿ Aadhaar Card ಕೂಡ ಮುಖ್ಯ ದಾಖಲೆಯಾಗಿದೆ. ಯಾವುದೇ ಕೆಲಸಕ್ಕಾದರೂ ಆಧಾರ್ ಕಾರ್ಡ್ ಅಗತ್ಯವಾಗಿದೆ. ಜನರು ಆಧಾರ್ ಕಾರ್ಡ್ ಇಲ್ಲದೆ ತಮ್ಮ ಯಾವುದೇ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸದ್ಯ ಕೇಂದ್ರ ಸರ್ಕಾರ ಆಧಾರ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಇನ್ನುಮುಂದೆ ಆಧಾರ್ ಕಾರ್ಡ್ ಈ ಕೆಲಸಕ್ಕೆ ಮಾನ್ಯವಾಗುವುದಿಲ್ಲ.
ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯ ಇಲ್ಲ
ಸದ್ಯ UIDAI ಆಧಾರ್ ನಿಯಮವನ್ನು ಬದಲಾಯಿಸಿದೆ. ಇನ್ನುಮುಂದೆ ಆಧಾರ್ ಕಾರ್ಡ್ ನಲ್ಲಿ ಬರೆದ ಜನ್ಮ ದಿನಾಂಕವು ಯಾವುದೇ ದಾಖಲೆಯಲ್ಲಿ ಹುಟ್ಟಿದ ದಿನಾಂಕಕ್ಕೆ ಮಾನ್ಯವಾಗಿರುವುದಿಲ್ಲ. ಸಂಬಂಧಿತ ದಾಖಲೆಗಳೊಂದಿಗೆ ಜನ್ಮ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದು ಅಗತ್ಯವಾಗಿರುತ್ತದೆ. ಇದರ ನಂತರವೇ ಸಂಬಂಧಿಸಿದ ದಾಖಲೆಗಳು ಮತ್ತು ಅರ್ಜಿಗಳು ಮಾನ್ಯವಾಗಿರುತ್ತವೆ.
![Aadhar Card Address Change Online](https://nadunudi.in/wp-content/uploads/2024/01/Aadhar-Card-Address-Change-Online.png)
Employees’ Provident Fund Organization (EPFO)
ಜನ್ಮ ದಿನಾಂಕದ ಪರಿಷ್ಕರಣೆ ಮತ್ತು ತಿದ್ದುಪಡಿಗಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ಕೈಬಿಟ್ಟಿದೆ. ದಿನಾಂಕ, ತಿಂಗಳು ಮತ್ತು ವರ್ಷ ಇತ್ಯಾದಿಗಳನ್ನು ಬದಲಾಯಿಸುವ ಮೂಲಕ ಆಧಾರ್ನಲ್ಲಿ ಜನ್ಮ ದಿನಾಂಕವನ್ನು ಬದಲಾಯಿಸುವ ಮೂಲಕ ವಂಚನೆಯನ್ನು ತಡೆಯಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಹೊಸದಾಗಿ ರಚಿಸಲಾದ ಆಧಾರ್ ಗೆ ಸಹ ಅದನ್ನು ಜನ್ಮ ದಿನಾಂಕವಾಗಿ ಬಳಸದಿರುವ ಬಗ್ಗೆಯೂ ಆಧಾರ್ ಕಾರ್ಡ್ ನಲ್ಲಿ ನಮೂದಿಸಲಾಗುತ್ತಿದೆ. ಹೊಸ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡುವಾಗ ಈ ಬಗ್ಗೆ ಮಾಹಿತಿಯನ್ನು ಬರೆಯಲಾಗುತ್ತದೆ.
![Aadhar Card Photo Change Process](https://nadunudi.in/wp-content/uploads/2024/01/Aadhar-Card-Photo-Change-Process.png)
ಇನ್ನುಮುಂದೆ ಈ ದಾಖಲೆಗಳನ್ನು ಬಳಸಬಹುದು
ಇನ್ನುಮುಂದೆ ಜನ್ಮ ದಿನಾಂಕದ ಪರಿಷ್ಕರಣೆ ಮತ್ತು ತಿದ್ದುಪಡಿಗಾಗಿ ಜನನ ಪ್ರಮಾಣ ಪತ್ರ ಅಂಕಪಟ್ಟಿ, ಶಾಲಾ ವರ್ಗಾವಣೆ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್ ದಾಖಲೆಗಳನ್ನು ಬಳಸಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಜನವರಿ 16 2024 ರಂದು ಪ್ರಮುಖ ಸುತ್ತೋಲೆಯನ್ನು ಹೊರಡಿಸಿದ್ದು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಸುತ್ತೋಲೆ ಹೊರಡಿಸಿದೆ.