Benami Property: ಬೇನಾಮಿ ಆಸ್ತಿ ಹೊಂದಿರುವ ಎಲ್ಲರಿಗೂ ಮೋದಿ ಸರ್ಕಾರದಿಂದ ಹೊಸ ನಿಯಮ, ಈಗಲೇ ಈ ಕೆಲಸ ಮಾಡಬೇಕು.

ಇದೀಗ ಬೇನಾಮಿ ಆಸ್ತಿ ಹೊಂದಿರುವ ಎಲ್ಲರಿಗೂ ಮೋದಿ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದೆ.

Benami Property Rules 2023: ಸದ್ಯ ಕೇಂದ್ರ ಸರ್ಕಾರ (Central Government) ದೇಶದಲ್ಲಿ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಇತ್ತೀಚೆಗಂತೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಸ್ತಿ ಸಂಬಂಧಿತ ಅನೇಕ ನಿಯಮವನ್ನು ಪರಿಚಯಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ವಂಚನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಸ್ಥಿರಾಸ್ತಿ ಮಾರ್ಗಸೂಚಿ ದರವನ್ನು ಏರಿಕೆ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಬೇನಾಮಿ ಆಸ್ತಿ ಹೊಂದಿರುವ ಎಲ್ಲರಿಗೂ ಮೋದಿ ಸರ್ಕಾರ (Narendra Modi) ಹೊಸ ನಿಯಮವನ್ನು ಜಾರಿಗೊಳಿಸಿದೆ.

Aadhaar Link To Property
Image Credit: Other Source

ಬೇನಾಮಿ ಆಸ್ತಿ ಹೊಂದಿರುವ ಎಲ್ಲರಿಗೂ ಮೋದಿ ಸರ್ಕಾರದಿಂದ ಹೊಸ ನಿಯಮ
ದೇಶದಲ್ಲಿ ಆಸ್ತಿ ಮಾಲೀಕತ್ವಕ್ಕೆ ಹೊಸ ಕಾನೂನುನ್ನು ರೂಪಿಸಲು ಕೇಂದ್ರದ ಮೋದಿ ಸರ್ಕಾರ ಸಜ್ಜಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ವಂಚನೆಯನ್ನು ತಪ್ಪಿಸಲು ಭಾರತ ಸರ್ಕಾರ ಮುಂದಾಗಿದೆ. ನಿಮ್ಮ ಸ್ಥಿರಾಸ್ತಿಗಳ ಒಡೆತನದ ಹಕ್ಕನ್ನು ಪಡೆಯಲು ಇನ್ನುಮುಂದೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

ಆಸ್ತಿ ದಾಖಾಲೆಗಳಿಗೆ Aadhaar Link ಕಡ್ಡಾಯ
ಸ್ಥಿರ ಆಸ್ತಿಗಳ ಮಾಲೀಕತ್ವವನ್ನು ಪಡೆಯಲು ಆಸ್ತಿ ದಾಖಲೆಯೊಂದಿಗೆ Aadhaar Link ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಭೂಮಿ ಮತ್ತು ಮನೆ ಖರೀದಿಯಲ್ಲಿ ಹೆಚ್ಚುತ್ತಿರುವ ವಂಚನೆಯ್ನ್ನು ತಡೆಯುವ ಉದ್ದೇಶದಿಂದ ಹಾಗೂ ಬೇನಾಮಿ ಆಸ್ತಿಯನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.

linking Aadhaar card with property papers
Image Credit: Rightsofemployees

ಆಸ್ತಿ ದಾಖಾಲೆಗಳಿಗೆ Aadhaar Link ಮಾಡಿದರೆ ಏನು ಪ್ರಯೋಜನ..?
ನೀವು ನಿಮ್ಮ ಆಸ್ತಿ ದಾಖಲೆಗಳಿಗೆ ಆಧಾರ್ ಅನ್ನು ಲಿಂಕ್ ಮಾಡಿದರೆ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ತನ್ನ ಆಸ್ತಿಯನ್ನು ಆಧಾರ್‌ ನೊಂದಿಗೆ ಜೋಡಿಸುವ ವ್ಯಕ್ತಿ ಅತಿಕ್ರಮಣಕ್ಕೆ ಒಳಗಾಗಿದ್ದರೆ, ಅದನ್ನು ಮುಕ್ತಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಹಾಗು ಸರ್ಕಾರ ಪರಿಹಾರವನ್ನು ನೀಡುತ್ತದೆ. ಜನರು ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಖಾತರಿಪಡಿಸಬೇಕು, ನಂತರ ಆಧಾರ್ ಲಿಂಕ್ ಮಾಡಬೇಕಿದೆ.

Join Nadunudi News WhatsApp Group

ಆಸ್ತಿಗೆ ಆಧಾರ್ ಲಿಂಕ್ ಆಗದಿದ್ದರೆ ಏನಾಗುತ್ತದೆ..?
ನಿಮ್ಮ ಆಸ್ತಿ ದಾಖಾಲೆಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನೀವು ಆಧಾರ್ ಲಿಂಕ್ ಮಾಡಲು ವಿಫಲವಾದರೆ ನಿಮಗೆ ಆಸ್ತಿ ವಿಚಾರವಾಗಿ ವಂಚನೆ ಆದಾಗ ಸರ್ಕಾರ ಹೊಣೆ ಹೊರುವುದಿಲ್ಲ. ರಿಜಿಸ್ಟ್ರಾರ್ ಕಚೇರಿಯಲ್ಲಿ ಖಾಸ್ರಾ ಸಂಖ್ಯೆಯ ಆಧಾರದ ಮೇಲೆ ಶೀರ್ಷಿಕೆಯನ್ನು ರಚಿಸಬೇಕಾಗುತ್ತದೆ. ಇದನ್ನು ಆಧಾರ್‌ ಗೆ ಲಿಂಕ್ ಮಾಡಬೇಕು. ಮಾರಾಟದ ನಂತರ ನೋಂದಣಿ ಕೂಡ ನಡೆಯುತ್ತದೆ. ಭೂ ದಾಖಲೆಗಳನ್ನು ನವೀಕರಿಸಲಾಗುತ್ತದೆ.

Join Nadunudi News WhatsApp Group