RTC And Aadhaar: ಸ್ವಂತ ಆಸ್ತಿ ಇದ್ದವರು ತಕ್ಷಣ ಈ ರೀತಿ ಆಧಾರ್ ಕಾರ್ಡ್ ಲಿಂಕ್ ಮಾಡಿ, ಇಲ್ಲವಾದರೆ ಸಿಗಲ್ಲ ಈ ಸರ್ಕಾರೀ ಸೌಲಭ್ಯ.

ನಿಮ್ಮ ಆಸ್ತಿ ದಾಖಲೆ ಜೊತೆ ಆಧಾರ್ ಕಾರ್ಡ್ ಕಿಂಕ್ ಮಾಡದಿದ್ದರೆ ನಿಮಗೆ ಸಿಗಲ್ಲ ಈ ಸರ್ಕಾರೀ ಸೌಲಭ್ಯಗಳು

Aadhaar Link With RTC: ರಾಜ್ಯ ಸರ್ಕಾರ ರೈತರ ಜಮೀನಿಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಜಾರಿಗೊಳಿಸುತ್ತಿದೆ. ಇನ್ನು ರಾಜ್ಯದಲ್ಲಿ ರೈತರಿಗಾಗಿ ವಿಶೇಷ ಸೌಲಭ್ಯವನ್ನು ಕೂಡ ರಾಜ್ಯ ಸರ್ಕಾರ ನೀಡುತ್ತಿದೆ. ಸದ್ಯ ರೈತರ ಬರ ಪರಿಹಾರಕ್ಕಾಗಿ ಸರ್ಕಾರ ಮುಂದಾಗಿದೆ.

ಬೆಳೆ ಹಾನಿಯಿಂದಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ರೈತರಿಗಾಗಿ ಸಾಕಷ್ಟು ಸೌಲಭ್ಯವನ್ನು ಒದಗಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಹೊಸ ನಿಯಮವನ್ನು ಕೂಡ ರೂಪಿಸಿದೆ. ಇನ್ನು ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಲು ರೈತರು ಈ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಕಡ್ಡಾಯವಾಗಿದೆ.

Aadhaar Link With RTC
Image Credit: Original Source

ಸ್ವಂತ ಆಸ್ತಿ ಇದ್ದವರು ತಕ್ಷಣ ಈ ರೀತಿ ಆಧಾರ್ ಕಾರ್ಡ್ ಲಿಂಕ್ ಮಾಡಿ
ರಾಜ್ಯದಲ್ಲಿ ಒಟ್ಟಾರೆ 70 % ರಷ್ಟು ಸಣ್ಣ ರೈತರಿದ್ದಾರೆ ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ. 44 ರಷ್ಟು ಮಾತ್ರ. ಇದರಿಂದಾಗಿ ಕೇಂದ್ರದಿಂದ ಲಭ್ಯವಾಗುವ ಸಾಕಷ್ಟು ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಿಕೊಳಲು ರಾಜ್ಯದ ರೈತರು ತಮ್ಮ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಲಭಿಸುತ್ತದೆ.

RTC And Aadhaar
Image Credit: Original Source

ಹೀಗಾಗಿ ಎಲ್ಲ ರೈತರು ತಮ್ಮ RTC ಜೊತೆ Aadhaar Link ಮಾಡಿಕೊಳ್ಳುವ ಮೂಲಕ ಸರ್ಕಾರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ರೈತರ ಹಿತಕ್ಕಾಗಿ ರಾಜ್ಯ ಸರ್ಕಾರ ಈ ಹೊಸ ನಿಯಮವನ್ನು ರೂಪಿಸಿದೆ. ರಾಜ್ಯದ ರೈತರು ಆದಷ್ಟು ಬೇಗ ತಮ್ಮ RTC ಜೊತೆ Aadhaar Link ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಯೊಂದಿಗೆ ಅಧಿಕೃತ ವೆಬ್ ಸೈಟ್ https://landrecords.karnataka.gov.in/service4 ಗೆ ಲಾಗಿನ್ ಮಾಡುವ ಮೂಲಕ ತಮ್ಮ ಭೂ ದಾಖಲೆಗಳನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group