Aadhaar Card: ಆಧಾರ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ, ಈ ರೀತಿ Online ಮೂಲಕ ಹೊಸ ಆಧಾರ್ ಪಡೆದುಕೊಳ್ಳಿ.

ಆಧಾರ್ ಕಾರ್ಡ್ ಕಳೆದುಹೋದರೆ ಈ ರೀತಿ Online ಮೂಲಕ ಹೊಸ ಆಧಾರ್ ಪಡೆದುಕೊಳ್ಳಿ

Aadhaar Card Online Apply: ಸದ್ಯ ದೇಶದಲ್ಲಿ Aadhaar Card ಎಷ್ಟು ಮುಖ್ಯ ದಾಖಲೆ ಎನ್ನುವುದರ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ತಿಳಿದೇ ಇದೆ. ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳಿಗೆ Aadhaar Card ಮುಖ್ಯವಾಗಿದೆ. ಯಾವುದೇ ಕೆಲಸ Aadhaar Card ಮಾಹಿತಿ ಇಲ್ಲದೆ ಇದ್ದರೆ ಆ ಕೆಲಸ ಪೂರ್ಣಗೊಳ್ಳುದಿಲ್ಲ ಎನ್ನಬಹುದು.

ದೇಶದಲ್ಲಿ Aadhaar Card ಗೆ ಇಷ್ಟು ಪ್ರಾಮುಖ್ಯತೆ ಇರುವಾಗ ಆಧಾರ್ ಮಾಹಿತಿ ಬೇರೆಯವರಿಗೆ ಸಿಕ್ಕಿದ್ದರೆ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲರಿಗು ತಿಳಿದಿರಬೇಕು. ಇನ್ನು UIDAI ಆಧಾರ್ ಸಂಬಂಧಿತ ಅನೇಕ ನಿಯಮಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. Aadhaar Card ನವೀಕರಣದ ಬಗ್ಗೆ UIDAI ಜನರಿಗೆ ಸೂಚನೆ ನೀಡುತ್ತಲೇ ಇದೆ. Aadhaar Card ಸುರಕ್ಷತೆಗಾಗಿ UIDAI ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ.

Aadhaar Card Online Apply
Image Credit: Navi

ಆಧಾರ್ ಕಾರ್ಡ್ ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ
UIDAI ನೀಡುರುವ 12 ಅಂಕಿಯ Aadhaar Card ಗೆ ಅದರದ್ದೇ ಆದ ಮಹತ್ವವಿದೆ. ನೀವು Aadhaar Card ನ ಮಾಹಿತಿಯನ್ನು ಮಾತ್ರ ಹೊಂದಿದ್ದರು ಸಾಕು ಯಾವುದೇ ಕೆಲಸವನ್ನಾದರೂ ಬಹಳ ಸುಲಭವಾಗಿ ಪೂರ್ಣಗೊಳಿಸಿಕೊಳ್ಳಬಹುದು. ಆದರೆ ನಿಮ್ಮ ಅಗತ್ಯ ಕೆಲಸಗಳಿಗೆ Aadhaar Card ಇಲ್ಲದಿದ್ದರೆ ನಿಮ್ಮ ಆ ಕೆಲಸ ಪೂರ್ಣಗೊಳ್ಳುವುದಿಲ್ಲ ಎನ್ನಬಹುದು.

Aadhaar Card ನ ಪರ್ಯಾಯವಾಗಿ ಬೇರೆ ಯಾವುದೇ ವೈಯಕ್ತಿಕ ದಾಖಲೆ ಕಾರ್ಯನಿರ್ವಹಿಸುವುದಿಲ್ಲ. ಕೆಲವೊಂದು ಸಮಯದಲ್ಲಿ Aadhaar Card ಕಳೆದು ಹೋಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಹೆಚ್ಚು ಚಿಂತೆ ಉಂಟಾಗುತ್ತದೆ. ಕಾರಣ ಆಧಾರ್ ನಲ್ಲಿ ಎಲ್ಲ ವೈಯಕ್ತಿಕ ಮಾಹಿತಿ ಇರುತ್ತದೆ. ವಂಚಕರ ಕೈ ಸೇರಿದರೆ ಅದರಿಂದ ದೊಡ್ಡ ಅನಾಹುತವೇ ಆಗುತ್ತದೆ ಎನ್ಬಹುದು. ಆದರೆ ಇನ್ನುಮುಂದೆ ನೀವು Aadhaar Card ಕಳೆದುಹೋದರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ ನೀವು ಸುಲಭ ವಿಧಾನದ ಮೂಲಕ Online ನಲ್ಲಿ Aadhaar Card ಗೆ ಅರ್ಜಿ ಸಲ್ಲಿಸಬಹುದು.

Aadhaar Card Latest Update 2024
Image Credit: Godigit

ಈ ರೀತಿ Online ಮೂಲಕ ಹೊಸ ಆಧಾರ್ ಪಡೆದುಕೊಳ್ಳಿ
•ಮೊದಲು UIDAI Website uidai.gov.in ಭೇಟಿ ನೀಡಿ.

Join Nadunudi News WhatsApp Group

•ನಂತರ Website ನಲ್ಲಿ ‘My Aadhaar’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

•My Aadhaar ಟ್ಯಾಬ್ ಅನ್ನು ಕ್ಲಿಕ್ ಮಾಡಿದ ನಂತರ ನೀವು ವಿಭಾಗದ ಅಡಿಯಲ್ಲಿ ‘Order Aadhaar Reprint’ ಆಯ್ಕೆ ಮಾಡಬಹುದು.

•ನಂತರ ಪರದೆಯ ಮೇಲೆ ಪ್ರದರ್ಶಿಸಲಾದ ಭದ್ರತಾ ಕೋಡ್ ಜೊತೆಗೆ 12-ಅಂಕಿಯ ಆಧಾರ್ ಸಂಖ್ಯೆ ಅಥವಾ ನಿಮ್ಮ 16-ಅಂಕಿಯ ವರ್ಚುವಲ್ ಐಡಿಯನ್ನು ನಮೂದಿಸಿ.

•ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಐಡಿಯನ್ನು ನಮೂದಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ನಂತರ ಈ OTP ಅನ್ನು ಅಲ್ಲಿ ನಮೂದಿಸಿ.

•OTP ಅನ್ನು ಪರಿಶೀಲಿಸಿದ ನಂತರ, ನಿಮ್ಮ ವಿವರಗಳನ್ನು ನೀವು ಪರಿಶೀಲಿಸಬಹುದಾದ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ. ಎಲ್ಲಾ ಮಾಹಿತಿಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ, ನಂತರ ನಿಮ್ಮ Aadhaar Card ಮರುಮುದ್ರಣಕ್ಕಾಗಿ ಪಾವತಿಯನ್ನು ಮಾಡಲು ಮುಂದುವರಿಯಿರಿ.

•ಪಾವತಿಯ ನಂತರ, ನೀವು ಸೇವಾ ವಿನಂತಿ ಸಂಖ್ಯೆಯೊಂದಿಗೆ (SRN) ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ. ನಿಮ್ಮ ಮರುಮುದ್ರಣ ವಿನಂತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ನೀವು ಈ SRN ಅನ್ನು ಬಳಸಬಹುದು.

Join Nadunudi News WhatsApp Group