Aadhaar Enrolment : ಇನ್ನುಮುಂದೆ ಆಧಾರ್ ಕಾರ್ಡಿಗೆ ಬೆರಳಚ್ಚಿನ ಅಗತ್ಯ ಇಲ್ಲ, ಆಧಾರ್ ನಿಯಮದಲ್ಲಿ ಬದಲಾವಣೆ

ಆಧಾರ್ ನೋಂದಣಿ ನಿಯಮದಲ್ಲಿ ಬದಲಾವಣೆ ಮಾಡಿದ UIDAI

Aadhaar Fingerprint Rules Updated: ದೇಶದಲ್ಲಿ ಪ್ರತಿ ವ್ಯಕ್ತಿಗೆ Aadhaar Card ಅಗತ್ಯವಾಗಿದೆ. ಯಾರೇ ಆಗಲಿ ಆಧಾರ್ ಕಾರ್ಡ್ ಅನ್ನು ಹೊಂದಿಲ್ಲದಿದ್ದರೆ ಅಂತವರ ಕೆಲಸಗಳು ಪೂರ್ಣಗೊಳ್ಳುವುದಿಲ್ಲ ಎನ್ನಬಹುದು. ಆಧಾರ್ ಕಾರ್ಡ್ ದೇಶದಲ್ಲಿ ಅಷ್ಟೊಂದು ಪ್ರಾಮುಖ್ಯತೆ ಇದೆ. ಇನ್ನು UIDAI ಆಗ ಆಧಾರ್ ಕಾರ್ಡ್ ಸಂಬಂಧಿತ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತದೆ.

ಸದ್ಯ UIDAI ಆಧಾರ್ ನೋಂದಣಿಯನ್ನು ಸುಲಭಗೊಳಿಸಲು ಮುಂದಾಗಿದೆ. ಆಧಾರ್ ನೋಂದಣಿಯಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. UIDAI ಹೊಸ ನಿಯಮ ಆಧಾರ್ ನೋಂದಣಿಯ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ. ಇದೀಗ ನಾವು UIDAI ಆಧಾರ್ ನೋಂದಣಿಯಲ್ಲಿ ಯಾವ ಬದಲಾವಣೆಯನ್ನು ತಂದಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Aadhar Card Update
Image Credit: Outlookindia

ಆಧಾರ್ ನೋಂದಣಿ ನಿಯಮದಲ್ಲಿ ಬದಲಾವಣೆ
ಸದ್ಯ ಆಧಾರ್ ನೋಂದಣಿ ಮಾಡಿಕೊಳ್ಳೂ ಬೆರಳಚ್ಚು (Biometric) ಕಡ್ಡಾಯವಾಗಿದೆ. ಆದರೆ ಕೆಲವರು ಅನಿವಾರ್ಯ ಕರಣಗಳಿದ ಬೆರಳಚ್ಚನ್ನು ನೀಡಲು ಸಾಧ್ಯವಾಗುವುದಿಲ್ಲ. ಬೆರಳಚ್ಚು ಅಷ್ಟೊಂದು ಸ್ಪಷ್ಟವಾಗಿ ಅಥವಾ ಅಂಗವೈಫಲ್ಯವನ್ನು ಹೊಂದಿದ್ದವರ ಅಂತವರ ಬೆರಳಚ್ಚನ್ನು ಪಡೆಯುವು ಕಷ್ಟವಾಗುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಬೆರಚ್ಚನ್ನು ನೀಡಲು ಸಾಧ್ಯವಾಗದವರು ಆಧಾರ್ ಕಾರ್ಡ್ ನೋಂದಣಿ ಮಾಡಲು ಅನುಕೂಲ ಆಗಬೇಕು ಎನ್ನುವ ಕಾರಣಕ್ಕೆ UIDAI ಆಧಾರ್ ನೋಂದಣಿಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

Aadhaar Enrolment Latest News
Image Credit: Godigit

ಇನ್ನುಮುಂದೆ ಆಧಾರ್ ನೋಂದಣಿಗೆ ಬೆರಳಚ್ಚಿನ ಅಗತ್ಯ ಇಲ್ಲ
ಆಧಾರ್‌ ಗೆ ಅರ್ಹರಾಗಿದ್ದರೂ ಫಿಂಗರ್‌ ಪ್ರಿಂಟ್‌ ಗಳನ್ನು ಒದಗಿಸಲು ಸಾಧ್ಯವಾಗದ ವ್ಯಕ್ತಿಯು IRIS ಸ್ಕ್ಯಾನ್ ಬಳಸಿ ಮಾತ್ರ ನೋಂದಾಯಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ IRIS ಅನ್ನು ತೆಗೆದುಕೊಳ್ಳಲಾಗದ ಅರ್ಹ ವ್ಯಕ್ತಿ ತನ್ನ ಬೆರಳಚ್ಚು ಬಳಸಿ ಮಾತ್ರ ನೋಂದಾಯಿಸಿಕೊಳ್ಳಬಹುದು. ಬೆರಳು ಮತ್ತು ಐರಿಸ್ ಬಯೋಮೆಟ್ರಿಕ್ಸ್ ಎರಡನ್ನೂ ಒದಗಿಸಲು ಸಾಧ್ಯವಾಗದ ವ್ಯಕ್ತಿಯ ಹೆಸರು, ಲಿಂಗ, ವಿಳಾಸ, ಹುಟ್ಟಿದ ದಿನಾಂಕವು ಲಭ್ಯವಿರುವ ಬಯೋಮೆಟ್ರಿಕ್‌ ಗಳೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು UIDAI ಹೇಳಿದೆ.

Join Nadunudi News WhatsApp Group

Join Nadunudi News WhatsApp Group