Aadhaar Image Change: ಆಧಾರ್ ಕಾರ್ಡಿನ ನಿಮ್ಮ ಹಳೆಯ ಫೋಟೋ Online ಮೂಲಕ ಬದಲಾಯಿಸುವುದು ಹೇಗೆ..? ಇಲ್ಲಿದೆ ವಿಧಾನ.

ಆಧಾರ್ ಕಾರ್ಡಿನ ನಿಮ್ಮ ಹಳೆಯ ಫೋಟೋ Online ಮೂಲಕ ಬದಲಾಯಿಸುವುದು ಹೇಗೆ..?

Aadhaar Photo Change Online Process:  Aadhaar Card ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿದೆ. ಭಾರತೀಯ ಪ್ರಜೆಯಾಗಿರುವವರಿಗೆ ಗುರುತಿನ ಪುರಾವೆಗಾಗಿ Aadhar Card ಅನ್ನು ಹೊಂದುವುದು ಅಗತ್ಯವಾಗಿದೆ. ಯಾವುದೇ ರೀತಿಯ ಕೆಲಸ ಆಗಬೇಕಿದ್ದರು ಕೂಡ Aadhar Card ಮುಖ್ಯ ಪುರಾವೆಯಾಗಿದೆ.ಇನ್ನು UIDAI ಇತ್ತೀಚಿಗೆ Aadhar Card ನಲ್ಲಿ ವಿವಿಧ ಸೌಲಭ್ಯವನ್ನು ನೀಡುತ್ತಿದೆ. UIDAI Aadhar Card ಉಚಿತ ನವೀಕರಣದ ಸೌಲಭ್ಯವನ್ನುಮಾರ್ಚ್ 14 ರ ವರೆಗೆ ನೀಡುತ್ತಿದೆ.

Aadhaar Photo Change Online Process
Image Credit: Hindustan Times

Aadhar Card ನಲ್ಲಿರುವ ನಿಮ್ಮ ಫೋಟೋವನ್ನು ಬದಲಾಯಿಸಬೇಕೇ…?
ಇನ್ನು Online ನ ಮೂಲಕ Aadhar Card ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ತಪ್ಪಗಳನ್ನು ಸರಿಪಡಿಸಲು ಅವಕಾಶ ನೀಡಲಾಗುತ್ತಿದೆ. Online Website ನಲ್ಲಿ ಆಹಾರ ಹೊಂದಿರುವವರು ತಮ್ಮ Aadhar Card ಅನ್ನು ನವೀಕರಣ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಇದೀಗ ನಿಮ್ಮ Aadhar Card ಅಲ್ಲಿನ ಹಳೆಯ ಫೋಟೋವನ್ನು ಕೂಡ ಬದಲಿಸಿಕೊಳ್ಲಲು UIDAI ಅವಕಾಶವನ್ನು ಮಾಡಿಕೊಟ್ಟಿದೆ. ಸುಲಭ ವಿಧಾನದ ಮೂಲಕ ನೀವು ಮನೆಯಲ್ಲಿ ಕುಳಿತು ನಿಮ್ಮ ಹಳೆಯ ಫೋಟೋವನ್ನು ಬದಲಿಸಿಕೊಳ್ಳಬಹುದು. ನಿಮ್ಮ Aadhar Card ನಲ್ಲಿನ ಫೋಟೋವನ್ನು ಬದಲಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

Aadhaar Card Photo Change
Image Credit: Businessleague

ಆಧಾರ್ ಕಾರ್ಡಿನ ನಿಮ್ಮ ಹಳೆಯ ಫೋಟೋ Online ಮೂಲಕ ಬದಲಾಯಿಸುವುದು ಹೇಗೆ..?
*Aadhar Card ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ಬದಲಾಯಿಸಿಕೊಳ್ಳಲು UIDAI ನ ಅಧಿಕೃತ WebSite https://uidai.gov.in/en/ ಗೆ ಭೇಟಿ ನೀಡಬೇಕು.

*Online ನಲ್ಲಿ ಆಧಾರ್ ದಾಖಲಾತಿ ಕೇಂದ್ರವನ್ನು ಜಿಲ್ಲೆಯೊಂದಿಗೆ ಆಯ್ಕೆ ಮಾಡಿಕೊಳ್ಳಿ.

Join Nadunudi News WhatsApp Group

*ಆಧಾರ್ ನಲ್ಲಿನ ಫೋಟೋ ಬದಲಾವಣೆಗೆ ಸಂಬಂಧಿಸಿದ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ, ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಆಧಾರ್ ನೋಂದಣಿ ಕೇಂದ್ರಕ್ಕೆ ಸಲ್ಲಿಸಬೇಕು.

*ಆಧಾರ್ ಕೇಂದ್ರದಲ್ಲಿ ನಿಮ್ಮ ಬಯೋಮೆಟ್ರಿಕ್ ವಿವರವನ್ನು ಸಂಗ್ರಹಿಸಲಾಗುತ್ತದೆ.

*ಅಧಿಕಾರಿಗಳು ನಿಮ್ಮ ಲೈವ್ ಫೋಟೋವನ್ನು ತೆಗೆದುಕೊಳ್ಳುತ್ತಾರೆ.

*ಈ ಪ್ರಕ್ರಿಯೆಗೆ 100 ರೂ. ಹಣವನ್ನು ಪಾವತಿಸಬೇಕಾಗುತ್ತದೆ.

UIDAI Aadhar Card Update
Image Credit: TV9 Telugu

*ಆಧಾರ್ ಕೇಂದ್ರದಿಂದ ನೀವು URN ಸಂಖ್ಯೆಯ ಸ್ವೀಕೃತಿ ಸ್ಲಿಪ್ ಅನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಫೋಟೋ ನವೀಕರಣ ಪ್ರಕ್ರಿಯೆಯನ್ನು ಪರಿಶೀಲಿಸಿಕೊಳ್ಳಬಹುದು.

*ಆಧಾರ್ ನವೀಕರಣ ಪ್ರಕ್ರಿಯೆ ಪೂರ್ಣಗೊಂಡ 72 ಗಂಟೆಗಳ ನಂತರ ನೀವು UIDAI website ಗೆ ಭೇಟಿ ನೀಡುವ ಮೂಲಕ Aadhar Card ನ ನಕಲನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group