Aadhaar Update: ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದ ಇನ್ನೊಂದು ಎಚ್ಚರಿಕೆ, ಮಾರ್ಚ್ 14 ರೊಳಗೆ ಈ ಕೆಲಸ ಮುಗಿಸಿಕೊಳ್ಳಿ

Aadhar Card ಹೊಂದಿರುವವರು ಮಾರ್ಚ್ 14 ರೊಳಗೆ ಈ ಕೆಲಸ ಮಾಡುವುದು ಅಗತ್ಯವಾಗಿದೆ.

Aadhaar Update Information: ಪ್ರಸ್ತುತ ದೇಶದಲ್ಲಿ Aadhaar Card ಮುಖ್ಯ ದಾಖಲೆಗಳಲ್ಲಿ ಮೊದಲನೆಯದ್ದಾಗಿದೆ ಎನ್ನಬಹುದು. ಅನೇಕ ರೀತಿಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು Aadhaar Card ಅಗತ್ಯವಿದೆ. ಇನ್ನು 5 ವರ್ಷದ ಒಳಗಿನ ಮಕ್ಕಳಿಗೂ ಕೂಡ Aadhaar Card ಮಾಡಿಸಲು UIDAI ನಿಯಮ ರೂಪಿಸಿದೆ. ದೇಶದ ಪ್ರತಿಯೊಬ್ಬ ಪ್ರಜೆಯು Aadhar Card ಅನ್ನು ಹೊಂದುವುದು ಕಡ್ಡಾಯ ಎನ್ನಬಹುದು.

ಸದ್ಯ ಕೇಂದ್ರ ಸರ್ಕಾರದಿಂದ Aadhaar Card ನವೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. Aadhaar Card ಹೊಂದಿರುವವರು ಆದಷ್ಟು ಬೇಗ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

Aadhaar Update Information
Image Credit: Smfgindiacredit

ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದ ಇನ್ನೊಂದು ಎಚ್ಚರಿಕೆ
ಸದ್ಯ UIDAI ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. Online Portal ಭೇಟಿ ನೀಡುವ ಮೂಲಕ ಬಳಕೆದಾರರು ತಮ್ಮ ಹೆಸರು, ವಿಳಾಸ, ಲಿಂಗ, ಫೋನ್ ಸಂಖ್ಯೆ, ಲಿಂಗ ಮತ್ತು Email ಇತ್ಯಾದಿಯನ್ನು ಉಚಿತವಾಗಿ ಬದಲಾಯಿಸಬಹುದಾಗಿದೆ. ಈ ಹಿಂದೆ ಬಳಕೆದಾರರು ತಮ್ಮ ದಾಖಲೆಗಳನ್ನು ಉಚಿತವಾಗಿ ನವೀಕರಿಸಲು ಡಿಸೇಂಬರ್ 14 ಕೊನೆಯ ದಿನಾಂಕವಾಗಿತ್ತು. ಇನ್ನು ಕೂಡ ಆಧಾರ್ ನವೀಕರಣ ಮಾಡದವರಿಗೆ UIDAI ಇನ್ನೊಂದು ಅವಕಾಶವನ್ನು ನೀಡಿತ್ತು. ಡಿಸೇಂಬರ್ ನಿಂದ ಮಾರ್ಚ್ 14 2024 ರ ತನಕ ಉಚಿತ ಆಧಾರ್ ನವೀಕರಣಕ್ಕೆ UIDAI ಅವಕಾಶ ನೀಡಿದೆ. ಇದೀಗ ಗಡುವು ಹತ್ತಿರವಾಗುತ್ತಿದ್ದಂತೆ ಸರ್ಕಾರ ಜನರಿಗೆ ಎಚ್ಚರಿಕೆಯ ಸಂದೇಶ ಕಳುಹಿಸಿದೆ.

ಮಾರ್ಚ್ 14 ರೊಳಗೆ ಈ ಕೆಲಸ ಮುಗಿಸಿಕೊಳ್ಳಿ
ಹತ್ತು ವರ್ಷಗಳ ಹಿಂದೆ ಮಾಡಿಸಲಾದ Aadhaar Card ನವೀಕರಣ ಕಡ್ಡಾಯವಾಗಿದೆ. ಎಲರೂ ಕೂಡ ಉಚಿತವಾಗಿ ಮಾರ್ಚ್ 14 ರ ತನಕ Aadhaar ನವೀಕರಣವನ್ನು ಮಾಡಿಕೊಳ್ಳಬಹುದು. ಈಗಾಗಲೇ UIDAI ಸಾಕಷ್ಟು ಬಾರಿ ಈ ಗಡುವನ್ನು ವಿಸ್ತರಿಸಿದೆ. ಇನ್ನು ಮತ್ತೆ ವಿಸ್ತರಿಸಲು ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಈ ಬಾರಿ ಕೊನೆಯ ದಿನಾಂಕದೊಳಗೆ ಮಾತ್ರ ನವೀಕರಣ ಮಾಡಿಕೊಂಡರೆ ಉಚಿತವಾಗಿರುತ್ತದೆ. ಉಚಿತ ನವೀಕರಣಕ್ಕೆ ಇನ್ನು ಕೇವಲ 20 ದಿನಗಳು ಮಾತ್ರ ಬಾಕಿ ಇದೆ. 20 ದಿನದ ಬಳಿಕ ನೀವು Aadhaar ನವೀಕರಣಕ್ಕೆ ಮುಂದಾದರೆ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Aadhaar Update Last Date
Image Credit: Godigit

Online ಅಲ್ಲಿ Aadhaar Card ಅನ್ನು ಈ ರೀತಿಯಾಗಿ ನವೀಕರಿಸಿ
*ಮೊದಲು UIDAI Website ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ ನನ್ನ ಆಧಾರ್ ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

*ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

Join Nadunudi News WhatsApp Group