UIDAI Update: ಆಧಾರ್ ಕಾರ್ಡ್ ಅನ್ನು ಒಟ್ಟು ಎಷ್ಟು ಬಾರಿ ಅಪ್ಡೇಟ್ ಮಾಡಬಹುದು…? ನಿಯಮಗಳು ಏನು…?

UIDAI ನಿಯಮಗಳ ಪ್ರಕಾರ ಇಷ್ಟು ಬಾರಿ ಮಾತ್ರ ಆಧಾರ್ ಮಾಹಿತಿಯನ್ನು ನವೀಕರಣ ಮಾಡಬಹುದು...?

Aadhaar Update Rules And Regulations: UIDAI ಆಧಾರ್ ಕಾರ್ಡ್ (AAdhaar Card) ಹೊಂದಿರುವ ಪ್ರತಿಯೊಬ್ಬರಿಗೂ ಆಗಾಗ ಹೊಸ ಹೊಸ ನಿಯಮವನ್ನು ಸೂಚಿಸುತ್ತ ಇರುತ್ತಾರೆ. ಭಾರತೀಯ ಪ್ರಜೆಯಾದವರು ಆಧಾರ್ ಮಾಹಿತಿ ಹೊಂದುವುದು ಕಡ್ಡಾಯ. ಇನ್ನು ಯಾವುದೇ ಸರ್ಕಾರೀ ಅಥವಾ ಸರ್ಕಾರೇತರ ಕೆಲಸಗಳು ಆಧಾರ್ ಕಾರ್ಡ್ ಇಲ್ಲದೆ ಪೂರ್ಣಗೊಳ್ಳುವುದಿಲ್ಲ.

ಈ ಕಾರಣಕ್ಕೆ UIDAI ಆಧಾರ್ ಅಪ್ಡೇಟ್ ಅನ್ನು ಕಡ್ಡಾಗೊಳಿಸಿದೆ. ಡಿ. 14 ರೊಳಗೆ ನೀವು ಆಧಾರ್ ಅಪ್ಡೇಟ್ ಮಾಡಿಸಲು UIDAI ಯಾವುದೇ ಶುಲ್ಕವನ್ನು ವಿಧಿಸಿಲ್ಲ. ಸದ್ಯ ಉಚಿತ ಆಧಾರ್ ನವೀಕರಣ ಸೌಲಭ್ಯವನ್ನು ಒದಗಿಸಿರುವ UIDAI ಇದೀಗ ಆಧಾರ್ ಮಾಹಿತಿ ತಿದ್ದುಪಡಿಯ ಬಗ್ಗೆ ಮಹತ್ವದ ನಿಯಮವನ್ನು ರೂಪಿಸಿದೆ. UIDAI ನಿಯಮಗಳ ಪ್ರಕಾರ ಇಷ್ಟು ಬಾರಿ ಮಾತ್ರ ಆಧಾರ್ ಮಾಹಿತಿಯನ್ನು ನವೀಕರಣ ಮಾಡಲು ಸಾಧ್ಯವಾಗುತ್ತದೆ ಅನ್ನುವುದರ ಬಗ್ಗೆ ತಿಳಿಯೋಣ.

Aadhaar Card Update
Image Credit: The Economic Times

ಆಧಾರ್ ನಲ್ಲಿನ ಮಾಹಿತಿ ಬದಲಾವಣೆಗೆ UIDAI ನಿಯಮ
ಇನ್ನು ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆನ್ಲೈನ್ ನಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನು ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳು ಆಗುತ್ತವೆ. ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯಲ್ಲಿ ತಪ್ಪಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ UIDAI ಸೂಚನೆ ನೀಡಿದೆ.

ಆಧಾರ್ ತಿದ್ದುಪಡಿಗೆ UIDAI ನಿಯಮವೇನೂ..?
ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಬಯೋಮೆಟ್ರಿಕ್, ಪಿಂಗರ್ ಫ್ರಿನ್ಟ್ ಹಾಗೂ ಫೋಟೋವನ್ನು ಕೂಡ ನವೀಕರಿಸಬಹುದು. ಇನ್ನು UIDAI ಆನ್ಲೈನ್ ನ ಮುಕಾಂತರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಹಾಗೂ ಹೆಸರನ್ನು ಬದಲಾವಣೆ ಸೇರಿದಂತೆ ಇನ್ನಿತರ ಅಪ್ಡೇಟ್ ಗೆ ಮಿತಿಯನ್ನು ಅಳವಡಿಸಿದೆ. ಮಿತಿಗಿಂತ ಹೆಚ್ಚು ಬಾರಿ ಮಾಹಿತಿಯನ್ನು ಬದಲಿಸುವ ಅಗತ್ಯವಿದ್ದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಬದಲಿಸಿಕೊಳ್ಳಬಹುದು.

UIDAI Update
Image Credit: Zeenews

ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು..?
•ಜನ್ಮ ದಿನಾಂಕ ಮತ್ತು ಹೆಸರಿನ ಬದಲಾವಣೆಯನ್ನು ಎರಡು ಬಾರಿ ಮಾತ್ರ ಮಾಡಲು ಸಾಧ್ಯ.

Join Nadunudi News WhatsApp Group

•ಆಧಾರ್ ಕಾರ್ಡ್ ನಲ್ಲಿನ ಲಿಂಗ ಬದಲಾವಣೆ ಒಮ್ಮೆ ಮಾತ್ರ ಮಾಡಲು ಸಾಧ್ಯ.

•ಇನ್ನು ಮೊಬೈಲ್ ಸಂಖ್ಯೆಯ ಬದಲಾವಣೆಗೆ ಯಾವುದೇ ಮಿತಿ ಇಲ್ಲ.

•ಇನ್ನು ಆಧಾರ್ ನಲ್ಲಿನ ವಿಳಾಸ ಬದಲಾವಣೆ ಹೆಚ್ಚಿನ ಜನರು ಮಾಡುತ್ತಾರೆ. ಆಧಾರ್ ವಿಳಾಸ ಬದಲಾವಣೆಗೆ UIDAI ಯಾವುದೇ ಮಿತಿ ನಿಗದಿಪಡಿಸಿಲ್ಲ. ನೀವು ಎಷ್ಟು ಬರಿ ಬೇಕಾದರೂ ಆಧಾರ್ ನಲ್ಲಿನ ವಿಳಾಸವನ್ನು ಬದಲಾಯಿಸಬಹುದು .

•ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿನ ಫೋಟೋವನ್ನು ಬದಲಿಸಲು ಮುಖ್ಯವಾಗಿ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಫಾರ್ಮ್ ನಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದರೆ ಆಧಾರ್ ಸೇವಾ ಸಿಬ್ಬಂದಿಗಳು ನಿಮ ಫೋಟೋವನ್ನು ಕ್ಯಾಪ್ಚಾರ್ ಮಾಡಿ ಅಪ್ಡೇಟ್ ಮಾಡಿಕೊಡುತ್ತಾರೆ.

Join Nadunudi News WhatsApp Group