Aadhar And Pan Link: ಪ್ಯಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದವರಿಗೆ ಹೊಸ ಸುದ್ದಿ, ಸರ್ಕಾರ ಮಹತ್ವದ ನಿರ್ಧಾರ.

ಇದೀಗ ಕೆಲವರು 1000 ರೂ. ಪಾವತಿಸಿದರು ಸಹ ನಿಮ್ಮ ಆಧಾರ್ ಕಾರ್ಡ್ ಪಾನ್ ನೊಂದಿಗೆ ಲಿಂಕ್ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Aadhar And Pan Link New Update: ಕೆಲವು ತಿಂಗಳುಗಳ ಹಿಂದೆ ಆಧಾರ್ ಕಾರ್ಡ್ (Aadhar Card) ಹಾಗು ಪಾನ್ ಕಾರ್ಡ್ (Pan Card) ಲಿಂಕ್ ಸಂಭಂದಿತ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದವು. ಇನ್ನು ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಯ ದಿನಾಂಕವನ್ನು ಕೂಡ ವಿಸ್ತರಿಸಿತ್ತು. ಇನ್ನು ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಸರಕಾರ 1000 ದಂಡ ವಿಧಿಸಿತ್ತು. ಆದರೆ ಇದೀಗ ಕೆಲವರು 1000 ರೂ. ಪಾವತಿಸಿದರು ಸಹ ನಿಮ್ಮ ಆಧಾರ್ ಕಾರ್ಡ್ ಪಾನ್ ನೊಂದಿಗೆ ಲಿಂಕ್ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Aadhar And Pan Link New Update
Image Source: Zee News

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ 1000 ದಂಡ
ಈ ಹಿಂದೆ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನವಾಗಿತ್ತು.ಆದರೆ ಜನಸಾಮಾನ್ಯರ ಕಷ್ಟವನ್ನು ಅರಿತು ಸರಕಾರ ಈ ಗಡುವನ್ನು ಜೂನ್ 30 ರ ತನಕ ವಿಸ್ತರಿಸಿದರೆ. ಆದರೆ ದಿನಾಂಕದ ಗಡುವನ್ನು ಮಾತ್ರ ವಿಸ್ತರಿಸಲಾಗಿದೆ. 1000 ದಂಡ ಪಾವತಿಸುವಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಇನ್ನು ಸಹ 1000 ಪಾವತಿಸಿ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ 1000 ಪಾವತಿಸಿದರು ಕೂಡ ಕೆಲವರ ಆಧಾರ್ ಕಾರ್ಡ್ ಪಾನ್ ಕಾರ್ಡ್ ನೊಂದಿಗೆ ಲಿಂಕ್ ಆಗುತ್ತಿಲ್ಲ.

Aadhar And Pan Link New Update
Image Source: News Today

ಪ್ಯಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದವರಿಗೆ ಹೊಸ ಸುದ್ದಿ
ಮೊದಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವ ಅವಕಾಶವೂ 31 ಮಾರ್ಚ್ 2023 ರವರೆಗೆ ಇದ್ದಿತ್ತು. ಆದಾಯ ತೆರಿಗೆ ಇಲಾಖೆಯು ಮೌಲ್ಯಮಾಪನ ವರ್ಷದ ಆಯ್ಕೆಯನ್ನು ಬದಲಾಯಿಸಿದೆ. ಆದ್ದರಿಂದ ಮೌಲ್ಯಮಾಪನ ವರ್ಷ 2023-24 ಅನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಹೊಸ ವರ್ಷ ಪ್ರಾರಂಭವಾಗಿದೆ. ಆದ್ದರಿಂದ ಮೌಲ್ಯಮಾಪನ ವರ್ಷ 2024-25 ಅನ್ನು ಆಯ್ಕೆ ಮಾಡಬೇಕಾಗಿದೆ. ಪಾವತಿಯ ಪ್ರಕಾರವನ್ನು ಇತರೆ ರಸೀದಿಗಳು 500 ಆಯ್ಕೆಯಾಗಿ ಆಯ್ಕೆ ಮಾಡಬೇಕು. ಈ ಬದಲಾವಣೆಗಳನ್ನು ಗಮನಿಸದೆ ದಂಡವನ್ನು ಪಾವತಿಸಿದರೆ ನೀವು ತೊಂದರೆಯನ್ನು ಎದುರಿಸಬೇಕಾಗುತ್ತದೆ.

Aadhar And Pan Link New Update
Image Source: Zee News

Join Nadunudi News WhatsApp Group

Join Nadunudi News WhatsApp Group