Aadhar Card Update: ಈಗ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕ ಉಚಿತವಾಗಿ ಬದಲಾಯಿಸಬಹುದು.

ಈಗ ಯಾವುದೇ ಶುಲ್ಕವನ್ನ ನೀಡದೆ ಆಧಾರ್ ಕಾರ್ಡ್ ನಲ್ಲಿ ಇರುವ ಹಲವು ಮಾಹಿತಿಯನ್ನ ಬದಲಾಯಿಸಬಹುದು.

Aadhar Card Address Change Online Process: ಇತ್ತೀಚಿನ ದಿನಗಳಲ್ಲಿ ಯುಐಡಿಎಐ (UIDAI) ಆಧಾರ್ ಕಾರ್ಡ್ (Aadhar Card) ಸಂಭಂದಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಆಧಾರ್ ಕಾರ್ಡ್ ವ್ಯಕ್ತಿಯ ಪ್ರಮುಖ ದಾಖಲೆಯಾಗಿದೆ.

ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಇನ್ನು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪಿದ್ದಲ್ಲಿ ನೀವು ಮನೆಯಲ್ಲಿ ಕುಳಿತು ಆಧಾರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಈ ಸುಲಭ ವಿಧಾನದ ಮೂಲಕ ಆಧಾರ್ ತಿದ್ದುಪಡಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು.

Aadhar Card Address Change Online Process
Image Credit: news18

ಉಚಿತ ಆಧಾರ್ ಕಾರ್ಡ್ ನವೀಕರಣ
ಇನ್ನು ಇತ್ತೀಚೆಗಷ್ಟೇ ಯುಐಡಿಎಐ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಜೂನ್ 14 ರತನಕ ಆಧಾರ್ ನವೀಕರಣ ಪ್ರಕ್ರಿಯೆ ಉಚಿತವಾಗಿ ಸಿಗಲಿದೆ. ನಿಮ್ಮ ಆಧಾರ್ ಕಾರ್ಡ್ ನವೀಕರಣ ಬಾಕಿ ಇದ್ದರೆ ಇಂದೇ ಆಧಾರ್ ಕೇಂದ್ರಕ್ಕೆ ತೆರಳಿ ನವೀಕರಿಸಿಕೊಳ್ಳಿ. ಜೂನ್ 14 ರ ನಂತರ ಆಧಾರ್ ನವೀಕರಣಕೆ ಶುಲ್ಕ ಪಾವತಿಸಬೇಕಾಗುತ್ತದೆ.

ಮೈ ಆಧಾರ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲಿ ಆಧಾರ್ ಅನ್ನು ನವೀಕರಿಸಿಕೊಳ್ಳಬಹುದು. https://myaadhaar.uidai.gov.in / ಗೆ ಭೇಟಿ ನೀಡುವ ಮೂಲಕ ಆಧಾರ್ ವಿವರ ಮತ್ತು ವಿಳಾಸದ ದಾಖಲೆಗಳನ್ನು ಆನ್ಲೈನ್ ನಲ್ಲಿ ಫ್ರೀ ಆಫ್ ಕಾಸ್ಟ್ ನಲ್ಲಿ ನವೀಕರಿಸಿಕೊಳ್ಳಬಹುದು. ಮಾರ್ಚ್ 15 ರಿಂದ ಜೂನ್ 14 ರತನಕ ಮಾತ್ರ ಈ ಉಚಿತ ಸೇವೆ ಲಭ್ಯವಿದೆ.

Now many information in Aadhaar card can be changed without paying any fee.
Image Credit: slate

ಆಧಾರ್ ಕಾರ್ಡ್ ನಲ್ಲಿ ಇತರ ವಿಳಾಸ ಬದಲಾಯಿಸುವ ವಿಧಾನ
* https://myaadhaar.uidai.gov.in / ನಲ್ಲಿ ಲಾಗಿನ್ ಮಾಡಬೇಕು.
*ಅಲ್ಲಿ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ವಿವರವನ್ನು ನೀಡಲಾಗುತ್ತದೆ.
*ವಿವರಗಳನ್ನು ಪರಿಶೀಲಿಸಿದ ನಂತರ ಹೈಪರ್ ಲಿಂಕ್ ಅನ್ನು ಆಯ್ಕೆ ಮಾಡಬೇಕು.
*ಡ್ರಾಫ್ ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕು
*ನಂತರ ಸ್ಕಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ನಂತರ ಶುಲ್ಕ ಪಾವತಿ ಆಯ್ಕೆ ಆರಿಸಬೇಕು.

Join Nadunudi News WhatsApp Group

Join Nadunudi News WhatsApp Group