Aadhar Card: ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ, ಕೇಂದ್ರ ಸರ್ಕಾರದ ಘೋಷಣೆ.

ಜನನ ಮರಣ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ, ಸರ್ಕಾರದ ಘೋಷಣೆ.

Aadhar Cards Birth and Death Registration: ಸಾಮಾನ್ಯವಾಗಿ ಎಲ್ಲರಿಗು ಜನನ ಮರಣ ನೋಂದಣಿಯ (Birth and Death Registration) ವಿವರವನ್ನು ಹೊಂದಿರಬೇಕು. ಪ್ರತಿಯೊಬ್ಬರ ಜನನ ಮತ್ತು ಮರಣ ನೊಂದಣಿ ಇರಬೇಕು. ಇನ್ನು ದೇಶದಲ್ಲಿ ಜನನ ಮತ್ತು ಮರಣ ನೋಂದಣಿಗೆ ವಿವಿಧ ನಿಯಮಗಳನ್ನು ಅಳವಡಿಸಲಾಗಿದೆ.

ಇನ್ನು ವ್ಯಕ್ತಿಯ ವೈಯಕ್ತಿಕ ದಾಖಲೆಗಳಲ್ಲಿ ಆಧಾರ್ ಕಾರ್ಡ್ (Aadhar Card) ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆಧಾರ್ ಕಾರ್ಡ್ ಎಲ್ಲ ರೀತಿಯ ಕೆಲಸಗಳಿಗೆ ಮುಖ್ಯ ಧಾಖಲೆಯಾಗಿದೆ. ಈ ಹಿಂದೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿತ್ತು. ಇದೀಗ ಸರ್ಕಾರ ಈ ಕುರಿತು ಮಹತ್ವದ ಆದೇಶವನ್ನು ಹೊರಡಿಸಿದೆ. 

Aadhaar card is no longer mandatory for birth and death certificates
Image Credit: navi

ಜನನ ಮರಣ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನನ ಮತ್ತು ಮರಣಗಳ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರವನ್ನು ಧ್ರಡೀಕರಿಸಲು ಆಧಾರ್ ಡೇಟಾ ಬೇಸ್ ಅನ್ನು ಬಳಸಲು RGI ಕಚೇರಿಗೆ ಅನುಮತಿ ನೀಡಿದೆ.

ಈ ವೇಳೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ ಎಂದು ಮಾಹಿತಿ ನೀಡಿದೆ. ಇನ್ನುಮುಂದೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಾರ್ಡ್ ಅಗತ್ಯ ಇರುವುದಿಲ್ಲ. ಆಧಾರ್ ಕಾರ್ಡ್ ಇಲ್ಲದೇನೆ ವ್ಯಕ್ತಿಯ ಜನನ ಮತ್ತು ಮರಣ ನೋಂದಣಿಯನ್ನು ಮಾಡಿಸಬಹುದು.

The central government said that Aadhaar card is not mandatory for obtaining birth and death certificates
Image Credit: navi

ಜನನ ಮತ್ತು ಮರಣ ನೋಂದಣಿ ಕಾಯ್ದೆ
ಜನನ ಮತ್ತು ಮರಣ ನೋಂದಣಿ ಕಾಯ್ದೆ ಅಡಿಯಲ್ಲಿ ಹೇಳಿಕೆ ನೀಡಲಾಗಿದೆ. ಜನನ ಮತ್ತು ಮರಣದ ವರದಿಯಲ್ಲಿ ಕೇಳಲಾದ ಇತರ ವಿವರಗಳೊಂದಿಗೆ ಆಧಾರ್ ಸಂಖ್ಯೆಯನ್ನು ಪರಿಶೀಲಿಸುವುದು ಸ್ವಯಂ ಪ್ರೇರಿತ ಆಧಾರದ ಮೇಲೆ ಆಧಾರ್ ಧ್ರಡೀಕರಣವನ್ನು ಮಾಡಲು ನೇಮಕಗೊಂಡ ರಿಜಿಸ್ಟರ್ ಗೆ ಅನುಮತಿ ನೀಡಲಾಗುತ್ತದೆ.

Join Nadunudi News WhatsApp Group

ಕೇಂದ್ರ ಸರ್ಕಾರವು ಉತ್ತಮ ಆಡಳಿತವನ್ನು ಉತ್ತೇಜಿಸಲು ಘಟಕಗಳನ್ನು ವಿನಂತಿಸುವ ಮೂಲಕ ಆಧಾರ್ ಧ್ರಡೀಕರಣವನ್ನು ಅನುಮತಿಸಬಹುದು ಆದರೆ ಕಡ್ಡಾಯವಾಗುವುದಿಲ್ಲ ಎಂದು ವರದಿ ನೀಡಲಾಗಿದೆ.

Join Nadunudi News WhatsApp Group