Aadhar Card Use: ಈಗ ಆಧಾರ್ ಕಾರ್ಡ್ ಬಳಸಿಕೊಂಡು ಈ ಎಲ್ಲಾ ಕೆಲಸ ಮಾಡಬಹುದು, ಸ್ಪಷ್ಟನೆ ಕೊಟ್ಟ ಕೇಂದ್ರ.

ಆಧಾರ್ ಕಾರ್ಡ್ ಮೂಲಕ ಈಗ ಹಲವು ಕೆಲಸಗಳನ್ನ ಮಾಡಬಹುದಾಗಿದೆ.

Aadhar Card Usage In India: ಆಧಾರ್ ಕಾರ್ಡ್ (Aadhar Card) ಜನರಿಗೆ ಒಂದು ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಿಂದ ಜನರು ತಮ್ಮ ಹಲವು ಕೆಲಸಗಳನ್ನು ಮಾಡಬಹುದು. ಒಂದು ವೇಳೆ ಯಾವುದಾದರೂ ಒಬ್ಬ ವ್ಯಕ್ತಿ ಆಧಾರ ಕಾರ್ಡ್ ಹೊಂದದೆ ಇದ್ದರೆ ಅವನಿಗೆ ಸರ್ಕಾರ ಯಾವ ಸೌಲಭ್ಯವು ಸಹ ಸಿಗುವುದಿಲ್ಲ.

ಆಧಾರ್ ಕಾರ್ಡ್ ಬರಿ ದೊಡ್ಡ ವ್ಯಕ್ತಿಗಳಿಗೆ ಮಾತ್ರವಲ್ಲದೆ 5 ವರ್ಷದ ನಂತರದ ಮಕ್ಕಳಿಗೂ ಸಹ ಇದೆ. ಮಕ್ಕಳ ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ.

aadhar card latest news
Image Credit: navi

ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ಸುದ್ದಿ
ಇದೀಗ ಹಣಕಾಸು ಸಚಿವಾಲಯವು ಅಮೆಜಾನ್ ಪೆ ಮತ್ತು ಹೀರೊ ಪಿನ್ ಕಾರ್ಪ್ ಸೇರಿದಂತೆ 22 ಹಣಕಾಸು ಕಂಪನಿಗಳಿಗೆ ಆಧಾರ್ ಸಂಖ್ಯೆಗಳ ಮೂಲಕ ಗ್ರಾಹಕರನ್ನು ಪರಿಶೀಲಿಸಲು ಅನುಮತಿ ನೀಡಿದೆ.

ಈ 22 ಕಂಪನಿಗಳು ಇನ್ನುಮುಂದೆ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಗ್ರಾಹಕರ ಗುರುತು ಮತ್ತು ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗಲಿದೆ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಆಧಾರ್ ನೊಂದಿಗೆ ಪರಿಶೀಲನೆ ಪ್ರಕ್ರಿಯೆಯು ಸ್ವಲ್ಪ ಸುಲಭವಾಗಲಿದೆ.

The central government has clarified that from now on many financial transactions can be done using Aadhaar card.
Image Credit: timesofindia

ಸರ್ಕಾರದಿಂದ ಹೊಸ ನಿಯಮ
ಬ್ಯಾಂಕಿಂಗ್ ವಲಯದಲ್ಲಿ ಆಧಾರ್ ಕಾರ್ಡ್ ಮೂಲಕ ಜನರನ್ನು ಪರಿಶೀಲಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ಇದೀಗ ಸರ್ಕಾರವೂ ಮಹತ್ವದ ಹೆಜ್ಜೆ ಇಟ್ಟಿದೆ. ಆಧಾರ್ ಪರಿಶೀಲನೆ ಪ್ರಕ್ರಿಯೆ ಮತ್ತಷ್ಟು ಸುಲಭವಾಗಿಸಿದೆ. ಈ 22 ಹಣಕಾಸು ಕಂಪನಿಗಳಲ್ಲಿ ಗೋಡ್ರೆಜ್ ಫೈನಾನ್ಸ್, ಅಮೆಜಾನ್ ಪೇ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್, ಟಾಟಾ ಮೋಟಾರ್ಸ್ ಫೈನಾನ್ಸ್ ಸೊಲ್ಯೂಷನ್ಸ್, ಐಐಎಫ್‌ಎಲ್ ಫೈನಾನ್ಸ್ ಮತ್ತು ಮಹೀಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಸಹ ಇವೆ.

Join Nadunudi News WhatsApp Group

Join Nadunudi News WhatsApp Group