Aadhaar Link: ಮನೆ, ಜಮೀನು ಮತ್ತು ಸೈಟ್ ಗಳಿಗೆ ಯಾಕೆ ಆಧಾರ್ ಕಾರ್ಡ್ ಮಾಡಬೇಕು…? ಇದರಿಂದ ಏನು ಲಾಭ ಗೊತ್ತಾ…?

ಸ್ವಂತ ಆಸ್ತಿ ಮತ್ತು ಜಮೀನು ಹೊಂದಿರುವವರು ಯಾಕೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಗೊತ್ತಾ...?

Aadhaar Link For Property: ಸದ್ಯ ಎಲ್ಲೆಡೆ ವಂಚನೆಯ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ವಂಚಕರು ಜನರನ್ನು ಯಾವ ರೀತಿ ಮೋಸ ಮಾಡುವುದು ಎಂದು ಹೊಂಚು ಹಾಕುತ್ತ ಇರುತ್ತಾರೆ. ಈಗಾಗಲೇ ಸಾಕಷ್ಟು ವಿಧಾನದ ಮೂಲಕ ವಂಚನೆ ನಡೆದಿದೆ ಮತ್ತು ಜನಸಾಮಾನ್ಯರು ಸಾಕಷ್ಟು ಕಷ್ಟಗಳನ್ನ ಅನುಭವಿಸಿದ್ದಾರೆ ಎನ್ನಬಹುದು. ಇತ್ತೀಚಿಗೆ ವಂಚನೆಯ ಪ್ರಕರಣವು ಆಸ್ತಿಗೆ ಸಂಬಂಧಿಸಿದಂತೆ ಹೆಚ್ಚು ನಡೆಯುತ್ತಿದೆ.ಇದಕ್ಕಾಗಿಯೇ ಸರ್ಕಾರ ಆಸ್ತಿ ಖರೀದಿ, ಮಾರಾಟ, ನೋಂದಣಿಯಲ್ಲಿ ಅನೇಕ ನಿಯಮಗಳನ್ನು ರೂಪಿಸಿದೆ.

ಸದ್ಯ ರಾಜ್ಯ ಸರ್ಕಾರ ಸವನ್ತ ಜಾಮೀನು ಆಸ್ತಿಯನ್ನು ಹೊಂದಿರುವವರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಆಸ್ತಿಯ ವಿಚಾರವಾಗಿ ಮಹತ್ವದ ಆದೇಶವನು ಹೊರಡಿಸಿದೆ. ಸ್ವಂತ ಆಸ್ತಿಯನ್ನು ಹೊಂದಿರುವವರು ಈ ಕೆಲಸಗಳನ್ನು ಮಾಡುವುದು ಅಗತ್ಯವಾಗಿದೆ.

Aadhaar Link For Property
Image Credit: TV9marathi

ಮನೆ, ಜಮೀನು, ಸೈಟ್ ಗಳಿಗೆ ಆಧಾರ್ ಲಿಂಕ್ ಕಡ್ಡಾಯ
ಪ್ರಸ್ತುತ ರಾಜ್ಯದಲ್ಲಿ ಒಟ್ಟಾರೆ 70 % ರಷ್ಟು ಸಣ್ಣ ರೈತರಿದ್ದಾರೆ ಆದರೆ ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇ. 44 ರಷ್ಟು ಮಾತ್ರ. ಇದರಿಂದಾಗಿ ಕೇಂದ್ರದಿಂದ ಲಭ್ಯವಾಗುವ ಸಾಕಷ್ಟು ಯೋಜನೆಗಳಿಂದ ರೈತರು ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಿಕೊಳಲು ರಾಜ್ಯದ ರೈತರು ತಮ್ಮ RTC ಜೊತೆ Aadhaar Link ಮಾಡುವುದು ಕಡ್ಡಾಯವಾಗಿದೆ. RTC ಜೊತೆ ಆಧಾರ್ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿ ಅಂಶಗಳ ಬಗ್ಗೆ ಮಾಹಿತಿ ಲಭಿಸುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ.

Aadhar Link For Property Document Latest
Image Credit: Original Source

ರೈತರು ಆದಷ್ಟು ಬೇಗ ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಿ
ರಾಜ್ಯದ ರೈತರು ಆದಷ್ಟು ಬೇಗ ತಮ್ಮ RTC ಜೊತೆ Aadhaar Link ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ದಾಖಲಾತಿಯೊಂದಿಗೆ ಅಧಿಕೃತ ವೆಬ್ಸೈಟ್ https://landrecords.karnataka.gov.in/service4 ಗೆ ಲಾಗಿನ್ ಮಾಡುವ ಮೂಲಕ ತಮ್ಮ ಭೂ ದಾಖಲೆಗಳನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ. ರೈತರು ಸೇರಿ ಎಲ್ಲರು ಕೂಡ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಪರಿಚಯಿಸುವ ಯಾವುದೇ ಯೋಜನೆಗಳು ಕೈತಪ್ಪಿ ಹೋಗುವುದಿಲ್ಲ.

Join Nadunudi News WhatsApp Group

Join Nadunudi News WhatsApp Group