Aadhar Photo Change: ಈಗ ಸುಲಭವಾಗಿ ಹಳೆಯ ಆಧಾರ್ ಕಾರ್ಡ್ ಫೋಟೋ ಬದಲಾಯಿಸಬಹುದು, ಸುಲಭ ವಿಧಾನ.

ಸುಲಭ ವಿಧಾನದ ಮೂಲಕ ಆಧಾರ್ ಕಾರ್ಡ್ ನಲ್ಲಿ ಇರುವ ಹಳೆಯ ಫೋಟೋ ಈಗ ಬದಲಾಯಿಸಬಹುದಾಗಿದೆ.

Aadhar Old Photo Update: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar Card) ಸಂಬಂಧಿತ ಹೊಸ ಹೊಸ ಅಪ್ಡೇಟ್ ಗಳು ಬರುತ್ತಲೇ ಇದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ನಲ್ಲಿ ಸಾಕಷ್ಟು ತಪ್ಪುಗಳು ಆಗಿರುತ್ತದೆ. ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್, ಜನ್ಮ ದಿನಾಂಕ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯಲ್ಲಿ ತಪ್ಪಾಗಿರುವುದು ಸಹಜವಾಗಿರುತ್ತದೆ.

ಇನ್ನು ಈ ತಪ್ಪುಗಳನ್ನು ಆನ್ಲೈನ್ ನಲ್ಲಿ ಕೂಡ ಸರಿಪಡಿಸಿಕೊಳ್ಳಬಹುದು. ಇದೀಗ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾಯಿಸುವುದು ಹೇಗೆ ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Old photo in Aadhaar card can now be changed through an easy method.
Image Credit: navi

ಆಧಾರ್ ಕಾರ್ಡ್ ನಲ್ಲಿನ ಫೋಟೋ ಬದಲಾವಣೆ
ಆಧಾರ್ ಕಾರ್ಡ್ ಇದೀಗ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಇತ್ತೀಚಿಗೆ ಯಾವುದೇ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಇನ್ನು ಬೇರೆ ರೀತಿಯ ವೈಯಕ್ತಿಕ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡಲು ಸರ್ಕಾರ ಈಗಾಗಲೇ ಸೂಚನೆ ನೀಡಿದೆ.

ಇನ್ನು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ನಿಮಗೆ ಇಷ್ಟವಾಗದೇ ಇದ್ದರೆ ಅದನ್ನು ಬದಲಿಸಿಕೊಳ್ಳಬಹುದು. ನಿಮ್ಮ ಆಧಾರ್ ಕಾರ್ಡ್ ನ ಫೋಟೋವನ್ನು ಹೇಗೆ ಬದಲಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.

Old photo in Aadhaar card can be changed by filling Aadhaar card update form.
Image Credit: theprint

ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಬದಲಾವಣೆ ಮಾಡುವ ಹಂತಗಳು

Join Nadunudi News WhatsApp Group

* ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾವಣೆ ಮಾಡಲು ನೀವು ಮೊದಲು ಆಧಾರ್ ಅಪ್ಡೇಟ್ ಫಾರ್ಮ್ (Aadhar Update Form) ಅನ್ನು ಭರ್ತಿ ಮಾಡಬೇಕಾಗುತ್ತದೆ.

*ಆಧಾರ್ ಅಪ್ಡೇಟ್ ಫಾರ್ಮ್ ಅನ್ನು ನೀವು UIDAI ವೆಬ್ ಸೈಟ್ ನ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಹತ್ತಿರದಲ್ಲಿರುವ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಅಪ್ಡೇಟ್ ಫಾರ್ಮ್ ಅನ್ನು ಪಡೆದುಕೊಳ್ಳಬಹುದು.

Visit the Aadhaar card center to change the photos on the Aadhaar card.
Image Credit: moneycontrol

*ಫಿಂಗರ್ ಫ್ರಿನ್ಟ್ ಹಾಗೂ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಆಧಾರ್ ಅಪ್ಡೇಟ್ ಫಾರ್ಮ್ ಅನ್ನು ಭರ್ತಿ ಮಾಡಿ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ.

*ಆಧಾರ್ ನೋಂದಣಿ ಕೇಂದ್ರದಲ್ಲಿ ನಿಮ್ಮ ಹೊಸ ಫೋಟೋ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗೆ ನೀವು 100 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 90 ದಿನಗಳು ಬೇಕಾಗುತ್ತದೆ.

* ಈ ಪ್ರಕ್ರಿಯೆ ಪೂರ್ಣಗೊಂಡ ನಂತರ UIDAI ವೆಬ್ ಸೈಟ್ ನ ಮೂಲಕ ಆಧಾರ್ ಕಾರ್ಡ್ ಡಿಜಿಟಲ್ ಕಾಪಿಯನ್ನು ನೀವು ಪಡೆದುಕೊಳ್ಳಬಹುದು.

Join Nadunudi News WhatsApp Group