Sundar Pichai: ಗೂಗಲ್ CEO ಒಂದೇ ಸಮಯದಲ್ಲಿ ಎಷ್ಟು ಮೊಬೈಲ್ ಬಳಸುತ್ತಾರೆ ಗೊತ್ತಾ…? ಈತ ನಿಜಕ್ಕೂ ಅಸಾಮಾನ್ಯ

ಗೂಗಲ್ CEO ಸುಂದರ್ ಪಿಚೈ ಅವರು ಒಂದೇ ಸಮಯದಲ್ಲಿ ಎಷ್ಟು ಮೊಬೈಲ್ ಬಳಸುತ್ತಾರೆ ಗೊತ್ತಾ...?

Google CEO Sundar Pichai: ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚು ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಾರೆ. ಲ್ಯಾಪ್ ಟಾಪ್ , ಮೊಬೈಲ್ ಎಲ್ಲವನ್ನು ಬಳಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತದೆ. ಇನ್ನು ಹೆಚ್ಚಿನ ಕಂಪನಿಗಲ್ಲಿ ಲ್ಯಾಪ್ ಟಾಪ್ ಜೊತೆಗೆ ಮೊಬೈಲ್ ಫೋನ್ ಗಳಲ್ಲಿ ಕೂಡ ಕೆಲಸ ಮಾಡಬೇಕಾಗುತ್ತದೆ.

ಹೀಗಾಗಿ ಉದ್ಯೋಗಿಗಳು ಒಂದಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ ಗಳನ್ನೂ ಏಕಕಾಲದಲ್ಲಿ ಬಳಸಬೇಕಾಗುತ್ತದೆ. ಇನ್ನು Google CEO Sundar Pichai ಅವರು ಒಂದೇ ಬಾರಿಗೆ ಎಷ್ಟು ಫೋನ್ ಗಳನ್ನೂ ಬಳಸುತ್ತಾರೆ ಎನ್ನುವ ಬಗ್ಗೆ ನಿಮಗೆ ಗೊತ್ತೇ. CEO ಬಳಸುವ ಮೊಬೈಲ್ ಸಂಖ್ಯೆಗಳ ಬಗ್ಗೆ ನೀವು ತಿಳಿದರೆ ಅಚ್ಚರಿ ಪಡುವುದಂತೂ ನಿಜ.

about sundar pichai
Image Credit: Original Source

ಗೂಗಲ್ CEO ಒಂದೇ ಸಮಯದಲ್ಲಿ ಎಷ್ಟು ಮೊಬೈಲ್ ಬಳಸುತ್ತಾರೆ ಗೊತ್ತಾ…?
ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ. ತಮ್ಮ ಟೆಕ್ ಅಭ್ಯಾಸಗಳ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಒಂದೇ ಬಾರಿಗೆ ಎಷ್ಟು ಫೋನ್ ಗಳನ್ನೂ ಬಳಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿ ಎಲ್ಲರನ್ನು ಅಚ್ಚರಿ ಪಡಿಸಿದ್ದಾರೆ. “ವಿವಿಧ ಕಾರಣಗಳಿಗೆ ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್” ಗಳನ್ನೂ ಬಳಸುವುದಾಗಿ Sundar Pichai ಅವರು ಮಾಹಿತಿ ನೀಡಿದ್ದಾರೆ.

about sundar pichai mobile
Image Credit: Original Source

ಏಕಕಾಲದಲ್ಲಿ ಅಷ್ಟೊಂದು ಫೋನ್ ಬಳಸಲು ಕಾರಣವೇನು…?
ಸಾಮಾನ್ಯವಾಗಿ ಒಂದು ಫೋನ್ ಅನ್ನು ಹ್ಯಾಂಡಲ್ ಮಾಡುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಇವರು ಏಕಕಾಲದಲ್ಲಿ ಅಷ್ಟೊಂದು ಫೋನ್ ಗಳನ್ನೂ ಬಳಸುತ್ತಾರೆ ಎಂದರೆ ಅಸಾಮನ್ಯವಾದ ವಿಷಯವಾಗಿದೆ. ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್ ಗಳನ್ನೂ ಬಳಸುವುದು ಸುಲಭದ ಮಾತಲ್ಲ. ಇದು ಅವರು ಕೆಲಸದ ಬಗ್ಗೆ ಎಷ್ಟು ಶ್ರಮ ವಹಿಸುತ್ತಾರೆ ಎನ್ನುವುದನ್ನು ತೋರಿಸುತ್ತದೆ. ತನ್ನ ಕೆಲಸದ ಭಾಗವಾಗಿ ಅವರು ಎಲ್ಲ ಸಾಧನಗಳಲ್ಲಿ ಗೂಗಲ್ ಉತ್ಪನ್ನಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ವಿವಿಧ ಸಾಧನಗಳನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

Join Nadunudi News WhatsApp Group

Join Nadunudi News WhatsApp Group