ATM insurance: ATM ಕಾರ್ಡ್ ಇದ್ದವರಿಗೆ ಸಿಗಲಿದೆ 5 ಲಕ್ಷ, ಏಟಿಎಂ ಇದ್ದವರು ವಿಮೆ ಲಾಭ ಪಡೆದುಕೊಳ್ಳಿ.

ಏಟಿಎಂ ಕಾರ್ಡ್ ಇದ್ದವರಿಗೆ ಬ್ಯಾಂಕಿನಲ್ಲಿ ವಿಮೆ ಮಾಡಿಸಿದರೆ ಅಪಘಾತದ ಸಮಯದಲ್ಲಿ 5 ಲಕ್ಷ ರೂಪಾಯಿಯ ತನಕ ವಿಮೆ ಪಡೆದುಕೊಳ್ಳಬಹುದು.

ATM Card Insurance Policy: ದೇಶದ ಎಲ್ಲಾ ಪ್ರತಿಷ್ಠಿತ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗಾಗಿ ಎಟಿಎಂ (ATM Card) ಸೌಲಭ್ಯವನ್ನು ನೀಡುತ್ತದೆ. ಪ್ರತಿಯೊಬ್ಬರೂ ಕೂಡ ಎಟಿಎಂ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ.

ಇದೀಗ ನೀವು ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಅನ್ನು ಹೊಂದಿದ್ದರು ಕೂಡ ನಿಮಗೆ 5 ಲಕ್ಷವನ್ನು ಪಡೆದುಕೊಳ್ಳಲು ಅವಕಾಶ ಸಿಗಲಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Those who have an ATM card can avail accident insurance.
Image Credit: bankrate

ಎಟಿಎಂ ಕಾರ್ಡ್ ಇದ್ದವರಿಗೆ ಉಚಿತ ವಿಮೆ ಸೌಲಭ್ಯ

ಪ್ರತಿ ಬ್ಯಾಂಕ್ ನ ಗ್ರಾಹಕರು ಎಟಿಎಂ ಕಾರ್ಡ್ ನಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಇದೀಗ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ವಿಮೆಯ ಸೌಲಭ್ಯವನ್ನು ನೀಡಲಿದೆ. ಬ್ಯಾಂಕ್ ನಿಂದ ಗ್ರಹಕರು ಎಟಿಎಂ ಕಾರ್ಡ್ ಅನ್ನು ಪಡೆದ ತಕ್ಷಣ ಗ್ರಾಹಕರ ವಿಮೆ ಆರಂಭಗೊಳ್ಳುತ್ತದೆ. ಎಟಿಎಂ ಕಾರ್ಡ್ ಹೊಂದಿದವರು ಯಾವ ವಿಮೆಯ ಸೌಲಭ್ಯವನ್ನು ಪಡೆಯಬಹುದು ಎನ್ನುವ ಬಗ್ಗೆ ತಿಳಿಯೋಣ.

ಗ್ರಾಹಕರಿಗಾಗಿ ಅಪಘಾತ ವಿಮೆ (Accident insurance) 
ಬ್ಯಾಂಕ್ ಗ್ರಾಹಕರಿಗಾಗಿ ಅಪಘಾತ ವಿಮೆಯನ್ನು ಒದಗಿಸುತ್ತದೆ. ಅಪಘಾತದಲ್ಲಿ ಮೃತಪಟ್ಟರೆ 1 ರಿಂದ 5 ಲಕ್ದವರೆಗೆ ವಿಮೆಯ ಮೊತ್ತ ದೊರೆಯುತ್ತದೆ. ಅಪಘಾತದ ಕಾರಣದಿಂದ ಅಂಗವಿಕಲರಾಗಿದ್ದರೆ. 50,000 ರೂ. ವರೆಗೆ ವಿಮಾ ಮೊತ್ತ ದೊರೆಯುತ್ತದೆ. ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ ಅಪಘಾತ ವಿಮೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Those who have an ATM card can get insurance up to 5 lakh rupees in the event of an accident if insured in the bank.
Image Credit: npr

ಪ್ಲಾಟಿನಂ ಕಾರ್ಡ್ ನಲ್ಲಿ ಸಿಗಲಿದೆ 5 ಲಕ್ಷ
ಅನೇಕ ಬ್ಯಾಂಕ್ ಗಳಲ್ಲಿ ವಿವಿಧ ರೀತಿಯ ಕಾರ್ಡ್ ಗಳನ್ನೂ ನೀಡಲಾಗುತ್ತದೆ. ಕಾರ್ಡ್ ಗಳ ಆಧಾರದ ಮೇಲೆ ವಿಮೆಯ ಮೊತ್ತ ಅವಲಂಭಿಸಿರುತ್ತದೆ. ಸಾಮಾನ್ಯ ಮಾಸ್ಟರ್ ಕಾರ್ಡ್ ನಲ್ಲಿ 50,000 .ಕ್ಲಾಸಿಕ್ ಎಟಿಎಂ ಕಾರ್ಡ್ ನಲ್ಲಿ 1 ಲಕ್ಷ, ವೀಸಾ ಕಾರ್ಡ್ ನಲ್ಲಿ 1.5 ರಿಂದ 2 ಲಕ್ಷ ಮತ್ತು ಪ್ಲಾಟಿನಂ ಕಾರ್ಡ್ ನಲ್ಲಿ 5 ಲಕ್ಷ ರೂಪಾಯಿಯ ವಿಮೆಯನ್ನು ಪಡೆಯಬಹುದು.

Join Nadunudi News WhatsApp Group