Social Media: Instagram ಮತ್ತು Facebook ಬಳಸುವವರಿಗೆ ಹೊಸ ರೂಲ್ಸ್, ನಿಯಮ ಬದಲಿಸಿದ Meta

ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಬಳಕೆದಾರರ ಗೌಪ್ಯತೆಗಾಗಿ Activity Off-Meta ಫೀಚರ್

Activity Off-Meta: ಸಾಮಾನ್ಯವಾಗಿ ಬಳಕೆಗೆ ಇಂಟರ್ನೆಟ್(Internent) ಅವಶ್ಯಕತೆಯಾಗಿದೆ. ಇಂಟರ್ನೆಟ್ ಅನ್ನು ಬಳಸಿಕೊಂಡು ಎಲ್ಲ ರೀತಿಯ ಅಪ್ಲಿಕೇಶನ್ ಗಳನ್ನೂ ಬಳಸಲಾಗುತ್ತದೆ.

ಇನ್ನು ನೀವು ಇಂಟರ್ನೆಟ್ ಅನ್ನು ಆನ್ ಮಾಡಿಟ್ಟುಕೊಂಡು ಯಾವುದಾದರು ವಸ್ತುವನ್ನು ಖರೀದಿಸುವ ಬಗ್ಗೆ ಮಾತನಾಡಿದರೆ, ಮರುದಿನವೇ ನಿಮ್ಮ ಸೋಶಿಯಲ್ ಮೀಡಿಯಾ (Social Media) ಅಕೌಂಟ್ ಗಳಲ್ಲಿ ಆ ವಸ್ತುವಿನ ಬಗ್ಗೆ ಜಾಹಿರಾತು ಬರುವುದನ್ನು ನೀವು ಗಮನಿಸಿರಬಹದು. ಇದರರ್ಥ ಇಂಟರ್ನೆಟ್ ನಿಮ್ಮ ಎಲ್ಲ ರೀತಿಯ ಚಟುವಟಿಕೆಯ ಮೇಲೆ ಕಣ್ಣಿಟ್ಟಿದೆ ಎಂದು. ಇದೀಗ ನಾವು ಬಳಕೆದಾರರ ಗೌಪ್ಯತೆಗೆ ಸಹಾಯವಾಗುವತಂಹ ಒಂದಿಷ್ಟು ವಿಚಾರಗಳ ಬಗ್ಗೆ ಮಾಹಿತಿ ತಿಳಿಯೋಣ.

Activity Off-Meta
Image Credit: India Today

ಬಳಕೆದಾರರ ಗೌಪ್ಯತೆಗಾಗಿ Activity Off-Meta ಫೀಚರ್
ಗೌಪ್ಯತೆ ಮತ್ತು ಆನ್‌ ಲೈನ್ ಚಟುವಟಿಕೆಯ ಮೇಲೆ ಬಳಕೆದಾರರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡಲು Meta Activity ಆಫ್-ಮೆಟಾ ವೈಶಿಷ್ಟ್ಯವನ್ನು ನೀಡುತ್ತದೆ. ಇದು ಗೌಪ್ಯತೆ ಸೆಟ್ಟಿಂಗ್ ಆಗಿದ್ದು ಅದು ಬಳಕೆದಾರರಿಗೆ ಅಪ್ಲಿಕೇಶನ್‌ ಗಳು ಮತ್ತು ವೆಬ್‌ ಸೈಟ್‌ ಗಳು ಮೆಟಾ ಪ್ಲಾಟ್‌ ಫಾರ್ಮ್‌ ನೊಂದಿಗೆ ಹಂಚಿಕೊಳ್ಳುವ ಡೇಟಾವನ್ನು ವೀಕ್ಷಿಸಲು ಮತ್ತು ನಿಯಂತ್ರಿಸಲು ಅನುಮತಿಸುತ್ತದೆ.

ಮೆಟಾಗೆ ಯಾವ ವಹಿವಾಟು ಡೇಟಾವನ್ನು ಕಳುಹಿಸುತ್ತಿದೆ ಎಂಬುದನ್ನು ಕಂಡುಹಿಡಿಯಲು ಬಳಕೆದಾರರು Activity ಆಫ್-ಮೆಟಾ ವೈಶಿಷ್ಟ್ಯವನ್ನು ಬಳಸಬಹುದು. ಇದನ್ನು ಮಾಡುವುದರಿಂದ ನೀವು ಅದನ್ನು ತೆಗೆದುಹಾಕಬಹುದು ಮತ್ತು ಡೇಟಾವನ್ನು ತೆರವುಗೊಳಿಸಬಹುದ.

Turn Off Activity Status On Facebook
Image Credit: India Today

ಇಸ್ಟಾಗ್ರಾಮ್ ನಲ್ಲಿ ಆಕ್ಟಿವಿಟಿ ಆಫ್ ಮಾಡುವುದು ಹೇಗೆ..?
Instagram ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.

Join Nadunudi News WhatsApp Group

ಮೇಲಿನ ಬಲ ಮೂಲೆಯಲ್ಲಿ ಮೂರು ಚುಕೆಗಳನ್ನು ನೀಡಲಾಗುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್‌ ಗಳು ಮತ್ತು ಗೌಪ್ಯತೆಗೆ ಹೋಗಿ.

ಇಲ್ಲಿ ನೀವು ಚಟುವಟಿಕೆಯನ್ನು ಟ್ಯಾಪ್ ಮಾಡಬೇಕು. ನಂತರ, ಆಕ್ಟಿವಿಟಿ ಆಫ್ ಮೆಟಾ ಟೆಕ್ನಾಲಜೀಸ್‌ ಗೆ ಹೋಗಿ.

ನಂತರ Disconnect Feature Activity ಟಾಗಲ್ ಅನ್ನು ಆನ್ ಮಾಡಿ. ಇದು Instagram ನಿಮ್ಮನ್ನು ಟ್ರ್ಯಾಕ್ ಮಾಡುವುದನ್ನು ತಡೆಯುತ್ತದೆ.

Turn Off Activity Status On Instagram
Image Credit: Paperearn

ಫೇಸ್ ಬುಕ್ ನಲ್ಲಿ ಆಕ್ಟಿವಿಟಿ ಆಫ್ ಮಾಡುವುದು ಹೇಗೆ..?
Facebook ಅಪ್ಲಿಕೇಶನ್ ತೆರೆಯಿರಿ ಮತ್ತು ನಂತರ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.

ಮೇಲಿನ ಬಲ ಮೂಲೆಯಲ್ಲಿ ಮೂರು ಚುಕೆಗಳನ್ನು ನೀಡಲಾಗುತ್ತದೆ, ಅದರ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್‌ ಗಳು ಮತ್ತು ಗೌಪ್ಯತೆಗೆ ಹೋಗಿ.

ನಂತರ Your Facebook information ಗೆ ಹೋಗಿ ಮತ್ತು Off-Facebook Activity ಕ್ಲಿಕ್ ಮಾಡಿ.

ನಂತರ ನಿಮ್ಮ ಆಫ್-ಫೇಸ್‌ಬುಕ್ ಚಟುವಟಿಕೆಯನ್ನು ನಿರ್ವಹಿಸಿ ಕ್ಲಿಕ್ ಮಾಡಿ. ನಂತರ ಭವಿಷ್ಯದ ಚಟುವಟಿಕೆಯನ್ನು ನಿರ್ವಹಿಸಿ ಟ್ಯಾಪ್ ಮಾಡಿ.

ನಂತರ ನಿಮ್ಮ Your Facebook Information ಹೋಗಿ ಮತ್ತು Off-Facebook Activity ಹೋಗಿ.

ನಂತರ ನಿಮ್ಮ ಆಫ್-ಫೇಸ್ ಬುಕ್ ಚಟುವಟಿಕೆಯನ್ನು ನಿರ್ವಹಿಸಿ ಕ್ಲಿಕ್ ಮಾಡಿ. ನಂತರ ಭವಿಷ್ಯದ ಚಟುವಟಿಕೆಯನ್ನು ನಿರ್ವಹಿಸು ಟ್ಯಾಪ್ ಮಾಡಿ.

ಈ ಎಲ್ಲ ಪ್ರಕ್ರಿಯೆಯ ನಂತರ uture Off-Facebook Activity ಟಾಗಲ್ ಅನ್ನು ಆಫ್ ಮಾಡಿ.

Join Nadunudi News WhatsApp Group