Chiranjeevi Car: ಹೊಸ ಕಾರಿನ ನಂಬರ್ ಪ್ಲೇಟ್ ಗೆ ದುಬಾರಿ ಹಣ ಕೊಟ್ಟ ಚಿರಂಜೀವಿ, ಕಾರಿನ ಬೆಲೆ ಎಷ್ಟು.

ಕಾರಿನ ನಂಬರ್ ಪ್ಲೇಟ್ ಗಾಗಿ ದುಬಾರಿ ಹಣವನ್ನ ಖರ್ಚು ಮಾಡಿದ್ದಾರೆ ನಟ ಚಿರಂಜೀವಿ.

Actor Chiranjeevi New Car: ಸಿನಿಮಾ ಸ್ಟಾರ್ ನಟ ನಟಿಯರು ಕಾರು ಅಥವಾ ಬಂಗಲೆಯನ್ನು ಖರೀದಿಸಲು ಕೋಟಿ ಕೋಟಿ ಹಣ ಖರ್ಚು ಮಾಡುವುದು ಸಾಮಾನ್ಯ. ಇದೀಗ ಖ್ಯಾತ ನಟ ಚಿರಂಜೀವಿ (Chiranjeevi) ಅವರು ದುಬಾರಿ ವೆಚ್ಚದ ಕಾರನ್ನು ಖರೀದಿಸಿದ್ದಾರೆ. ಅದಕ್ಕೆ ಬೇಕಾದ ನಂಬರ್ ಪ್ಲೇಟ್ ಹಾಕಲು ಖರ್ಚು ಮಾಡಿದ ಹಣದ ಬಗ್ಗೆ ಇದೀಗ ಚರ್ಚೆ ಆಗುತ್ತಿದೆ.

Chiranjeevi New Car
Image Source: India Today

ನಟ ಚಿರಂಜೀವಿ ಅವರು ಕಾರಿನ ನಂಬರ್ ಪ್ಲೇಟ್ ಗಾಗಿ ಖರ್ಚು ಮಾಡಿದ ಹಣ
ನಟ ಚಿರಂಜೀವಿ ಅವರು ಇತ್ತೀಚಿಗೆ ಖರೀದಿಸಿದ ಕಾರಿನ ಬಗ್ಗೆ ಚರ್ಚೆ ಆಗುತ್ತಿದೆ. ಅವರು ಟೊಯೋಟಾ ಕಂಪನಿಯ ವೆಲ್ ಫೇರ್ ಕಾರನ್ನು ಖರೀದಿಸಿದ್ದಾರೆ. ಈ ಸ್ಪೆಷಲ್ ಕಾರನ್ನು ನೋಡಿದವರೆಲ್ಲ ಶಾಕ್ ಆಗಿದ್ದಾರೆ. ಈ ದುಬಾರಿ ಕಾರಿನ ಬೆಲೆ 1.2 ಕೋಟಿ ರೂಪಾಯಿ ಆಗಿದೆ.

ನಟ ಚಿರಂಜೀವಿ ಅವರು ಖರೀದಿ ಮಾಡಿರುವ ಈ ಹೊಸ ಕಾರಿಗಾಗಿ ನಂಬರ್ ಪ್ಲೇಟ್ ಹಾಕಲು ದುಬಾರೀ ಹಣವನ್ನೆ ಖರ್ಚು ಮಾಡಿದ್ದಾರಂತೆ. ಅವರಿಗೆ ಬೇಕಾದ 1111 ನಂಬರ್ ಪ್ಲೇಟ್ ಹಾಕಲು ಅದನ್ನು ರಿಜೆಸ್ಟ್ರೇಷನ್ ಮಾಡಿಸಲು ಬರೋಬ್ಬರಿ 4.7 ಲಕ್ಷ ರೂಪಾಯಿ ಖರೀದಿ ಮಾಡಿದ್ದಾರಂತೆ.

Chiranjeevi New Car
Image Source: Kannada Nade

ಕಾರಿಗೆ ಇಷ್ಟವಾದ ನಂಬರ್ ಪ್ಲೇಟ್ ಹಾಕಲು ಲಕ್ಷ ಲಕ್ಷ ಹಣ ಖರ್ಚು ಮಾಡಿದ ಚಿರಂಜೀವಿ
ನಟ ಚಿರಂಜೀವಿ ಅವರ ಟೊಯೋಟಾ ವೆಲ್ ಫೇರ್ ಕಾರಿನ ನೋಂದಣಿ ಸಂಖ್ಯೆ ts 09 GB 1111 ಆಗಿದೆ. ತಮ್ಮ ಕಾರಿಗೆ ಇದೆ ನಂಬರ್ ಇರಬೇಕು ಎನ್ನುವುದು ಅವರ ಬಹುದಿನ ಆಸೆ ಆಗಿತ್ತಂತೆ. ಇದನ್ನು ಅವರು ಲಕ್ಷ ಲಕ್ಷ ರೂಪಾಯಿ ಕೊಟ್ಟು ಈಡೇರಿಸಿಕೊಂಡಿದ್ದಾರೆ. ಚಿರಂಜೀವಿ ಅವರಿಗೆ 1111 ಸಂಖ್ಯೆ ಅಂದರೆ ಇಷ್ಟವೆನಿಸುತ್ತದೆ. ಅದಕ್ಕಾಗಿ ಅವರು ತಮ್ಮ ಕಾರಿಗೆ ಈ ನಂಬರ್ ಅನ್ನೇ ನೋಂದಣಿ ಮಾಡಿಸಿದ್ದಾರೆ.

Chiranjeevi New Car
Image Source: India Today

Join Nadunudi News WhatsApp Group

Join Nadunudi News WhatsApp Group