Dhananjay Sister: ಇಷ್ಟು ವರ್ಷ ಅಕ್ಕನನ್ನ ಡಾಲಿ ಯಾಕೆ ಪರಿಚಯಿಸಲಿಲ್ಲ, ಕಣ್ಣೀರು ಹಾಕಿದ ಡಾಲಿ.

Actor Daali Dhananjay Sister: ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ (Dali Dhananjay) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ವೀಕೆಂಡ್ ವಿತ್ ಸೀಸನ್ 5 ಗೆ (Weekend With Ramesh) ನಟ ಡಾಲಿ ಧನಂಜಯ್ ಅವರು 5 ನೇ ಅತಿಥಿಯಾಗಿ ಬಂದಿದ್ದಾರೆ.

ಇವರು ಬಂದಿರುವ ಎಪಿಸೋಡ್ ನಿನ್ನೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದೆ. ಸಾಧಕರ ಕುರ್ಚಿಯಲ್ಲಿ ಕುಳಿತು ಡಾಲಿ ಧನಂಜಯ್ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Actor Dhananjay broke down in tears talking about his elder sister's problem in Weekend with Ramesh.
Image Credit: instagram

ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಡಾಲಿ ಕುಟುಂಬ
ವೀಕೆಂಡ್ ವಿತ್ ರಮೇಶ್ ಶೋ ನಿಂದ ಡಾಲಿ ಧನಂಜಯ್ ಅವರ ಕುಟುಂಬದ ಪರಿಚಯ ವೀಕ್ಷಕರಿಗೆ ಆಗಿದೆ. ನಟ ಡಾಲಿ ಅವರಿಗೆ ಅವರ ಅಕ್ಕ ಈ ಶೋ ಗೆ ಬಂದಿರುವುದು ಹೆಚ್ಚು ಸರ್ಪ್ರೈಸ್ ಎನಿಸಿದೆ.

ಡಾಲಿ ಅವರ ತಂದೆ ತಾಯಿಗೆ ನಾಲ್ಕು ಜನ ಮಕ್ಕಳಂತೆ. ನಟ ಧನಂಜಯ್ ಅವರ ಒಬ್ಬ ಅಕ್ಕ ವಿಶೇಷ ಚೇತನ ಎಂಬುದು ಈ ಶೋ ಮೂಲಕ ಎಲ್ಲರಿಗೂ ತಿಳಿದಿದೆ. ಯಾವತ್ತೂ ಆ ವಿಶೇಷ ಅಕ್ಕನ ತೋರಿಸಿರಲಿಲ್ಲ ಅನ್ನುವುದನ್ನು ನಟ ಡಾಲಿ ಧನಂಜಯ್ ಅವರು ಹೇಳಿದ್ದಾರೆ.

Actor Dolly Dhananjay broke down in tears after talking about his elder sister's polio attack in Weekend with Ramesh.
Image Credit: instagram

ತನ್ನ ಅಕ್ಕನಿಗೆ ಮಗಳು ಎಂದು ಹೇಳಿದ ನಟ ಧನಂಜಯ್
ನಟ ಡಾಲಿ ಧನಂಜಯ್ ಅವರ ಇನ್ನೊಬ್ಬ ಅಕ್ಕನಿಗೆ ಕಣ್ಣು ಕಾಣಲ್ಲ. ಮನೆಯವರೆಲ್ಲರೂ ಅವರನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಈ ಶೋ ನಲ್ಲಿ ಇವರನ್ನು ನೋಡಿದ ಎಲ್ಲರೂ, ಡಾಲಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಡಾಲಿ ಧನಂಜಯ್ ಅವರು ತಮ್ಮ ಅಕ್ಕನ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

ಇವಳನ್ನು ಎಲ್ಲಿಯೂ ತೋರಿಸಲು ಇಷ್ಟವಿರಲಿಲ್ಲ. ಇವಳು ನನಗೆ ಅಕ್ಕ ಅಲ್ಲ, ನಮ್ಮ ಮನೆ ಮಗು. ನನ್ನ ಮಗಳು ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Join Nadunudi News WhatsApp Group