Prakash Raj About Modi: ಮೋದಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ ಪ್ರಕಾಶ್ ರಾಜ್, ಆಕ್ರೋಶಕ್ಕೆ ಕಾರಣವಾಯಿತು ಹೇಳಿಕೆ.

ನರೇಂದ್ರ ಮೋದಿಯವರ ಬಗ್ಗೆ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ.

Prakash Raj And Narnedra Modi: ನಟ ಪ್ರಕಾಶ್ ರಾಜ್ (Prakash Raj) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಪ್ರಕಾಶ್ ಇತ್ತೀಚೆಗಷ್ಟೇ ಸುದೀಪ್ (Sudeep) ಬಿಜೆಪಿ ಸೇರ್ಪಡೆಯ ವಿರುದ್ಧ ಸಾಕಷ್ಟು ಟ್ವೀಟ್ ಮಾಡಿದ್ದರು.

ಪ್ರಕಾಶ್ ರಾಜ್ ಅವರು ಸುದೀಪ್ ಗೆ ಮಾಡಿರುವ ಟ್ವೀಟ್ ಗಳು ಬಾರಿ ವೈರಲ್ ಆಗಿದ್ದವು. ಇದೀಗ ಪ್ರಕಾಶ್ ರಾಜ್ ಮೋದಿ (Narendra Modi) ವಿರುದ್ಧ ಟ್ವೀಟ್ ಮಾಡಿದ್ದಾರೆ. ಮೋದಿ ವಿರುದ್ಧ ಪ್ರಕಾಶ್ ರಾಜ್ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ (Social Media) ಬಾರಿ ಚರ್ಚೆಯನ್ನು ಹುಟ್ಟಿಹಾಕುತ್ತಿದೆ.

People are outraged because Prakash Raj spoke sarcastically about Narendra Modi.
Image Credit: indianexpress

ಬಂಡೀಪುರದ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ಬಂಡೀಪುರದ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಅವರು ಕಾಡು ಸುತ್ತಿ ಸಫಾರಿ ನಡೆಸಿದ್ದಾರೆ. ಬಂಡೀಪುರದ ಅಭಯಾರಣ್ಯದಲ್ಲಿ ಮೋದಿ 1 ಗಂಟೆಗಳ ಕಾಲ ಸಫಾರಿ ನಡೆಸಿದ್ದಾರೆ. ಹುಲಿ ಸಂರಕ್ಷಣಾ ಯೋಜನೆ 50 ವರ್ಷ ಪೂರೈಸಿದ ಕಾರಣ ಪ್ರಧಾನಿ ಮೋದಿ ಬಂಡೀಪುರಕ್ಕೆ ಭೇಟಿ ನೀಡಿದ್ದಾರೆ. ಇನ್ನು ನಟ ಪ್ರಕಾಶ್ ರಾಜ್ ಅವರು ಮೋದಿ ಸಫಾರಿ ಬಗ್ಗೆ ಟ್ವೀಟ್ ಮಾಡಿ ಮೋದಿಗೆ ಟಾಂಗ್ ನೀಡಿದ್ದಾರೆ.

ಮೋದಿ ವಿರುದ್ಧ ಕಿಡಿಕಾರುತ್ತಿರುವ ವಿರೋಧ ಪಕ್ಷದವರು
ಇನ್ನು ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮೇ 10 ರಂದು ಚುನಾವಣಾ ದಿನಾಂಕ ಕೂಡ ನಿಗದಿಯಾಗಿದೆ.

Prakash Raj sarcastically said that Modi is the prime minister or the campaign minister
Image Credit: awazthevoice

ಈ ವೇಳೆ ಬಂಡೀಪುರದ ಅಭಯಾರಣ್ಯಕ್ಕೆ ಮೋದಿ ಭೇಟಿ ನೀಡಿರುವ ಬಗ್ಗೆ ವಿರೋಧ ಪಕ್ಷಗಳಿಂದ ಬಾರಿ ವಿರೋಧ ವ್ಯಕ್ತವಾಗುತ್ತಿದೆ. ಮತಭೇಟೆಯ ಕಾರಣ ಮೋದಿ ಸಫಾರಿ ನಡೆಸಿದ್ದಾರೆ ಎಂದು ವಿರೋಧ ಪಕ್ಷದವರು ಮೋದಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಅದರ ಜೊತೆಗೆ ನಟ ಪ್ರಕಾಶ್ ರಾಜ್ ಕೂಡ ಮೋದಿ ಸಫಾರಿ ಕುರಿತು ವ್ಯಂಗ್ಯ ಮಾಡಿದ್ದಾರೆ.

Join Nadunudi News WhatsApp Group

ಮೋದಿ ಸಫಾರಿ ಬಗ್ಗೆ ವ್ಯಂಗ್ಯ ಮಾಡಿದ ಪ್ರಕಾಶ್ ರಾಜ್
ಮೋದಿ ಫೋಟೋವನ್ನು ಶೇರ್ ಮಾಡಿ ಪ್ರಕಾಶ್ ರಾಜ್ ಮೋದಿ ಬಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ನಾನು ಯಾರು ಬಲ್ಲೆಯೇನು? ಪ್ರಚಾರ ಮಂತ್ರಿನಾ? ಪ್ರಧಾನ ಮಂತ್ರಿನಾ? ಹೇಳಿ ನೋಡೋಣ ಎಂದು ಮೋದಿ ಫೋಟೋಗಳಿಗೆ ಶೀರ್ಷಿಕೆ ನೀಡುವ ಮೂಲಕ ಟ್ವೀಟ್ ಮಾಡಿದ್ದಾರೆ.

Actor Prakash Raj spoke sarcastically about Narendra Modi on Twitter
Image Credit: theprint

ಹಾಗೆಯೆ ಚುನಾವಣೆ ಬಂತು ಹೀಗಾಗಿ ಬಂಡೀಪುರದಲ್ಲೂ ಸಫಾರಿ, ಚುನಾವಣೆ ಮುಗಿದ ಬಳಿಕ ಕಂದಾಯ ಕಟ್ಟಿಸಿಕೊಂಡು ನಾನಾಗುವೆ ಪರಾರಿ ಎಂದು ಬರೆದ ಫೋಟೋವನ್ನು ಕೂಡ ಹಂಚಿಕೊಂಡು ಮೋದಿ ಸಫಾರಿ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯಮಾಡಿದ್ದಾರೆ.

Join Nadunudi News WhatsApp Group