Shah Rukh Khan About RRR: ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಡಾನ್ಸ್ ಮಾಡಿದ ಶಾರುಖಾನ್.

Shah Rukh Khan About RRR: ಆರ್ ಆರ್ ಆರ್ (RRR) ಸಿನಿಮಾ ಜೂನಿಯರ್ ಎನ್ ಟಿ ಆರ್ (Juniour NTR) ಹಾಗು ರಾಮ್ ಚರಣ್ ತೇಜ (Ramcharan Teja) ನಟನೆಯ ಬಹಳ ಅದ್ಭುತವಾದ ಸಿನಿಮಾ.

ಈ ಸಿನಿಮಾದ ನಾಟು ನಾಟು ಸಾಂಗ್ ಬಹಳ ಫೇಮಸ್ ಆಗಿದೆ. ಈ ಸಾಂಗ್ ಸಾಕಷ್ಟು ಜನರನ್ನು ಮೋಡಿ ಮಾಡಿತ್ತು. ನಾಟು ನಾಟು ಸಾಂಗ್ ರಿಲೀಸ್ ಆದ ದಿನವೇ ಸಾಕಷ್ಟು ಜನರು ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.

Actor Shahrukh Khan talked about the film RRR
Image Credit: thenewsminute

ನಾಟು ನಾಟು ಸಾಂಗ್ ಅವಾರ್ಡ್ ಗೆದ್ದಿದ್ದಕೆ ಖುಷಿ ವ್ಯಕ್ತಪಡಿಸಿದ ಶಾರುಖಾನ್
RRR ಸಿನಿಮಾದ ನಾಟು ನಾಟು ಸಾಂಗ್ ಗೋಲ್ಡನ್ ಗ್ಲೊಬ್ ಅವಾರ್ಡ್ (Golden Glob Award) ಗೆದ್ದಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಇದೀಗ ನಟ ಶಾರುಖಾನ್ ಅವರು ಈ ಖುಷಿಯಲ್ಲಿ ಭಾಗಿಯಾಗಿದ್ದಾರೆ. ನಟ ಭಾರತೀಯ ಸಿನಿಮಾದ ಹಾಡ್ ಅವಾರ್ಡ್ ಗೆದ್ದಿರುವುದನ್ನು ತಿಳಿದು ಖುಷಿ ವ್ಯಕ್ತಪಡಿಸಿದ್ದಾರೆ.

Actor Shah Rukh Khan talked about the song Natu Natu from RRR
Image Credit: koimoi

ಪಠಾಣ್ ಚಿತ್ರಕ್ಕೆ ಶುಭ ಹಾರೈಸಿದ ರಾಮ್ ಚರಣ್
ಇದೀಗ ಹೆಸರಾಂತ ನಟ ಶಾರುಖ್ ಖಾನ್ (Shah Rukh Khan) ಅವರು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್ ನಲ್ಲಿ ನಾಟು ನಾಟು ಸಕ್ಸಸ್ ಖುಷಿಯಲ್ಲಿ ಕಿಂಗ್ ಖಾನ್ ಭಾಗಿಯಾಗಿದ್ದಾರೆ.

Join Nadunudi News WhatsApp Group

ಸರ್ ಈಗಷ್ಟೇ ಎದ್ದು ಡಾನ್ಸ್ ಮಾಡುತ್ತಿದ್ದೇನೆ. ಇನ್ನಷ್ಟು ಅವಾರ್ಡ್ ಭಾರತ ಹೆಮ್ಮೆ ಪಡುವಂತೆ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಹಾಗೂ ಶಾರುಖ್ ನಡುವೆ ಇಂಟ್ರೆಸ್ಟಿಂಗ್ ಟ್ವಿಟರ್ ಚಾಟ್ ನಡೆದಿತ್ತು. ಇದರಲ್ಲಿ ರಾಮ್ ಚರಣ್ ಶಾರುಖ್ ಅವರ ಪಠಾನ್ ಸಿನಿಮಾಗೆ ಶುಭ ಹಾರೈಸಿದ್ದರು.

ಪಠಾಣ್ ಸಿನಿಮಾದ ನಿರೀಕ್ಷೆಯಲ್ಲಿ ಶಾರುಖಾನ್
ಪ್ರತಿಯಾಗಿ ಉತ್ತರಿಸಿದ ಶಾರುಖಾನ್ ಅವರು ನಿಮಗೆ ಆಸ್ಕರ್ ಬಂದಾಗ ನನಗು ಒಮ್ಮೆ ಮುಟ್ಟಲು ಕೊಡಬೇಕು ಎಂದು ಕೇಳಿದ್ದು ನೆಟ್ಟಿಗರು ಸಂಭಾಷಣೆಯನ್ನು ಎಂಜಾಯ್ ಮಾಡಿದ್ದಾರೆ. ನಟ ಶಾರುಖ್ ಅವರು ತಮ್ಮ ಮುಂಬರುವ ಸಿನಿಮಾ ಪಠಾನ್ ನಿರೀಕ್ಷೆಯಲ್ಲಿದ್ದಾರೆ. ಇದರಲ್ಲಿ ನಟಿ ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಾರೆ.

Join Nadunudi News WhatsApp Group