Shah Rukh Khan: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಭಿಮಾನಿಯೇ ದೊಡ್ಡ ಆಸೆ ಈಡೇರಿಸಿದ ಶಾರುಖ್ ಖಾನ್, ಅಪಾರ ಮೆಚ್ಚುಗೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಶಿಬಾನಿ ಚಕ್ರವರ್ತಿ ಅವರ ಕೊನೆಯ ಆಸೆಯನ್ನು ಈಡೇರಿಸಿದ ಶಾರುಖ್ ಖಾನ್.

Actor Shah Rukh Khan Fan: ಬಾಲಿವುಡ್ ಕಿಂಗ್ ಶಾರುಖ್ ಖಾನ್ (Shah Rukh Khan) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಶಾರುಖ್ ಖಾನ್ ಇದೀಗ ಸುದ್ದಿಯಲ್ಲಿದ್ದಾರೆ. ನಟ ಶಾರುಖ್ ಖಾನ್ ತಮ್ಮ ಅಭಿಮಾನಿ ಒಬ್ಬರ ಕೊನೆಯ ಆಸೆಯನ್ನು ಈಡೇರಿಸಿದ್ದಾರೆ. ಈ ಮೂಲಕ ಮತ್ತೆ ನಟ ಶಾರುಖ್ ಖಾನ್ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

Actor Shah Rukh Khan fulfills the fan's wish
Image Credit: koimoi

ಶಾರುಖ್ ಖಾನ್ ಅವರ ಅಭಿಮಾನಿಗೆ ಕ್ಯಾನ್ಸರ್ ಕಾಯಿಲೆ
ಖರ್ದಹರ್ ದಕ್ಷಿಣ ಪಳ್ಳಿ ಕಾಳಿಮಂದಿರ್ ಪ್ರದೇಶದ ನಿವಾಸಿ ಶಿಬಾನಿ ಚಕ್ರವರ್ತಿ ಅವರು ಕಳೆದ ಹತ್ತಾರು ವರ್ಷಗಳಿಂದ ಶಾರುಖ್ ಖಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಶಾರುಖ್ ಖಾನ್ ಅವರ ಯಾವುದೇ ಸಿನಿಮಾ ಬಂದರೂ ಕೂಡ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರು.

ಖಾನ್ ಅವರನ್ನು ಆರಾಧಿಸುತ್ತಿದ್ದ ಶಿಬಾನಿ ಚಕ್ರವರ್ತಿ ಅವರು ಕಳೆದ ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನೇನು ತಾನು ಬದುಕೋದೆ ಇಲ್ಲ ಎಂದು ವೈದ್ಯರು ಹೇಳಿದಾಗ ತಮ್ಮ ಕೊನೆಯ ಆಸೆಯಾಗಿ ಶಾರುಖ್ ಖಾನ್ ಅವರನ್ನು ನೋಡೋದಾಗಿ ಹೇಳಿದ್ದರು.

Shah Rukh Khan fulfilled the last wish of a fan who was suffering from cancer.
Image Credit: indiatimes

ಅಭಿಮಾನಿಯ ಆಸೆಯನ್ನು ಈಡೇರಿಸಿದ ನಟ ಶಾರುಖ್ ಖಾನ್
ಅಭಿಮಾನಿ ಶಿಬಾನಿ ಚಕ್ರವರ್ತಿ ಅವರಿಗೆ ಕೆಲವು ಸಮಯದ ಹಿಂದೆ ಕ್ಯಾನ್ಸರ್ ಅಪ್ಪಳಿಸಿತು. ಈ ಕಾಯಿಲೆ ವಾಸಿಯಾಗುವ ಹಂತ ದಾಟಿ ಶಿಬಾನಿ ಅವರನ್ನು ಆವರಿಸಿತು. ಹೀಗಾಗಿ ತಾನು ಬದುಕುವುದೇ ಇಲ್ಲ ಅನ್ನುವುದು ಗೊತ್ತಾದಾಗ ವೈದ್ಯರ ಮೂಲಕ ತನ್ನ ಕೊನೆಯ ಆಸೆಯನ್ನು ಹೇಳಿದ್ದಾರೆ.

ಶಿಬಾನಿ ಅವರ ಅಭಿಮಾನ ಮತ್ತು ಬೇಡಿಕೆಯ ಬಗ್ಗೆ ತಿಳಿದುಕೊಂಡ ಸ್ಟಾರ್ ನಟ ಶಾರುಖ್ ಖಾನ್ ಆಸ್ಪತ್ರೆಗೆ ಬಂದು ಶಿಬಾನಿ ಚಕ್ರವರ್ತಿ ಅವರನ್ನು ಭೇಟಿಯಾಗಿದ್ದಾರೆ. ಆ ಮೂಲಕ ತನ್ನ ಅಭಿಮಾನಿಯ ಮನದಾಸೆಯನ್ನು ಈಡೇರಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group