Actor Suraj: ಕನ್ನಡದ ಖ್ಯಾತ ನಟನಿಗೆ ಬೈಕ್ ಅಪಘಾತ, ಸಂಕಷ್ಟದಲ್ಲಿ ಚಿತ್ರರಂಗ

ದಿವಂಗತ ಪಾರ್ವತಮ್ಮ ರಾಜಕುಮಾರ್ ಸಂಬಂಧಿ ಹಾಗೂ ಯುವ ನಟ ಸೂರಜ್​​​​ ಭೀಕರ ರಸ್ತೆ ಅಪಘಾತದಲ್ಲಿ ಬಲಗಾಲು ಕಳೆದುಕೊಂಡಿದ್ದಾರೆ.

Actor Suraj Accident: ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಸುದ್ದಿ ಒಂದು ಹರಿದಾಡುತ್ತಿದೆ. ನಟ ಡಾ. ರಾಜಕುಮಾರ್ ಪತ್ನಿ ಪಾರ್ವತಮ್ಮ ಅವರ ತಮ್ಮನ ಮಗನಿಗೆ ಸೂರಜ್ ಗೆ(Suraj) ಅಪಘಾತವಾಗಿರುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ(Social Media) ಹರಿದಾಡುತ್ತಿದೆ. ಅಪಘಾತದಲ್ಲಿ ನಟ ಬಲಗಾಲನ್ನು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ನಟ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ.

Actor Suraj Accident
Image Source: Vistara News

ಯುವನಟ ಸೂರಜ್ ಗೆ ಬೈಕ್ ಅಪಘಾತ
ಮೈಸೂರು ನಂಜಾಗುದು ರಸ್ತೆಯಲ್ಲಿ ಅಪಘಾತವಾಗಿದ್ದು ನಟ ಸೂರಜ್ ಬಲಗಾಲನ್ನು ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ನಟ ಬೈಕ್ ನಲ್ಲಿ ಮೈಸೂರಿನಿಂದ ಊಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂದರ್ಭದಲ್ಲಿ ನಟನ ಬಲಗಾಲ ಮೇಲೆ ಟಿಪ್ಪರ್ ಬಂದು ಹರಿದು ಬಲಗಾಲು ಕಳೆದುಕೊಳ್ಳುವಂತೆ ಆಗಿದೆ. ಸದ್ಯ ನಟ ಸೂರಜ್ ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೂರಜ್ ಆರೋಗ್ಯ ವಿಚಾರಿಸಲು ನಟ ಶಿವಣ್ಣ ಮೈಸೂರಿಗೆ ಬಂದಿದ್ದಾರೆ ಎನ್ನಲಾಗಿದೆ.

ಬೈಕ್ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡ ನಟ
ದಿವಂಗತ ಪಾರ್ವತಮ್ಮ ರಾಜಕುಮಾರ್ ಸಂಬಂಧಿ ಹಾಗೂ ಯುವ ನಟ ಸೂರಜ್​​​​ ಭೀಕರ ರಸ್ತೆ ಅಪಘಾತದಲ್ಲಿ ಬಲಗಾಲು ಕಳೆದುಕೊಂಡಿದ್ದಾರೆ. ಗಂಭೀರವಾದ ಪೆಟ್ಟುಬಿದ್ದ ಕಾರಣ ಮಂಡಿಯವರೆಗೆ ವೈದ್ಯರು ಅವರ ಕಾಲನ್ನು ಕತ್ತರಿಸಿ ತೆಗೆದಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಸೂರಜ್ ಮೈಸೂರಿನಿಂದ ಓಟಿಗೆ ಬುಲೆಟ್ ಬೈಕ್ ​ನಲ್ಲಿ ಪ್ರಯಾಣಿಸುತ್ತಿದ್ದರು. ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಟಿಪ್ಪರ್, ಬೈಕ್​ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಹೊಡೆತಕ್ಕೆ ಬುಲೆಟ್ ಬೈಕ್ ​ನ ಮುಂದಿನ ಚಕ್ರ ಅರ್ಧ ಕಟ್ ಆಗಿದೆ. ಈ ದುರ್ಘಟನೆಯಲ್ಲಿ ಧುವನ್ ಅಲಿಯಾಸ್ ಸೂರಜ್ ಬಲಗಾಲನ್ನು ಕಳೆದುಕೊಂಡಿದ್ದಾರೆ.

Actor Suraj Accident
Image Source; Tv9

Join Nadunudi News WhatsApp Group

Join Nadunudi News WhatsApp Group