Yash 19 Movie: ಯಶ್ 19ನೇ ಚಿತ್ರಕ್ಕೆ ಮಲಯಾಳಿ ನಿರ್ದೇಶಕಿ, ದೊಡ್ಡ ಬಜೆಟ್ ನಲ್ಲಿ ಯಶ್ ಮುಂದಿನ ಚಿತ್ರ.

ನಟ ಯಶ್ ಅವರ 19 ನೇ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ ಖ್ಯಾತ ಮಲಯಾಳಂ ನಿರ್ದೇಶಕಿ

Actor Yash Next Movie Update: ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ (Yash)ಅವರು ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ನಂತರ ಬೇರೆ ಯಾವ ಸಿನಿಮಾದ ಬಗ್ಗೆನೂ ಘೋಷಣೆ ಮಾಡಿಲ್ಲ. ಹಲವು ಸಮಯದಿಂದ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಆಗುತ್ತಿದೆ.

ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ಆದರೂ ಸಹ ನಟ ಯಶ್ ಅವರು ಮುಂದಿನ ಚಿತ್ರ ಯಾವುದೆಂಬುದನ್ನು ಘೋಷಣೆ ಮಾಡಿಲ್ಲ. ಯಶ್ ಅಭಿಮಾನಿಗಳು ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

Actor Yash Next Movie Update
Image Source: News18

ಯಶ್ ಮುಂದಿನ ಚಿತ್ರ ನಿರ್ದೇಶನ ಮಾಡಲಿದ್ದಾರೆ ಮಲಯಾಳಂ ನಟಿ ಗೀತು ಮೋಹನ್ ದಾಸ್
ನಟ ಯಶ್ ಅವರ ಮುಂದಿನ ಚಿತ್ರ ಕೆಜಿಎಫ್ 3 ಎಂದು ಹರಿದಾಡಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಅದೇನೆಂದರೆ ಮಲಯಾಳಂ ಚಿತ್ರರಂಗದ ನಟಿಯೊಬ್ಬರು ಯಶ್ 19 ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ವಿಚಾರ.

ಮಲಯಾಳಂ ನಟಿ ನಟಿ ಗೀತು ಮೋಹನ್‌ ದಾಸ್ (Geethu Mohandas) ಎಂಬುವವರು ಯಶ್ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Actor Yash Next Movie Update
Image Source: India Today

ಮಲಯಾಳಂ ನಟಿ ಗೀತು ಮೋಹನ್ ದಾಸ್
ಯಶ್ ಮುಂದಿನ ಸಿನಿಮಾಗೆ ಮಲಯಾಳಂ ನಟಿ ನಿರ್ದೇಶನ ಮಾಡಲಿದ್ದಾರೆ ಎಂಬ ಬಗ್ಗೆ ಯಶ್ ಆಗಲಿ ಅಥವಾ ಆ ನಟಿಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಕುರಿತು ಸಾಕಷ್ಟು ಸುದ್ದಿ ಹರಿದಾಡುತ್ತಿದೆ.

Join Nadunudi News WhatsApp Group

ಇನ್ನು ಗೀತಾ ಮೋಹನ್ ದಾಸ್ ಅವರ ನಿಜವಾದ ಹೆಸರು ಗಾಯತ್ರಿ ದಾಸ್. 1986 ರಲ್ಲಿ ತೆರೆಗೆ ಬಂದ ಮೋಹನ್ ಲಾಲ್ ನಟನೆಯ ಒನ್ನು ಮೂಡಲ್ ಪುಜ್ಯಮ್ ವರೆ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಅವರು 2009 ರ ವರೆಗೂ ಮೂವತ್ತಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Actor Yash Next Movie Update
Image Source: Public Tv

Join Nadunudi News WhatsApp Group