Yash: ವೈರಲ್ ಆಗಿದೆ ಯಶ್ ಹೊಸ ಹೇರ್ ಸ್ಟೈಲ್, ಹೊಸ ಸ್ಟೈಲ್ ನಲ್ಲಿ ಮಿಂಚಿದ ಯಶ್.

ನಟ ಯಶ್ ಅವರು ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದು ಮುಂದಿನ ಚಿತ್ರದ ಸುಳಿವು ನೀಡಿದ್ದಾರೆ.

Actor Yash New Hair Style: ಪ್ಯಾನ್ ಇಂಡಿಯಾ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್ (Yash) ಇತ್ತೀಚಿಗೆ ತಮ್ಮ ಮುಂದಿನ ಚಿತ್ರದ ವಿಷಯವಾಗಿ ಸುದ್ದಿಯಲ್ಲಿದ್ದಾರೆ. ಯಶ್ ಅಭಿಮಾನಿಗಳು ಯಶ್ ಅವರ 19 ನೇ ಚಿತ್ರದ ಘೋಷಣೆ ಸಲುವಾಗಿ ಕಾಯುತ್ತಿದ್ದಾರೆ. ಈಗಾಗಲೇ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹರಡಿದ್ದವು. ಇದೀಗ ಯಶ್ ಮುಂದಿನ ಚಿತ್ರದ ಕುರಿತು ಹೊಸ ಮಾಹಿತಿಯೊಂದು ಲಭಿಸಿದೆ.

Yash New Hair Style
Image Source: Youtube

ಹೊಸ ಲುಕ್ ನಲ್ಲಿ ರಾಕಿ ಭಾಯ್
ನಟ ಯಶ್ ಅವರ ಕೆಜಿಎಫ್ 2 ಚಿತ್ರ ವಿಶ್ವದಾದ್ಯಂತ ಸಾಕಷ್ಟು ದಾಖಲೆ ಬರೆದಿದೆ. ಅದೆಷ್ಟೋ ಚಿತ್ರಗಳ ದಾಖಲೆಯನ್ನು ಯಶ್ ಅವರ ಕೆಜಿಎಫ್ ಚಿತ್ರ ಮುರಿದಿದೆ. ಇನ್ನು ಕೆಜಿಎಫ್ ಯಶಸ್ಸು ಕಂಡು ವರ್ಷಗಳೇ ಕಳೆದರು ಕೂಡ ಇನ್ನು ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇದೀಗ ಯಶ್ ಅವರ ನ್ಯೂ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಯಶ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

Actor Yash appeared in a new hairstyle for the advertisement
Image Credit: mensxp

ಹೊಸ ಹೇರ್ ಸ್ಟೈಲ್ ನಲ್ಲಿ ಯಶ್
ಕೆಜಿಎಫ್ ಚಿತ್ರದಲ್ಲಿ ಯಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಕನ್ನಡಿಗರ ಗಮನ ಸೆಳೆದಿದ್ದಾರೆ. ಇನ್ನು ಇದೀಗ ಯಶ್ ಹೊಸ ಹೇರ್ ಸ್ಟೈಲ್ ನಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ರಾಕಿ ಭಾಯ್ ನ್ಯೂ ಲುಕ್ ಅವರ ಹೊಸ ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತಿದೆ. ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರಬಂದಿಲ್ಲ.

Yash New Hair Style
Image Source: MensXp

ಜಾಹಿರಾತುವಿಗಾಗಿ ಯಶ್ ಡಿಫರೆಂಟ್ ಲುಕ್
ಇನ್ನು ಯಶ್ ಮುಂದಿನ ಚಿತ್ರಕ್ಕೆ ಹೊಸ ಹೇರ್ ಸ್ಟೈಲ್ ನೊಂದಿಗೆ ತಯಾರಿ ಮಾಡುತ್ತಿದ್ದಾರೆ ಎನ್ನಲಾಗತ್ತಿದೆ. ಆದರೆ ಯಶ್ ಅವರು ಹೊಸ ಜಾಹಿರಾತು ಒಂದರಲ್ಲಿ ನಟಿಸಲಿದ್ದಾರೆ. ಒಳಉಡುಪಿನ ಜಾಹಿರಾತುವಿಗೆ ನಟಿಸುವ ಸಲುವಾಗಿ ಯಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರ ನ್ಯೂ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

Join Nadunudi News WhatsApp Group