Yogi Babu: ಈ ಖ್ಯಾತ ಹಾಸ್ಯ ನಟನ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ…? ನಟರಿಗಿಂತ ಹೆಚ್ಚು.

ಈ ಖ್ಯಾತ ಹಾಸ್ಯ ನಟನ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ...?

Actor Yogi Babu Remuneration: ಭಾರತೀಯ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ನಾಯಕ ನಟರು ಎಷ್ಟು ಮುಖ್ಯವೋ ಅದೇ ರೀತಿ ಹಾಸ್ಯ ನಟರು ಕೂಡ ಮುಖ್ಯವಾಗಿರುತ್ತದೆ. ಯಾವುದೇ ಸಿನಿಮಾಗಳಲ್ಲಿ ಕಾಮಿಡಿ ಇಲ್ಲ ಎಂದಾದರೆ ಅಂತಹ ಸಿನಿಮಾಗಳನ್ನು ನೋಡಲು ಜನರು ಇಷ್ಟಪಡುವುದಿಲ್ಲ. ಸಿನಿಮಾಗಳನ್ನು ನೋಡುವುದು ಎಂಟಟೈನ್ಮೆಂಟ್ ಗಾಗಿ. ಹೀಗುರುವಾಗ ಸಿನಿಮಾಗಳಲ್ಲಿ ಕಾಮಿಡಿ ಇಲ್ಲದಿದ್ದರೆ ಯಾರು ಕೂಡ ಅಂತಹ ಚಿತ್ರವನ್ನು ನೋಡಲು ಮನಸ್ಸು ಮಾಡುವುದಿಲ್ಲ.

ಸಿನಿಮಾಗಳನ್ನು ಮಾಡುವಾಗ ಬೆಸ್ಟ್ ಹೀರೋಗಳನ್ನು ಹುಡುಕುವ ಹಾಗೆ ಬೆಸ್ಟ್ ಆಗಿರುವ ಕಾಮಿಡಿ ಆರ್ಟಿಸ್ಟ್ ಗಳನ್ನೂ ಹುಡುಕುತ್ತಾರೆ. ಕಾಮಿಡಿ ಆರ್ಟಿಸ್ಟ್ ಗಳಿಗೂ ಕೂಡ ಹಿರೊಗಳಷ್ಟೇ ಬೇಡಿಕೆ ಇರುತ್ತದೆ. ಈಗಂತೂ ತಮಿಳು ಇಂಡಸ್ಟ್ರಿಯಲ್ಲಿ ಈ ಹಾಸ್ಯ ನಟ ಬಾರಿ ಬೇಡಿಕೆ ಪಡೆಯುತ್ತಿದ್ದಾರೆ. ಹೆಚ್ಚು ಬೇಡಿಕೆ ಪಡೆಯುತ್ತಿರುವುದರಿಂದ ಈ ನಟನ ಸಂಭಾವನೆ ಕೂಡ ಹೆಚ್ಚಾಗಿದೆಯಂತೆ. ಈ ಖ್ಯಾತ ಹಾಸ್ಯ ನಟನ ಒಂದು ದಿನದ ಸಂಭಾವನೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ನಿಜ.

Actor Yogi Babu Remuneration
Image Credit: ibtimes

ಈ ಹಾಸ್ಯ ನಟನಿಗೆ ಬಾರಿ ಬೇಡಿಕೆ
ಇನ್ನು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸುವ ಹಾಸ್ಯ ನಟ ಎಂದರೆ Vadivelu. ಬಹುತೇಕ ತಮಿಳು ಸಿನಿಮಾಗಳಲ್ಲಿ ವಡಿವೇಲು ನಟಿಸುತ್ತಾರೆ. ಇದೀಗ ವಡಿವೇಲು ಅವರ ಬದಲಿಗೆ ಇನ್ನೋರ್ವ ಹಾಸ್ಯ ನಟ ಅವರ ಸ್ಥಾನವನ್ನು ತುಂಬುತ್ತಿದ್ದಾರೆ. ಹೌದು, ನಟ Yogi Babu ಅವರ ಬಗ್ಗೆ ನೀವು ಕೇಳಿರಬಹುದು. ಯೋಗಿ ಬಾಬು ಇತ್ತೀಚಿಗೆ ಎಲ್ಲ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಯೋಗಿ ಬಾಬು ಅವರಿಗೆ ಆಫರ್ ನೀಡದೆ ಇರುವ ಸಿನಿಮಾಗಳೇ ಇಲ್ಲ ಎನ್ನಬಹುದು. ಸಾಲು ಸಾಲು ಸಿನಿಮಾಗಳು ಇವರ ಕೈಯಲ್ಲಿದೆ. ದಿನೇ ದಿನೇ ಯೋಗಿ ಬಾಬು ಅವರ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಸದ್ಯ ಯೋಗಿ ಬಾಬು ಅವರ ಸಂಭಾವನೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದುಬಾರಿ ಸಂಭಾವನೆ ಪಡೆಯುವ ಹಾಸ್ಯ ನಟರಲ್ಲಿ ಇದೀಗ ಯೋಗಿ ಬಾಬು ಮೊದಲಿಗರು ಎನ್ನಬಹುದು.

ಈ ಖ್ಯಾತ ಹಾಸ್ಯ ನಟನ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ…?
ಪ್ರಸ್ತುತ ನಾಯಕ ನಟನಾಗಿಯೂ ಕಾರ್ಯನಿರ್ವಹಿಸುತ್ತಿರುವ ನಟನಾ ವೃತ್ತಿಜೀವನದ ಬಗ್ಗೆ ಸಾಕಷ್ಟು ಮಾಹಿತಿ ವೈರಲ್ ಆಗುತ್ತಿದೆ. ಹೆಚ್ಚಾಗಿ ಯೋಗಿ ಬಾಬು ಅವರ ಸಂಭಾವನೆಯ ಬಗ್ಗೆ ಚರ್ಚೆ ಜೋರಾಗಿದೆ. ವರದಿಗಳ ಪ್ರಕಾರ, ಯೋಗಿ ಬಾಬು ದಿನಕ್ಕೆ 12 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದಾಗ್ಯೂ, ಈ ಮಾಹಿತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಈ ಹಿಂದೆ ಯೋಗಿ ಬಾಬು ಅವರ ಸಂಭಾವನೆ ಬಗ್ಗೆ ಹಲವು ವರದಿಗಳು ಬಂದಿದ್ದವು. ದಿನಕ್ಕೆ 10 ಲಕ್ಷ ರೂಪಾಯಿ ಗಳಿಸುತ್ತಿದ್ದರು ಎನ್ನಲಾಗಿದೆ. ಆದರೆ, ಮಾಧ್ಯಮ ಪೋರ್ಟಲ್‌ ಗೆ ನೀಡಿದ ಸಂದರ್ಶನದಲ್ಲಿ ತಮಿಳು ಹಾಸ್ಯನಟ ಇದನ್ನು ನಿರಾಕರಿಸಿದ್ದಾರೆ. ನಾನು ಯಾರಿಂದಲೂ ದಿನಕ್ಕೆ 10-15 ಲಕ್ಷ ಪಡೆದಿಲ್ಲ. 2,000-ರೂ.ರಿಂದ 3,000 ಸಂಭಾವನೆ ಪಡೆದು ಸಿನಿಮಾ ಮಾಡಲು ಆರಂಭಿಸಿದ್ದೇನೆ ಎಂದಿದ್ದರು. ಸದ್ಯ ಯೋಗಿ ಬಾಬು ಅವರ ಬೇಡಿಕೆ ಹೆಚ್ಚಿರುವ ಕಾರಣ ಇವರ ಸಂಭಾವನೆ ಹೆಚ್ಚಾಗಿದೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

Join Nadunudi News WhatsApp Group

Actor Yogi Babu Latest News
Image Credit: Oneindia

Join Nadunudi News WhatsApp Group