Actress Aarathi: ಒಂದು ಕಾಲದ ಟಾಪ್ ನಟಿ ಆರತಿ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ…? ಇಲ್ಲಿದೆ ಡೀಟೇಲ್ಸ್

ಅಮೆರಿಕದಲ್ಲಿರುವ ಹಿರಿಯ ನಟಿ ಆರತಿ ಆಗಾಗ ಕೋಲಾರಕ್ಕೆ ಭೇಟಿ ನೀಡಲು ಕಾರಣವೇನು..?

Actress Aarathi Life Story: ಭಾರತೀಯ ಚಿತ್ರರಂಗದಲ್ಲಿ 70 ರ ದಶಕದಲ್ಲಿ ಸಾಕಷ್ಟು ನಟಿಯರು ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಿದ್ದಾರೆ. ಅಂದಿನ ಕಾಲದ ನಟಿಯರು ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

70 ರ ದಶಕದಲ್ಲಿ ಬಣ್ಣ ಹಚ್ಚಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡ ನಟಿಯರಲ್ಲಿ Aarathi ಕೂಡ ಒಬ್ಬರು. ವಿಷ್ಣುವರ್ಧನ್, ರಾಜಕುಮಾರ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್ ಸೇರಿದಂತೆ ಅನೇಕ ಕಲಾವಿದರ ಜೊತೆ ನಟಿ ಆರತಿ ಅವರು ತೆರೆ ಹಂಚಿಕೊಂಡಿದ್ದಾರೆ.

Actress Aarathi Life Story
Image Credit: Kannada News Today

ಕನ್ನಡದ ಖ್ಯಾತ ಹಿರಿಯ ನಟಿ ಆರತಿ
ತಮ್ಮ ಅತ್ಯದ್ಭುತ ನಟನೆಯ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದಾರೆ. ಇನ್ನು ನಟಿ ಆರತಿ ಅವರು ತಮ್ಮ ಮದುವೆಯ ಬಳಿಕ ಸಿನಿ ಜೀವನದಿಂದ ದೂರ ವಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸದ್ಯ ಚಿತ್ರರಂಗದಿಂದ ದೂರ ಇದ್ದ ನಟಿ ವಿದೇಶದಲ್ಲಿ ವಾಸವಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ವಿದೇಶದಲ್ಲಿರುವ ನಟಿ ಆಗಾಗ ಕೋಲಾರಕ್ಕೆ ಭೇಟಿ ನೀಡುವುದು ಏಕೆ..? ಎನ್ನುವ ಬಗ್ಗೆ ಇದೀಗ ನಾವು ಮಾಹಿತಿ ತಿಳಿದುಕೊಳ್ಳೋಣ.

ಪುಟ್ಟಣ್ಣ ಕಣಗಾಲ್ ಹಾಗೂ ಆರತಿ ಅವರ ದಾಂಪತ್ಯ ಜೀವನ ಹೇಗಿತ್ತು..?
ನಟಿ ಆರತಿ ಅವರು ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಪ್ರೀತಿಸಿ 1976 ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ನಟಿ ಸ್ವಲ್ಪ ಸಮಯ್ದವರೆಗೆ ಸಾಂಸಾರಿಕ ಜೀವನದಲ್ಲಿ ಸುಖವಾಗಿದ್ದರು ಆದರೆ ಕೆಲವು ಭಿನ್ನಾಭಿಪ್ರಾಯಗಳು ಮೂಡಿದ ಕಾರಣ ಪುಟ್ಟಣ್ಣ ಕಣಗಾಲ್ ಮತ್ತು ಆರತಿ ವಿಚ್ಛೇದನ ಪಡೆದುಕೊಡಿದ್ದಾರೆ. ಇನ್ನು ವಿಚ್ಛೇದನದ ಬಳಿಕ ಆರತಿ ಅವರು ರಘುಪತಿ ಅವರ ಜೊತೆ ಸ್ನೇಹ ಬೆಳಸಿದ್ದರು. ಆದರೆ ಇವರ ಸ್ನೇಹ ಕೂಡ ಹೆಚ್ಚು ಕಾಲ ಉಳಿಯಲಿಲ್ಲ.

Puttanna Kanagal Wife Aarthi
Image Credit: News 18

ಅಮೆರಿಕದಲ್ಲಿರುವ ಆರತಿ ಆಗಾಗ ಕೋಲಾರಕ್ಕೆ ಭೇಟಿ ನೀಡುವುದು ಏಕೆ..?
ಇನ್ನು ಪುಟ್ಟಣ್ಣ ಕಣಗಾಲ್ ಅವರು ಮರಣ ಹೊಂದಿದ ನಂತರ ಆರತಿ ಅವರು ಚಂದ್ರಶೇಖರ್ ದೇಸಾಯಿ ಅವರನ್ನು ಮದುವೆಯಾಗಿ ಅಮೇರಿಕಾದಲ್ಲಿ ಸೆಟಲ್ ಆಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Join Nadunudi News WhatsApp Group

ಸದ್ಯ ಆರತಿ ಅವರು ತಮ್ಮ ಸಂಸಾರದೊಂದಿಗೆ ಅಮೇರಿಕಾದಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರಸ್ತುತ ನಟಿ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ನಟಿ ಆರತಿ 1986 ರಿಂದ ಚಿಂತ್ರರಂಗವನ್ನು ತೊರೆದಿದ್ದಾರೆ. ಇನ್ನು ಕೋಲಾರದ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಸಾಕಷ್ಟು ಜನರ ಜೀವನಕ್ಕೆ ನಟಿ ಆದರವಾಗಿದ್ದಾರೆ. ನಟಿ ಆಗಾಗ ಕೋಲಾರಕ್ಕೆ ಬಂದು ಹೋಗುತ್ತಾರಂತೆ.

Join Nadunudi News WhatsApp Group