Actress Aishwarya Rajesh: ರಶ್ಮಿಕಾ ಮಂದಣ್ಣ ನಟನೆ ಬಗ್ಗೆ ನಾನು ಏನು ಮಾತನಾಡಿಲ್ಲ, ಶ್ರೀವಲ್ಲಿ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಐಶ್ವರ್ಯ ರಾಜೇಶ್.

ಟಾಲಿವುಡ್ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಅವರು ಸಂದರ್ಶನ ಒಂದರಲ್ಲಿ ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ ಚೆನ್ನಾಗಿ ಮಾಡುತ್ತಿದ್ದೆ ಎಂಬ ಮಾತನ್ನು ಆಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೊಲ್ ಸಹ ಆಗಿದ್ದರು.

Rashmika Mandanna And Aishwarya Rajesh: ಕನ್ನಡ ಚಿತ್ರರಂಗದಿಂದ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಂತರ ಬಹುಭಾಷಾ ನಟಿಯಾಗಿ ಮಿಂಚಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದಿಂದ ಜನಪ್ರಿಯತೆ ಪಡೆದ ನಟಿ. ನಂತರ ಬಹುಬೇಡಿಕೆಯ ನಟಿಯಾಗಿ ಬೇರೆ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿದರು. ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ನ್ಯಾಷನಲ್ ಕ್ರಶ್ ಆಗಿ ಮಿಂಚುತ್ತಿದ್ದಾರೆ.

Rashmika Mandanna And Aishwarya Rajesh
Image Source: Koimoi

ಶ್ರೀವಲ್ಲಿ ಪಾತ್ರದ ಬಗ್ಗೆ ಟ್ರೊಲ್ ಆದ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಐಶ್ವರ್ಯ ರಾಜೇಶ್
ಈ ನಡುವೆ ಟಾಲಿವುಡ್ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಅವರು ಸಂದರ್ಶನ ಒಂದರಲ್ಲಿ ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾ ಮಂದಣ್ಣಕ್ಕಿಂತಲೂ ಚೆನ್ನಾಗಿ ಮಾಡುತ್ತಿದ್ದೆ ಎಂಬ ಮಾತನ್ನು ಆಡಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ಟ್ರೊಲ್ ಸಹ ಆಗಿದ್ದರು. ಆದರೆ ಇದೀಗ ಅವರು ಈ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

Rashmika Mandanna And Aishwarya Rajesh
Image Source: The Indian express

ಶ್ರೀವಲ್ಲಿ ಪಾತ್ರ ಎಂದರೆ ಇಷ್ಟ ಎಂದು ಹೇಳಿದ್ದೆ ಎಂದ ನಟಿ ಐಶ್ವರ್ಯ ರಾಜೇಶ್
ಈ ಕುರಿತು ಐಶ್ವರ್ಯಾ ರಾಜೇಶ್ ಅವರ ಪಿ.ಆರ್ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿ, ಇದೊಂದು ತಪ್ಪು ಕಲ್ಪನೆಯಿಂದ ಆದ ಪ್ರಮಾದ. ಯಾವುದೇ ಕಾರಣಕ್ಕೂ ಐಶ್ವರ್ಯಾ ಅವರು ಆ ರೀತಿ ಮಾತುಗಳನ್ನು ಆಡಿಲ್ಲ. ನಿಮ್ಮ ನೆಚ್ಚಿನ ಪಾತ್ರ ಯಾವುದು, ಯಾವ ರೀತಿಯ ಪಾತ್ರದಲ್ಲಿ ಕಾಣಲು ಬಯಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಪುಷ್ಪ ಸಿನಿಮಾದ ಶ್ರೀವಲ್ಲಿ ರೀತಿಯ ಪಾತ್ರಗಳು ಎಂದರೆ ನನಗೆ ಇಷ್ಟ. ಆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದೆ ಎಂದಿದ್ದಾರೆ.

Rashmika Mandanna And Aishwarya Rajesh
Image Source: News18

Join Nadunudi News WhatsApp Group

Join Nadunudi News WhatsApp Group