Alia Bhatt Baby: ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್, ಸಂತಸದಲ್ಲಿ ಗಂಡ ರಣಬೀರ್.

Alia Bhatt Baby: ಆಲಿಯಾ ಭಟ್ (Alia Bhatt) ದೇಶದ ಚಿತ್ರರಂಗದ ಟಾಪ್ ನಟಿ. ನಟಿ ಆಲಿಯಾ ಭಟ್ ಅವರು ಬಾಲಿವುಡ್ (Bollywood) ನ ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.

ನಟಿ ಆಲಿಯಾ ಭಟ್ ಅವರು RRR ಚಿತ್ರದಲ್ಲಿ ನಟನೆಯನ್ನ ಮಾಡುವುದರ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿಗಳನ್ನ ಗಳಿಸಿಕೊಂಡರು ಎಂದು ಹೇಳಿದರೆ ತಪ್ಪಾಗಲ್ಲ. RRR ಚಿತ್ರದ ನಂತರ ದೇಶದ ಇನ್ನೊಬ್ಬ ಖ್ಯಾತ ನಟರಾದ ರಣಬೀರ್ ಕಪೂರ್ (Ranbir Kapoor) ಅವರನ್ನ ಮದುವೆ ಮಾಡಿಕೊಂಡ ನಟಿ ಆಲಿಯಾ ಭಟ್ ಅವರು ಮದುವೆಯಾದ ತಿಂಗಳ ಒಳಗಾಗಿಯೇ ಸಿಹಿ ಸುದ್ದಿಯನ್ನ ನೀಡಿದರು.

ಹೌದು ಮದುವೆಯಾದ ಒಂದು ತಿಂಗಳ ಒಳಗಾಗಿಯೇ ನಟಿ ಆಲಿಯಾ ಭಟ್ ಅವರು ಗರ್ಭಿಣಿಯಾದರು (Alia Bhatt Pregnant).

Actress Alia Bhatt gave birth to a baby girl
Image Credit: economictimes.indiatimes

ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣರಾದ ಆಲಿಯಾ ಭಟ್
ಹೌದು ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೆಲವು ವರ್ಷಗಳ ಪ್ರೀತಿಮಾಡಿ ಮದುವೆಯನ್ನ ಮಾಡಿಕೊಂಡರು.

ನಟಿ ಆಲಿಯಾ ಭಟ್ ಅವರು ಗರ್ಭಿಣಿಯಾದ ನಂತರ ಅವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಹರಿದಾಡಿದವು. ಹೌದು ನಟಿ ಆಲಿಯಾ ಭಟ್ ಅವರು ಮದುವೆಯಾಗುವ ಮುನ್ನವೇ ಗರ್ಭಿಣಿಯಾಗಿದ್ದಾರೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಟಿಕೆ ಮಾಡಿದರು.

Join Nadunudi News WhatsApp Group

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್
ನಟಿ ಆಲಿಯಾ ಭಟ್ ಅವರು ಇಂದು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದು ಆ ಸಂತಸದ ಸುದ್ದಿಯನ್ನ ನಟ ರಣಬೀರ್ ಕಪೂರ್ ಅವರು ಹೇಳಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಸುದ್ದಿಯನ್ನ ಹಂಚಿಕೊಂಡಿರುವ ನಟ ರಣಬೀರ್ ಕಪೂರ್ ಅವರು ಇದು ನಮ್ಮ ಜೀವನದ ಬಹಳ ಸುಂದರ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಇಂದು ನಟಿ ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದು ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯ ಮೂಲಗಳಿಂದ ತಿಳಿದುಬಂದಿದೆ.

Alia Bhatt gave birth to a baby girl today
Image Credit: filmfare

ಜನರ ಟೀಕೆಗೆ ತಲೆಕೆಡಿಸಿಕೊಳ್ಳದ ಆಲಿಯಾ ಭಟ್ ಮತ್ತು ರಣಬೀರ್
ಜನರು ಸಾಮಾಜಿಕ ಜಾಲತಾಣದಲ್ಲಿ ಆಲಿಯಾ ಭಟ್ ಅವರು ಗರ್ಭಿಣಿಯಾಗಿರುವುದರ ಬಗ್ಗೆ ಸಾಕಷ್ಟು ಟಿಕೆಯನ್ನ ಮಾಡಿದ್ದರು. ಜನರು ಏನೇ ಮಾತನಾಡಿದರು ಅದಕ್ಕೆ ಉತ್ತರವನ್ನ ನೀಡಿದ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ತಮ್ಮ ಪಾಡಿಗೆ ತಾವು ಜೀವನವನ್ನ ಮಾಡುತ್ತಿದ್ದರು.

ಕೆಲವು ಸಮಯಗಳ ಹಿಂದೆ ಬೇಬಿ ಬಂಪ್ (Baby Bump) ಫೋಟೋ ಶೂಟ್ ಮಾಡಿಸಿಕೊಂಡಿದ್ದ ನಟಿ ಆಲಿಯಾ ಭಟ್ ಅವರು ಇಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮವನ್ನ ನೀಡಿದ್ದಾರೆ. ನಟ ರಣಬೀರ್ ಕಪೂರ್ ಅವರು ತಾವು ತಂದೆಯಾದ ಸಂತೋಷದ ಸುದ್ದಿಯನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರರಂಗದ ಅನೇಕ ಟಾಪ್ ನಟ ನಟಿಯರು ಮತ್ತು ಬಂಧು ಬಾಂಧವರು ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರಿಗೆ ಶುಭಾಶಯಗಳನ್ನ ತಿಳಿಸಿದ್ದಾರೆ.

Actress Alia Bhatt gave birth to a baby girl. Ranbir Kapoor shared the happy news of becoming a father
Image Credit: newsable.asianetnews

ನಾವು ಪೋಷರಕದ ಖುಷಿಯಲ್ಲಿ ಇದ್ದೇವೆ ಎಂದ ರಣಬೀರ್
ಸಾಮಾಜಿಅ ಜಾಲತಾಣದಲ್ಲಿ ಸಿಹಿ ಸುದ್ದಿಯನ್ನ ಶೇರ್ ಮಾಡಿರುವ ನಟ ರಣಬೀರ್ ಕಪೂರ್ ಅವರು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ನಾವು ಪೋಷಕರಾದ ಖುಷಿಯಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ಸದ್ಯ ನಟಿ ಆಲಿಯಾ ಭಟ್ ಅವರು ಆಸ್ಪತ್ರೆಯಲ್ಲಿ ಇದ್ದು ಮಗುವಿಗೆ ಫೋಟೋವನ್ನ ಯಾವಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ.

Join Nadunudi News WhatsApp Group