ಮೂರೂ ಘಂಟೆಗಳ ಆಪರೇಷನ್ ಮಾಡಿದ ಬಳಿಕ ವೈದ್ಯರು ದಿಗಂತ್ ಬಗ್ಗೆ ಹೇಳಿದ್ದೇನು ನೋಡಿ, ಹೇಗಿದ್ದಾರೆ ದಿಗಂತ್.

ನಟ ದಿಗಂತ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಎಂದು ಹೇಳಬಹುದು. ಹೌದು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟ ದಿಗಂತ್ ಕನ್ನಡ ಮಾತ್ರವಲ್ಲದೆ ಬೇರೆಬೇರೆ ಭಾಷೆಯ ಚಿತ್ರಗಳಲ್ಲಿ ಕೂಡ ನಟನೆಯನ್ನ ಮಾಡಿದ್ದಾರೆ. ಇನ್ನು ಕನ್ನಡ ಖ್ಯಾತ ನಟಿ ಐಂದ್ರಿತಾ ರಾಯ್ ಅವರನ್ನ ಮದುವೆಯಾಗಿರುವ ನಟ ದಿಗಂತ್ ಅವರು ಪತ್ನಿಯ ಜೊತೆ ಕಾಲವನ್ನ ಕಳೆಯಲು ಆಗಾಗ ಬೇರೆಬೇರೆ ಊರಿಗೆ ಹೋಗುತ್ತಲೇ ಇರುತ್ತಾರೆ ಎಂದು ಹೇಳಬಹುದು. ಇನ್ನು ನಿನ್ನೆ ಇಡೀ ರಾಜ್ಯವೇ ಶಾಕ್ ಆಗ್ಯಾನಾಟ ಘಟನೆ ನಡೆದಿದೆ. ಹೌದು ನಟ ಅವರಿಗೆ ಗೋವಾದಲ್ಲಿ ದೊಡ್ಡ ಏಟಾಗಿದ್ದು ಅವರಿಗೆ ತಕ್ಷಣ ಚಿಕಿತ್ಸೆಯನ್ನ ನೀಡಿ ನಂತರ ಅವರನ್ನ ಏರ್ ಲಿಫ್ಟ್ ಕೂಡ ಬೆಂಗಳೂರಿಗೆ ಕರೆತರಲಾಯಿತು ಎಂದು ಹೇಳಬಹುದು.

ಇನ್ನು ವೈದ್ಯರು ನಿನ್ನೆ ನಟ ದಿಗಂತ್ ಅವರ ಕುತ್ತಿಗೆಗೆ ದೊಡ್ಡ ಪೆಟ್ಟಾಗಿದ್ದು ಅವರಿಗೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದರು. ಇನ್ನು ಅದೇ ರೀತಿಯಲ್ಲಿ ಈಗ ನುರಿತ ವೈದ್ಯರು ನಟ ದಿಗಂತ್ ಅವರಿಗೆ ಸತತ ಮೂರೂ ಘಂಟೆಗಳ ಕಾಲ ಆಪರೇಷನ್ ಮಾಡಿದ್ದು ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನ ನೀಡಿದ್ದಾರೆ. ಹಾಗಾದರೆ ನಟ ದಿಗಂತ್ ಅವರಿಗೆ ಮೂರೂ ಘಂಟೆಗಳ ಕಾಲ ಆಪರೇಷನ್ ಮಾಡಿದ ವೈದ್ಯರು ಅವರ ಆರೋಗ್ಯದ ಬಗ್ಗೆ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

Actress dhigant in hospital

ಹೌದು ನಿನ್ನೆ ನಟ ದಿಗಂತ್ ಅವರಿಗೆ ಗೋವಾದ ಬಲವಾದ ಅಪಘಾತ ಆದಕಾರಣ ಅವರಿಗೆ ತಕ್ಷಣ ಚಿಕಿತ್ಸೆಯನ್ನ ನೀಡಿ ನಂತರ ಅವರನ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಕರೆತರಲಾಯಿತು. ಇನ್ನು ನಟ ದಿಗಂತ್ ಅವರಿಗೆ ಮೂರೂ ಘಂಟೆಗಳ ಕಾಲ ಆಪರೇಷನ್ ಮಾಡಿದ ವೈದ್ಯರು ಈಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಮತ್ತು ಇನ್ನೇನು ಕೆಲವೇ ದಿನಗಳಲ್ಲಿ ಅವರು ಮೊದಲಿನಂತೆ ಆಗುತ್ತಾರೆ ಎಂದು ಹೇಳಿದ್ದಾರೆ. ಇನ್ನು ಮೂರೂ ಅಥವಾ ನಾಲ್ಕು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಮತ್ತು ಅವರು ಕೆಲವು ದಿನಗಳ ಮನೆಯಲ್ಲಿ ಬೆಡ್ ರೆಸ್ಟ್ ನಲ್ಲಿ ಇರಬೇಕು ಎಂದು ವೈದ್ಯರು ಹೇಳಿದ್ದಾರೆ.

ಅಭಿಮಾನಿಗಳು ಯಾವುದೇ ಭಯಪಡುವ ಅಗತ್ಯ ಇಲ್ಲ ನಟ ಅವರು ಈಗ ಆರೋಗ್ಯವಾಗಿಯೇ ಇದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಪರೇಷನ್ ಆದನಂತರ ನಟ ದಿಗಂತ್ ಅವರ ಭಾವಚಿತ್ರವನ್ನ ವೈದ್ಯರು ಹಂಚಿಕೊಂಡಿದ್ದು ಆ ಫೋಟೋ ನೋಡಿದ ಬಳಿಕ ಎಲ್ಲರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಬಹುದು. ಸ್ವಲ್ಪ ಬಿಡುವು ಇರುವ ಕಾರಣ ನಟ ದಿಗಂತ್ ಅವರು ಪತ್ನಿ ಐಂದ್ರಿತಾ ರಾಯ್ ಜೊತೆ ಗೋವಾಗೆ ಹೋಗಿದ್ದು ಅಲ್ಲಿ ಸಾಹಸ ಕ್ರೀಡೆ ಆಡುವ ಸಮಯದಲ್ಲಿ ಈ ಅನಾಹುತ ಆಗಿದೆ ಎಂದು ತಿಳಿದುಬಂದಿದೆ. ನಟ ದಿಗಂತ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಾವು ನೀವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Actress dhigant in hospital

Join Nadunudi News WhatsApp Group