Leelavathi Hospital: ನಟಿ ಲೀಲಾವತಿ ಅವರ ಈ ಸಮಾಜಮುಖಿ ಕೆಲಸಕ್ಕೆ ಇಡೀ ದೇಶವೇ ತಲೆಬಾಗಿದೆ, ಈಗ ವಿನೋದ್ ರಾಜ್ ಜವಾಬ್ದಾರಿ

ಧಾನ ಧರ್ಮದ ಮೂಲಕ ಇಡೀ ಸಮಾಜಕ್ಕೆ ತಾಯಿಯಾದ ನಟಿ ಲೀಲಾವತಿ

Actress Leelavathi Animal Love: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಅವರು ಮಾಡದ ಸಾಧನೆಗಳಿಲ್ಲ.ಈಕೆ ಡಿಸೆಂಬರ್ 08 ರಂದು ಅನಾರೋಗ್ಯದಿಂದ ಹಾಸಿಗೆ ಹಿಡಿದ ಕಾರಣ ಮರಣ ಹೊಂದಿದ್ದಾರೆ. ಇವರ ಮರಣ ಸುದ್ದಿ ಕೇಳಿ ಅವರ ಆಪ್ತರು,ಅಭಿಮಾನಿಗಳು, ಇನ್ನಿತರ ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೇ ಈ ಹಿಂದೆ ಇವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ, ಅರ್ಜುನ್ ಸರ್ಜಾ, ಅಭಿಷೇಕ್ ಅಂಬರೀಷ್, ಶಿವರಾಜ್ ಕುಮಾರ್ ಹಾಗು ಹಲವು ನಟ ನಟಿಯರು ಬಂದು ನೋಡಿ ವಿನೋದ್ ರಾಜ್ ಕುಮಾರ್ ಅವರಿಗೆ ಸಾಂತ್ವನ ಹೇಳಿದ್ದರು. ಲೀಲಾವತಿ ಅಮ್ಮನನ್ನು ಕಳೆದುಕೊಂಡು ವಿನೋದ್ ರಾಜ್ ಬಹಳ ದುಕ್ಕಿತರಾಗಿದ್ದಾರೆ.

Leelavathi Animal Love
Image Credit: thesouthfirst

ಕೃಷಿಕರಾಗಿರುವ ಲೀಲಾವತಿ ಅಮ್ಮ

ಸಿನಿಮಾರಂಗದಲ್ಲಿ ಸಾಧನೆ ಮಾಡಿದ ಲೀಲಾವತಿ ಅಮ್ಮನವರಿಗೆ ಕೃಷಿ ಬಗ್ಗೆ ಬಹಳ ಆಸಕ್ತಿ ಇತ್ತು. ಇವರು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲೇ, ಸ್ವಲ್ಪ ಸಮಯವನ್ನು ಕೃಷಿಗೆಂದೇ ಮೀಸಲಿಡುತ್ತಿದ್ದರು. ನೆಲಮಂಗಲದಲ್ಲಿರುವ ತೋಟದ ಮನೆಯ ಪಕ್ಕ ಮಗ ವಿನೋದ್ ರಾಜ್ ಅವರ ಸಹಾಯ ಪಡೆದು ಹಲವು ಬೆಳೆಯನ್ನು ಬೆಳೆಸುತ್ತಿದ್ದರು. ಇವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆದ ಬಳಿಕ ಕೃಷಿ ಇವರ ಕೈ ಹಿಡಿದಿದ್ದು, ಕೃಷಿಯಲ್ಲಿ ಅಮ್ಮನಿಗೆ ಸಾಥ್ ಅನ್ನು ಮಗ ವಿನೋದ್ ರಾಜ್ ನೀಡುತ್ತಿದ್ದರು.

ಸಮಾಜ ಸೇವೆಯಲ್ಲಿ ಲೀಲಾವತಿ ಅಮ್ಮ ಎತ್ತಿದ ಕೈ

Join Nadunudi News WhatsApp Group

ಲೀಲಾವತಿ ಅಮ್ಮನವರ ದೊಡ್ಡ ಆಸೆಯೆಂದರೆ ಹಳ್ಳಿಯ ಬಡ ಜನರಿಗೆ ಆಸ್ಪತ್ರೆ ಕಟ್ಟಿಸಿಕೊಡುವುದಾಗಿತ್ತು. ಹಲವು ಏಳುಬೀಳಿನ ಜೊತೆಗೆ ಕೊನೆಗೆ ಆಸ್ಪತೆಯನ್ನು ಕಟ್ಟಿಸಿದರು. ಲೀಲಾವತಿ ಅಮ್ಮನವರು ಅನೇಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದರು.

ಬಡ ಕಲಾವಿದರಿಗೆ ಜೀವನಕ್ಕೆ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು ಮಾಶಾಸನ ನೀಡುವ ವ್ಯವಸ್ಥೆ ಮಾಡಿದ್ದರು. ಅನೇಕ ಕಲಾವಿದರ ಜೀವನ ಇದರಿಂದ ನಡೆಯುತ್ತಿದೆ. ಸಿನಿಮಾ ಮತ್ತು ಕೃಷಿಯಿಂದ ತಾವು ಸಂಪಾದಿಸಿದ ಹಣದಲ್ಲಿ ಬಹುಪಾಲು ಮೊತ್ತವನ್ನು ಅವರು ಈ ರೀತಿಯ ಸಮಾಜಮುಖಿ ಕೆಲಸಕ್ಕೆ ನೀಡಿದ್ದಾರೆ. ದೇವರು ಮೆಚ್ಚುವಂತಹ ಇಂಥ ಕಾರ್ಯಗಳನ್ನು ಮಾಡಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ್ದಾರೆ.

Actress Leelavathi as a farmer, animal lover, and a devoted mother
Image Credit: TV9 Kannada

ಪ್ರಾಣಿಗಳನ್ನು ಮಕ್ಕಳಂತೆ ಕಾಣುವ ಲೀಲಾವತಿ

ಲೀಲಾವತಿ ಅಮ್ಮನವರಿಗೆ ಪ್ರಾಣಿಗಳೆಂದರೆ ಪಂಚ ಪ್ರಾಣ. ತಮ್ಮ ಮನೆ ಮತ್ತು ತೋಟದ ಬಳಿ ಬರುವ ನವಿಲು ಮುಂತಾದ ಪಕ್ಷಿಗಳಿಗೆ ಅವರು ಆಹಾರ ನೀಡುತ್ತಿದ್ದರು. ಬೀದಿ ನಾಯಿಗಳಿಗೂ ಊಟ ಹಾಕುತ್ತಿದ್ದರು. ತಮ್ಮ ಮನೆಯಲ್ಲಿನ ಹಲ್ಲಿಗೂ, ಇರುವೆಗಳಿಗೂ ಖುಷಿಯಿಂದ ಅವರು ಆಹಾರ ನೀಡುತ್ತಿದ್ದರು.

ಪ್ರಾಣಿಗಳ ಮೇಲಿದ್ದ ಅಪಾರ ಪ್ರೀತಿಯಿಂದ ತಮ್ಮ ಸ್ವಂತ ಖರ್ಚಿನಲ್ಲಿ ಪಶು ಆಸ್ಪತ್ರೆಯನ್ನು ಕಟ್ಟಿಸಿದರು. ಅದಕ್ಕಾಗಿ ಅವರು ಖರ್ಚು ಮಾಡಿದ್ದು ಬರೋಬ್ಬರಿ 45 ಲಕ್ಷ ರೂಪಾಯಿ. ಕೆಲವೇ ದಿನಗಳ ಹಿಂದೆ ಈ ಆಸ್ಪತ್ರೆ (Veterinary Hospital) ಉದ್ಘಾಟನೆ ಆಯಿತು. ಆ ಸತ್ಕಾರ್ಯದಿಂದ ಸಮಾಧಾನಗೊಂಡ ಬಳಿಕವೇ ಲೀಲಾವತಿ ಅವರು ಕೊನೆಯುಸಿರೆಳೆದರು.

Join Nadunudi News WhatsApp Group