Mahalakshmi: ಮಹಾಲಕ್ಷ್ಮಿಗೆ ಮಹಾಮೋಸ ಮಾಡಿದ ರವೀಂದರ್, ಮಾಧ್ಯಮದ ಮುಂದೆ ಗಳಗಳನೆ ಕಣ್ಣೀರು ಹಾಕಿದ ಮಹಾಲಕ್ಷ್ಮಿ.

ಪತಿ ವಿರುದ್ಧ ಅಸಮಾಧಾನಗೊಂಡ ಮಹಾಲಕ್ಷ್ಮಿ.

Actress Mahalakshmi and producer Ravinder Chandrasekaran: Social Media ದಲ್ಲಿ ಆಗಾಗ ವೈರಲ್ ಆಗುವ ಮಹಾಲಕ್ಷ್ಮಿ (Mahalakshmi) ಹಾಗೂ ತಮಿಳಿನ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravindar Chandrasekaran) ಇದೀಗ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು Social ಮೀಡಿಯಾದಲ್ಲಿ Miss Match ಜೋಡಿಯೆಂದೇ ಹೆಚ್ಚು ಖ್ಯಾತಿ ಪಡೆದಿದ್ದಾರೆ. ನೆಟ್ಟಿಗರ ಟ್ರೊಲ್ ಗೆ ತಲೆಕೆಡಿಸಿಕೊಳ್ಳದೆ ನಾವು Perfect Pair ಎಂದು ತೋರಿಸಲು ಆಗ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಅನ್ಯೋನ್ಯತೆಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

Actress Mahalakshmi and producer Ravinder Chandrasekhar
Image Credit: B4blaze

ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್
ಮಹಾಲಕ್ಷ್ಮಿ ಮತ್ತು ರವೀಂದರ್ ಚಂದ್ರಶೇಖರನ್ ಇಬ್ಬರದೂ ಎರಡನೇ ಮದುವೆ. ಇವರಿಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ 1 ರಂದು ಮದುವೆ ಆಗಿದ್ದಾರೆ. ಮದುವೆ ಬೆನ್ನಲ್ಲೇ ನವದಂಪತಿ ಸನ್​ ಟಿವಿಗೆ ಸಂದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಅವರಿಗೆ ಹಣಕ್ಕಾಗಿ ಮದುವೆಯಾದ್ರಾ ಎಂದು ಪ್ರಶ್ನಿಸಲಾಗಿತ್ತು. ಏಕೆಂದರೆ, ಅನೇಕರ ಮನದಲ್ಲಿಯೂ ಇದೇ ಪ್ರಶ್ನೆ ಇದೆ, ಕಾಮೆಂಟ್​ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು.

ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸಬಲಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್​ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್​ ಮಾಡಿದರು. ಮಸೇಜ್​ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದರು.

Mahalakshmi And Ravinder Chandrasekhar Latest News
Image Credit: News18

ನಿರ್ಮಾಪಕ ರವೀಂದರ್ ಜೈಲುಪಾಲು
ನಿರ್ಮಾಪಕ ರವೀಂದರ್ ಚೆನ್ನೈನ ಬಾಲಾಜಿ ಗಾಬಾ ತಮ್ಮಾ ಮಾಧ್ಯಮ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಬಾಲಾಜಿ ಎಂಬುವವರಿಂದ 16 ಕೋಟಿ ಹಣವನ್ನು ಹೂಡಿಕೆಯ ಹೆಸರಿನಲ್ಲಿ ವಂಚಿಸಿದ್ದಾರೆ. ರವೀಂದರ್ ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು.

Join Nadunudi News WhatsApp Group

ದೂರಿನ ಆಧಾರದ ಮೇಲೆ ರವೀಂದರ್‌ ಅವರನ್ನು ಬಂಧಿಸಲಾಗಿದೆ. ಇನ್ನು ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆದು ಇದೀಗ ಮಹಾಲಕ್ಷ್ಮಿ ಪತಿ ಜೈಲಿನ ಕಂಬಿ ಹಿಂದಿದ್ದಾರೆ. ರವೀಂದರ್​ ಅವರು ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸದ್ಯ ಜೈಲಿನಲ್ಲಿದ್ದಾರೆ. ಇಂತಹ ಅಕ್ರಮ ಚಟುವಟಿಕೆಯಲ್ಲಿ ರವೀಂದರ್​ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈತನ ವಿರುದ್ಧ ಈಗಾಗಲೇ 3-4 ಪ್ರಕರಣಗಳಿವೆ ಎಂದೂ ಹೇಳಲಾಗಿದೆ.

Ravindar Chandrasekaran Latest Update
Image Credit: Filmibeat

ಪತಿ ವಿರುದ್ಧ ಅಸಮಾಧಾನಗೊಂಡ ಮಹಾಲಕ್ಷ್ಮಿ
ನಿರ್ಮಾಪಕ ರವೀಂದರ್ ಮಾಡಿರುವ ವಂಚನೆ ಬಗ್ಗೆ ತಿಳಿದು ನಟಿ ಮಹಾಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಮದುವೆಗೂ ಮುನ್ನ ಇದ್ಯಾವುದನ್ನೂ ತಿಳಿಸದೇ ಮದುವೆಯಾದರು. ಮದುವೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ಮಹಾಲಕ್ಷ್ಮಿ ನೊಂದುಕೊಂಡಿದ್ದಾರೆ, ಈಗ ನಟಿ ಮಹಾಲಕ್ಷ್ಮಿ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group