Actress Ramya: ಬಜರಂಗದಳ ನಿಷೇಧದ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ, ಜನರ ಮೆಚ್ಚುಗೆಗೆ ಕಾರಣರಾದ ರಮ್ಯಾ.

ಬಜರಂಗದಳ ನಿಷೇಧದ ಬಗ್ಗೆ ಮಾತನಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ನಟಿ ರಮ್ಯಾ.

Actress Ramya About Bajarang Dal: ಸ್ಯಾಂಡಲ್ ವುಡ್ ಸ್ಟಾರ್ ನಟಿ ರಮ್ಯಾ (Ramya) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಮತ್ತೆ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. ಇನ್ನು ನಟಿ ರಮ್ಯಾ ಕರ್ನಾಟಕ ವಿಧಾನಸಭಾ ಚುನಾವಣೆಯ (Assembly Election) ಅಂಗವಾಗಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಮಂಡ್ಯ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ನಟಿ ರಮ್ಯಾ ತೊಡಗಿದ್ದಾರೆ. ಇದೀಗ ಚುನಾವಣಾ ಪ್ರಚಾರದ ವೇಳೆ ನಟಿ ರಮ್ಯಾ ಬಜರಂಗದಳ (Bajarang dal) ನಿಷೇಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Actress Ramya About Bajarang Dal
Image Credit: publictv

ಬಜರಂಗದಳ ನಿಷೇಧದ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ
ಚಂದನವನದ ನಟಿ, ಮಾಜಿ ಸಂಸದೆ ರಮ್ಯಾ ಇದೀಗ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಈ ವೇಳೆ ಬಜರಂಗದಳ ನಿಷೇಧ ಎನ್ನುವ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

“ಬಜರಂಗ ದಳ ನಿಷೇಧ ಎನ್ನುವುದು ನನ್ನ ವೈಯಕ್ತಿಕವಾಗಿ ಸರಿಯಲ್ಲ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗು ಮುಕ್ತ ಅವಕಾಶವಿದೆ. ಬಜರಂಗ ದಳ ಎಷ್ಟೇ ಏಕೆ ಸಮಾಜದಲ್ಲಿ ಯಾರೇ ಅಶಾಂತಿ, ಗಲಭೆ ಸ್ರಷ್ಟಿ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೂಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಈ ನಿಟ್ಟಿನಲ್ಲಿ ಧಾರ್ಮಿಕವಾಗಿ ನಿಂದಿಸುವವರ ವಿರುದ್ಧ ಕ್ರಮವಾಗಬೇಕು” ಎಂದು ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ.

Ramya about Bhajrang dal
Image Credit: thelallantop

ನಟಿ ರಮ್ಯಾ ಇದೀಗ ಚುನಾವಣೆಯ ಜೊತೆಗೆ ಸಿನಿಮಾದಲ್ಲಿ ಕೂಡ ಬ್ಯುಸಿ ಆಗಿದ್ದಾರೆ. ಕನ್ನಡದ ಖ್ಯಾತ ನಟರಾದ ಡಾಲಿ ಧನಂಜಯ್ ಅವರ ಜೊತೆ ಉತ್ತರಾಖಂಡ ಚಿತ್ರದಲ್ಲಿ ರಮ್ಯಾ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಹಲವು ವರ್ಷಗಳ ಬಳಿಕ ಮತ್ತೆ ರಮ್ಯಾ ಚಿತ್ರರಂಗಕ್ಕೆ ಮರಳಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ. ಇನ್ನು ಈ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು ಸದ್ಯದಲ್ಲೆ ತೆರೆಯ ಮೇಲೆ ಬರಲಿದೆ.

Join Nadunudi News WhatsApp Group

Join Nadunudi News WhatsApp Group