Ramya Tweeted About Pathan: ಪಠಾಣ್ ಚಿತ್ರವನ್ನು ಹೊಗಳಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ.

Actress Ramya Tweeted About Pathan Movie: ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಹಾಗು ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ (Pathan) ಸಿನಿಮಾದ ಅಬ್ಬರ ಎಲ್ಲೆಡೆ ಜೋರಾಗಿಯೇ ಕೇಳಿಬರುತ್ತಿದೆ. ಪಠಾಣ್ ಚಿತ್ರ ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ.

Sandalwood Queen Ramya praised the Pathan film.
Image Credit: instagram

ಇನ್ನು ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯಲು ಮುಂದಾಗಿದೆ. ಈಗಾಗಲೇ ಪಠಾಣ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 219 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿದೆ. ಇದೀಗ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Sandalwood Queen Ramya) ಪಠಾಣ್ ಚಿತ್ರದ ಪರ ಮಾತನಾಡಿದ್ದಾರೆ.

ಪಠಾಣ್ ಚಿತ್ರವನ್ನು ಹೊಗಳಿದ ನಟಿ ರಮ್ಯಾ
ನಟಿ ರಮ್ಯಾ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಟ್ವೀಟ್ ಮಾಡುವ ಮೂಲಕ ಪಠಾಣ್ ಸಿನಿಮಾವನ್ನು ಹೊಗಳಿದ್ದಾರೆ.

Actress Ramya spoke about the film Pathan
Image Credit: instagram

“ಶಾರುಖ್ ಖಾನ್! ದೀಪಿಕಾ ಪಡುಕೋಣೆ! ಜಾನ್ ಅಬ್ರಹಾಂ! ಡಿಂಪಲ್ ಕಪಾಡಿಯಾ! ಸಲ್ಲು ಭಾಯ್! ಪಠಾಣ್ ಸಿನಿಮಾ ಹೆಚ್ಚು ಮನರಂಜನೆ ಮತ್ತು ಆಕರ್ಷಕವಾಗಿ ಮೂಡಿಬಂದಿದೆ. ಕಲಾತ್ಮಕ ಸ್ವಾತಂತ್ರ್ಯವನ್ನು ಬೆಂಬಲಿಸುವ ನಾನು ಈ ಸಿನಿಮಾ ವೀಕ್ಷಿಸಿದ್ದೇನೆ. ಇಡೀ ತಂಡ ಅದನ್ನು ಸಾರ್ಥಕಗೊಳಿಸಿದೆ” ಎಂದು ನಟಿ ರಮ್ಯಾ ಟ್ವೀಟ್ ಮಾಡಿದ್ದಾರೆ.

Join Nadunudi News WhatsApp Group

ಈ ಹಿಂದೆ ನಟಿ ರಮ್ಯಾ ದೀಪಿಕಾ ಪಡುಕೋಣೆ ಪರ ನಿಂತಿದ್ದರು. ಕೇಸರಿ ಬಿಕಿನಿ ವಿವಾದದ ಕಾರಣ ನಟಿ ದೀಪಿಕಾ ಪಡುಕೋಣೆ ಅವರನ್ನು ಹೆಚ್ಚಾಗಿ ಟ್ರೋಲ್ ಮಾಡಲಾಗಿತ್ತು. ಹಾಗಾಗಿ ನಟಿ ರಮ್ಯಾ ಟ್ರೋಲರ್ಸ್ ವಿರುದ್ಧ ಕಿಡಿಕಾರಿದ್ದರು.

Actress Ramya expressed appreciation for Shahrukh Khan Pathan
Image Credit: instagram

“ಮಹಿಳೆಯರು ದುರ್ಗಾಮಾತೆಯ ಪ್ರತಿರೂಪ. ಸ್ತ್ರೀ ದ್ವೇಷ ಒಂದು ಅನಿಷ್ಟ ಪದ್ಧತಿ. ನಾವೀಗ ಇದರ ವಿರುದ್ಧ ಹೋರಾಡಬೇಕಿದೆ” ಎಂದು ನಟಿ ರಮ್ಯಾ ಈ ಹಿಂದೆ ಟ್ವೀಟ್ ಮಾಡುವ ಮೂಲಕ ದೀಪಿಕಾ ಪಡುಕೋಣೆ ಪರ ನಿಂತಿದ್ದರು. ಇದೀಗ ನಟಿ ರಮ್ಯಾ ಪಠಾಣ್ ಚಿತ್ರವನ್ನು ವೀಕ್ಷಿಸಿ ಹಾಡಿ ಹೊಗಳಿದ್ದಾರೆ.

Join Nadunudi News WhatsApp Group