Sai Pallavi: ಈ ಒಂದು ಕಾರಣಕ್ಕೆ ಇನ್ನು ಮದುವೆಯಾಗದೆ ಸಿಂಗಲ್ ಆಗಿದ್ದಾರೆ ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ಇನ್ನು ಮದುವೆ ಆಗದೆ ಇರಲು ಕಾರಣ ಏನು ಎಂದು ಮನಬಿಚ್ಚಿ ಹೇಳಿದ್ದಾರೆ

Actress Sai Pallavi About Marriage: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಬಗ್ಗೆ ಹೆಚ್ಚಿನವರಿಗೆ ತಿಳಿದಿದೆ. ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡ ಈ ನಟಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾ ನಟನೆಯಲ್ಲಿ ಬ್ಯುಸಿ ಆಗಿರುವ ಈ ನಟಿ ಇನ್ನು ಮದುವೆ ಆಗದೆ ಹಾಗೆ ಉಳಿದಿರುವ ಬಗ್ಗೆ ಕೆಲವು ಮಾಹಿತಿಗಳು ಹೊರಬಿದ್ದಿದೆ.

ಅಷ್ಟೇ ಅಲ್ಲದೆ ನಟಿ ಸಾಯಿ ಪಲ್ಲವಿ ಅವರ ಸಹೋದರಿಯ ಮದುವೆ ಕಾರ್ಯಕ್ರಮದ ಫೋಟೋಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಾದರೆ ಸಾಯಿ ಪಲ್ಲವಿ ತನ್ನ ಮದುವೆಯ ವಿಚಾರವನ್ನು ಯಾಕೆ ಮುಂದೂಡಿದ್ದಾರೆ ಎನ್ನುವುದರ ಕುರಿತು ತಿಳಿಯೋಣ.

Actress Sai Pallavi About Marriage
Image Credit: News 18

23 ನೇ ವಯಸ್ಸಿನಲ್ಲಿ ಮದುವೆಯಾಗಿ 30 ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾಗಲು ಬಯಸಿದ ನಟಿ

ನಟಿ ಸಾಯಿ ಪಲ್ಲವಿ ಇವರು ಬಹಳ ಪ್ರಸಿದ್ದಿ ಪಡೆದ ನಟಿಯಾಗಿದ್ದು, ಅವರ ಕೆಲವು ವಯಕ್ತಿಕ ವಿಚಾರಗಳ ಬಗ್ಗೆ ಹಲವು ವಾಹಿನಿಗಳಿಗೆ ಸಂದರ್ಶನ ಸಮಯದಲ್ಲಿ ಹಂಚಿಕೊಂಡಿದ್ದಾರೆ. “ನಾನು 18 ವರ್ಷದವಳಿದ್ದಾಗ 23 ವರ್ಷಕ್ಕೆ ಮದುವೆಯಾಗಬೇಕು. 30 ವರ್ಷಕ್ಕಿಂತ ಮುಂಚೆಯೇ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ.

MBBS ಮಾಡುವ ಆರಂಭದಲ್ಲಿ ನಾನು ಹಾಗೆ ಯೋಚಿಸಿದೆ. ಆದರೆ ನಂತರ ನಾನು ಆ ನಿರ್ಧಾರಗಳನ್ನು ಬದಲಾಯಿಸಿದೆ. ನಮ್ಮ ಮನೆಯ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಾನು ತೆಗೆದುಕೊಳ್ಳಬೇಕಾಗಿರುವುದರಿಂದ ನಾನು ಮದುವೆಯನ್ನು ಮುಂದೂಡಿದೆ. ಆದರೆ ನಟಿಯಾಗಿ ಒಳ್ಳೆ ಹೆಸರು ಬಂದಿದ್ದರಿಂದ ಮದುವೆಗೆ ಇನ್ನು ಕಾಲಾವಕಾಶ ಇದೆ.. ಮತ್ತೊಂದೆಡೆ ನಾನು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು” ಎಂದು ಹೇಳಿದ್ದರು.

Join Nadunudi News WhatsApp Group

Actress Sai Pallavi Latest News
Image Credit: Hindustantimes

ಸಹೋದರಿ ಮದುವೆಯಲ್ಲಿ ಮಿಂಚಿದ ನಟಿ ಸಾಯಿ ಪಲ್ಲವಿ

ಕೆಲವು ಸಮಯಗಳ ಹಿಂದೆ ಸಾಯಿ ಪಲ್ಲವಿ ಸಹೋದರಿ ಪೂಜಾ ಕಣ್ಣನ್ ಅವರ ನಿಶ್ಚಿತಾರ್ಥವನ್ನೂ ಅವರೇ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ. ಹಾಗೆಯೆ ಈಗ ಸಹೋದರಿ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು, ಮದುವೆಯ ತಯಾರಿಯಲ್ಲಿ ಸಾಯಿ ಪಲ್ಲವಿ ಓಡಾಡುತ್ತಿರುವುದು ಹಾಗು ತನ್ನ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಹ ಹಂಚಿಕೊಂಡಿದ್ದಾರೆ.

Join Nadunudi News WhatsApp Group