Shah Rukh Khan Fitness Secret: ಫಿಟ್ ಆಗಿರಲು ಈ ಆಹಾರವನ್ನು ಸೇವಿಸುತ್ತಾರೆ ಶಾರುಖ್ ಖಾನ್, ಶಾರುಖ್ ಖಾನ್ ಆಹಾರ ಪದ್ಧತಿ .

Actor Shah Rukh Khan Lifestyle: ನಟ ಬಾಲಿವುಡ್ ಕಿಂಗ್ ಶಾರುಖ್ ಖಾನ್ (Bollywood King Shah Rukh Khan) ಇದೀಗ ಪಠಾಣ್ ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ಇದ್ದಾರೆ.

ಶಾರುಖ್ ಖಾನ್ ನಟನೆಯ ಪಠಾಣ್ (Pathaan) ಸಿನಿಮಾ ದೇಶದಾದ್ಯಂತ ತೆರೆ ಕಂಡಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ನಟ ಶಾರುಖ್ ಖಾನ್ ನಟನೆಯ ಹಲವು ಸಿನಿಮಾಗಳು ಹಿಟ್ ಆಗಿದ್ದು ಶಾರುಖ್ ಖಾನ್ ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actor Shah Rukh Khan Lifestyle
Image Source: India Today

ಪಠಾಣ್ ಸಿನಿಮಾಗಾಗಿ ಡಯಟ್ ಮಾಡಿದ ಶಾರುಖ್ ಖಾನ್
ಬಾಲಿವುಡ್ ಇಂಡಸ್ಟ್ರಿಯ ಮೆಗಾಸ್ಟಾರ್ ಶಾರುಖ್ ಖಾನ್ ಪ್ರಪಂಚದಾದ್ಯಂತ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರು. ಅವರು ವಿಶ್ವಖ್ಯಾತ ನಟ ಅಲ್ಲದೆ ಅಧಿಕ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಪಠಾಣ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮವನ್ನು ಪಟ್ಟಿದ್ದಾರೆ. ನಟ ಶಾರುಖ್ ಖಾನ್ ಪಠಾಣ್ ಚಿತ್ರದಲ್ಲಿ 8 ಪ್ಯಾಕ್ ಎಬಿಎಸ್ ಮಾಡಲು ಅವರು ಡಯಟ್ ಅನುಸರಿಸಿದ್ದಾರೆ.

Actor Shah Rukh Khan Lifestyle
Image Source: India Today

ನಟ ಶಾರುಖ್ ಖಾನ್ ಸೇವಿಸುವ ಆಹಾರಗಳು
ನಟ ಶಾರುಖ್ ಖಾನ್ ಸ್ಕಿನ್ ಲೆಸ್ ಚಿಕನ್, ಮೊಟ್ಟೆಯ ಬಿಳಿಭಾಗ, ಬೇಳೆಕಾಳುಗಳು, ಕೊಬ್ಬು ರಹಿತ ಹಾಲು ಮತ್ತು ನೇರ ಮಾಂಸ ಅವರ ಆಹಾರದ ಪ್ರಮುಖ ಭಾಗವಾಗಿದೆ. ಈ ನಿಯಮಿತ ಆಹಾರವು ಮ್ಯಾಕ್ರೋನ್ಯೂಟ್ರಿಯೆಂಟ್ ಗಳಲ್ಲಿ ಸಮೃದ್ದವಾಗುವ ಕಚ್ಚಾ ಅಥವಾ ಹುರಿದ ತರಕಾರಿಗಳನ್ನು ಸಹ ಒಳಗೊಂಡಿರುತ್ತದೆ.

Join Nadunudi News WhatsApp Group

ಅವರು ಕೃತಕ ಸಕ್ಕರೆ ಮತ್ತು ಸಂಸ್ಕ್ರಸಿದ ಧಾನ್ಯಗಳನ್ನು ಸೇವಿಸುವುದಿಲ್ಲ. ತಾಜಾ ಹಣ್ಣುಗಳನ್ನು ಶಾರುಖ್ ಖಾನ್ ತಿನ್ನುತ್ತಾರೆ. ಬೆಳಗಿನ ಉಪಾಹಾರದಲ್ಲಿ ಶಾರುಖ್ ಖಾನ್ ಮೊಟ್ಟೆ ಮತ್ತು ಸಲಾಡ್ ತಿನ್ನುತ್ತಾರೆ.

Actor Shah Rukh Khan Lifestyle
Image Source: Times Of India

ನಟ ಶಾರುಖ್ ಖಾನ್ ಯಾವಾಗಲು ನೀರು ಮತ್ತು ಇತರ ದ್ರವ ರೂಪದ ಆಹಾರಗಳಾದ ತೆಂಗಿನ ನೀರು, ಹಣ್ಣಿನ ರಸ ಇತ್ಯಾದಿಗಳನ್ನು ಕುಡಿಯುತ್ತಾರೆ. ಇದಲ್ಲದೆ ಅವರು ಪ್ರೊಟೀನ್ ಭರಿತ ಆಹಾರ ಮತ್ತು ಕಾರ್ಬೋಹೈಡ್ರೇಟ್ ಗಳಿಂದ ತಯಾರಿಸಿದ ತಿಂಡಿಗಳನ್ನು ವರ್ಕೌಟ್ ಮುಂಚೆ ತಿನ್ನುತ್ತಾರೆ. ಅವರು ಬ್ಲಾಕ್ ಕಾಫಿಯನ್ನು ಕುಡಿಯುತ್ತಾರೆ.

Actor Shah Rukh Khan Lifestyle
Image Source: India Today

Join Nadunudi News WhatsApp Group