Sridevi Sister: ಶ್ರೀದೇವಿ ಸಾಯುವ ಮುನ್ನ ಅವರ ತಂಗಿ ಮಾಡಿದ್ದೇನು ಗೊತ್ತಾ…? ಅಕ್ಕನಿಗೆ ಶತ್ರುವಾದ ತಂಗಿ.

ಶ್ರೀದೇವಿ ಸಾವಿಗೂ ಮುನ್ನ ತಂಗಿ ಶ್ರೀಲತಾ ಮಾಡಿದ್ದೇನು ನೋಡಿ

Actress Sridevi Life Story: ಸೌತ್ ನ ಸ್ಟಾರ್ ನಟಿ ಶ್ರೀದೇವಿ (Sridevi) ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ. ಆ ಕಾಲದಲ್ಲಿ ಟಾಪ್ ಹೀರೋಯಿನ್ ಗಳ ಪಟ್ಟಿಯಲ್ಲಿ ಶ್ರೀದೇವಿ ಮೊದಲ ಸ್ಥಾನದಲ್ಲಿದ್ದರು ಎಂದರೆ ತಪ್ಪಾಗಲಾರದು. ಈಗಲೂ ಶ್ರೀದೇವಿ ಅವರ ಚಿತ್ರಗಳನ್ನು ಇಷ್ಟಪಟ್ಟು ನೋಡುವ ಸಾಕಷ್ಟು ಜನರಿದ್ದಾರೆ. ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿ ಶ್ರೀದೇವಿ ಅವರು ಚಿತ್ರರಂಗದಲ್ಲಿ ಕೆಲವು ವರ್ಷಗಳು ಮಾತ್ರ ಕೆಲಸ ಮಾಡಿದರು ಕೂಡ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಶ್ರೀದೇವಿ ಅವರ ಮರಣದ ನಂತರ ಚಿತ್ರರಂಗ ಬಹುದೊಡ್ಡ ಪ್ರತಿಭೆಯನ್ನೇ ಕಳೆದುಕೊಂಡಿದೆ ಎನ್ನಬಹುದು. ಈಗಲೂ ಕೂಡ ಶ್ರೀದೇವಿ ಅವರನ್ನು ನೆನೆದುಕೊಳ್ಳುವ ಸಾಕಷ್ಟು ಜನರಿದ್ದಾರೆ. ಇನ್ನು ಶ್ರೀದೇವಿ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಶ್ರೀದೇವಿ ಅವರ ಕೊನೆಯ ಕ್ಷಣಗಳಲ್ಲಿ ಆಕೆಯ ತಂಗಿಯೇ ಶತ್ರು ಆಗಿದ್ದರಂತೆ. ಇದರ ಹಿಂದಿನ ಕಾರಣ ಏನಿರಬಹುದು…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.

actress sridevi news
Image Credit: Original Source

ಶ್ರೀದೇವಿ ಸಾಯುವ ಮುನ್ನ ಅವರ ತಂಗಿ ಮಾಡಿದ್ದೇನು ಗೊತ್ತಾ…?
ಶ್ರೀದೇವಿ ಅವರ ತಂಗಿ ಶ್ರೀಲತಾ ಅವರ ಬಗ್ಗೆ ಸಾಕಷ್ಟು ಜನರಿಗೆ ಜನರಿಗೆ ತಿಳಿದಿಲ್ಲ. ಹೌದು ಶ್ರೀದೇವಿಯನ್ನು ಆ ಹಂತಕ್ಕೆ ಕೊಂಡೊಯ್ಯಲು ಸಹೋದರಿ ಶ್ರೀಲತಾ ತಮ್ಮ ಇಡೀ ಜೀವನವನ್ನು ನೀಡಿದರು. ಶ್ರೀದೇವಿ ಚಿತ್ರರಂಗದ ಉದಯೋನ್ಮುಖ ತಾರೆಯಾಗುವ ರೇಸ್‌ ನಲ್ಲಿದ್ದಾಗ ಅವರ ಪ್ರತಿ ಹೆಜ್ಜೆಗೆ ಅವರ ಸಹೋದರಿ ಬೆಂಬಲ ನೀಡಿದರು. ಶ್ರೀಲತಾ ಅವರು ಶ್ರೀದೇವಿಯ ಮ್ಯಾನೇಜರ್ ಆಗಿದ್ದರು. ಅವರ ಎಲ್ಲಾ ವ್ಯವಹಾರಗಳನ್ನು ನೋಡಿಕೊಂಡರು. ಆದರೆ ನಂತರ ಅವರ ಸಂಬಂಧವು ಎಷ್ಟು ಹದಗೆಟ್ಟಿತು ಎಂದರೆ ಶ್ರೀಲತಾ ತನ್ನ ಸಹೋದರಿಯನ್ನು ಕೊನೆಯ ಬಾರಿಗೆ ನೋಡಲು ಸಹ ಬರಲಿಲ್ಲ.

ಅಕ್ಕನಿಗೆ ಶತ್ರುವಾದ ತಂಗಿ
ವರದಿ ಪ್ರಕಾರ ಶ್ರೀದೇವಿ ತಾಯಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ತಪ್ಪಾಗಿ ಆಪರೇಷನ್ ಮಾಡಲಾಗಿದೆ. ಹೀಗಾಗಿ ಆಕೆ ತನ್ನ ತಾಯಿಯನ್ನು ಕಳೆದುಕೊಂದರು. ಇದಾದ ಬಳಿಕ ಶ್ರೀದೇವಿ ಆಸ್ಪತ್ರೆ ವಿರುದ್ಧ ಕೇಸ್ ಹಾಕಿ ಕೇಸ್ ಗೆದ್ದು 7 ಕೋಟಿಗೂ ಹೆಚ್ಚು ಪರಿಹಾರ ಪಡೆದಿದ್ದಾರೆ. ಆಗ ನಟಿ ಆ ಹಣವನ್ನು ತನ್ನ ಬಳಿ ಮಾತ್ರ ಇಟ್ಟುಕೊಂಡಿದ್ದರು. ಇದಾದ ನಂತರ ನಟಿ ತನ್ನ ಪೋಷಕರ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಂಡರು. ಇದರಿಂದ ಸಹೋದರಿ ಶ್ರೀಲತಾ ಮತ್ತು ಶ್ರೀದೇವಿ ನಡುವಿನ ಸಂಬಂಧ ಹದಗೆಟ್ಟಿತು ಎನ್ನಲಾಗಿದೆ. ಈ ಕಾರಣಕ್ಕೆ ಶ್ರೀಲತಾ ಅವರು ಶ್ರೀದೇವಿ ಅವರ ಕೊನೆಯ ಕ್ಷಣದಲ್ಲಿಯೂ ಹತ್ತಿರ ಇರಲಿಲ್ಲ ಎನ್ನಲಾಗುತ್ತಿದೆ.

sridevi and sister srilatha
Image Credit: Original Source

Join Nadunudi News WhatsApp Group

Join Nadunudi News WhatsApp Group