Actress Trisha: ನಟಿ ತ್ರಿಷಾ ಯಾಕಿನ್ನೂ ಮದುವೆಯಾಗಿಲ್ಲ…? ನಟಿಗೆ ಇನ್ನೂ ಭಯ ಹೋಗಿಲ್ಲವಂತೆ

ನಟಿ ತ್ರಿಷಾ ಮದುವೆ ಆಗದೆ ಇರಲು ಹಿಂದಿರುವ ಕಾರಣ ರಿವೀಲ್

Actress Trisha Marriage News: ಬಹುಭಾಷಾ ನಟಿ ತ್ರಿಷಾ ಅವರ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಪುನೀತ್ ರಾಜಕುಮಾರ್ ಅವರ ಜೊತೆ ಪವರ್ ಸ್ಟಾರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ತ್ರಿಷಾ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಇನ್ನು ತಮಿಳು, ತೆಲುಗು, ಮಲಯಾಲಂ ಚಿತ್ರಗಳ್ಲಲಿ ಸ್ಟಾರ್ ನಟರ ಜೊತೆ ತ್ರಿಷಾ ತೆರೆ ಹಂಚಿಕೊಂಡಿದ್ದಾರೆ.

ಇನ್ನು ತ್ರಿಷಾ ಸಿನಿಮಾಗಳ ಹೊರತಾಗಿ ತಮ್ಮ ಮದುವೆಯ ವಿಚಾರವಾಗಿ ಆಗಾಗ ಸುದ್ದಿಯಾಗುತ ಇರುತ್ತಾರೆ. ನಟಿ ತ್ರಿಷಾ ಇನ್ನು ಮದುವೆಯಾಗಿಲ್ಲ ಎನ್ನುವುದು ಎಲ್ಲರಿಗು ತಿಳಿದಿರುವ ವಿಚಾರ. ಆದ್ರೆ ನಟಿ ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವ ಪ್ರಶ್ನೆ ಉತ್ತರ ಯಾರಿಗೂ ತಿಳಿದಿಲ್ಲ. ಇದೀಗ ನಟಿ ತ್ರಿಷಾ ಮದುವೆ ಆಗದೆ ಇರಲು ಹಿಂದಿರುವ ಕಾರಣ ರಿವೀಲ್ ಆಗಿದೆ. ತ್ರಿಷಾ ಅವರಿಗೆ ಈ ಭಯ ಇನ್ನು ಕಡಿಮೆ ಆಗದೆ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

Actress Trisha Marriage
Image Credit: Thehansindia

ನಟಿ ತ್ರಿಷಾ ಯಾಕಿನ್ನೂ ಮದುವೆಯಾಗಿಲ್ಲ…? ನಟಿಗೆ ಇನ್ನೂ ಭಯ ಹೋಗಿಲ್ಲವಂತೆ
ವಯಸ್ಸು 40 ದಾಟಿದರೂ ತ್ರಿಷಾ ಯಾಕೆ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ತಮಿಳುನಾಡಿನ ಹಿರಿಯ ಪತ್ರಕರ್ತ ಹಾಗೂ ನಟ ಬೈಲ್ವಾನ್ ರಂಗನಾಥನ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ತ್ರಿಷಾ ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಅನೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಕೆಲವರು ಬಹುಬೇಗ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಕಾರಣಕ್ಕೆ ತ್ರಿಷಾ ಮದುವೆಯಾಗುತ್ತಿಲ್ಲ ಎಂದು ರಂಗನಾಥನ್ ಹೇಳಿದ್ದಾರೆ.

ಮದುವೆಯಾದ ಎರಡು ಅಥವಾ ಮೂರು ವರ್ಷಗಳಲ್ಲಿ ವಿಚ್ಛೇದನ ಪಡೆದರೆ ನಂತರದ ಜೀವನದಲ್ಲಿ ಒತ್ತಡವನ್ನು ಉಂಟುಮಾಡಬಹುದು. ಹಾಗಾಗದಿರಲು ಅವಿವಾಹಿತರಾಗಿಯೇ ಉಳಿಯುವುದು ತ್ರಿಷಾ ಅವರ ನೀತಿ ಎಂದು ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ತ್ರಿಷಾ ಅವರು ತಾವು ಯಾಕೆ ಇನ್ನು ಮದುವೆಯಾಗಿಲ್ಲ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ನೀಡಿಲ್ಲ. ತ್ರಿಷಾ ಅವರ ಅಭಿಪ್ರಾಯ ಬೇರೇನೇ ಇರಬಹುದು.

Actress Trisha Marriage News
Image Credit: Times Of India

ಮದುವೆಯ ಬಗ್ಗೆ ತ್ರಿಷಾ ಹೇಳುವುದೇನು..?
ಇನ್ನು  2015 ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ತ್ರಿಶಾ ನಿಶ್ಚಿತಾರ್ಥ ಮಾಡಿಕೊಂಡರು. ಇದು ತುಂಬಾ ಸುದ್ದಿಯಾಗಿತ್ತು. ಅಲ್ಲದೆ ನಿಶ್ಚಿತಾರ್ಥದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಬೇರ್ಪಟ್ಟು ಮದುವೆಯು ನಿಂತು ಹೋಗಿತ್ತು. ಇದಾದ ಬಳಿಕ ನಟಿ ತ್ರಿಷಾ ಮದುವೆಯ ಬಗ್ಗೆ ಹೆಚ್ಚು ಯೋಚಿಸುತ್ತಿಲ್ಲ.

Join Nadunudi News WhatsApp Group

ಇನ್ನು ಇತ್ತೀಚಿಗೆ ಮಲಯಾಳಂ ಇಂಡಸ್ಟ್ರಿಯ ನಿರ್ಮಾಪಕರನ್ನು ತ್ರಿಶಾ ವರಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಬಹಳ ಹಿಂದೆಯೇ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಇಬ್ಬರೂ ಪರಸ್ಪರ ಪ್ರೀತಿಸಿ ಈ ವರ್ಷ ಮದುವೆಯಾಗಲಿದ್ದಾರೆ ಎನ್ನುವುದು ವೈರಲ್ ಸುದ್ದಿಯಾಗಿತ್ತು. ಆದರೆ ಇದನ್ನು ಸ್ವತಃ ತ್ರಿಶಾ ನಿರಾಕರಿಸಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ನನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದೇನೆ. ಮದುವೆಯಾದರೆ ಮೊದಲು ನಾನೇ ಹೇಳುತ್ತೇನೆ ಎಂದಿದ್ದರು.

Actress Trisha Latest News
Image Credit: Original Source

Join Nadunudi News WhatsApp Group