PhonePe Account: ಫೋನ್ ಪೆ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಸೇರಿಸುವುದು ಹೇಗೆ…? ಇಲ್ಲಿದೆ ಸುಲಭ ವಿಧಾನ.
PhonePe ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು Add ಮಾಡಲು ಈ ವಿಧಾನವನ್ನು ಅನುಸರಿಸಿ
Add More Than One Bank Account In PhonePe: ಸದ್ಯದ ಡಿಜಿಟಲ್ ದುನಿಯಾದಲ್ಲಿ ಎಲ್ಲ ರೀತಿಯ ವಹಿವಾಟುಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿದೆ. ಜನರು ಇತ್ತೀಚಿಗೆ Digital Payment ಅನ್ನು ಹೆಚ್ಚು ಬಳಸುತ್ತಿದ್ದಾರೆ.
ದೇಶದಲ್ಲಿ ವಿವಿಧ UPI Application ಗಳು ಜನರಿಗೆ Online payment ಸೌಲಭ್ಯವನ್ನು ನೀಡುತ್ತಿದೆ. ಅದರಲ್ಲಿ PhonePe ಕೂಡ ಒಂದಾದಾಗಿದೆ. ದೇಶದಲ್ಲಿ PhonePe ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಬಹುದು. ನಾವೀಗ ಫೋನ್ ಪೆ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಸೇರಿಸುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.
![Add More Than One Bank Account In PhonePe](https://nadunudi.in/wp-content/uploads/2024/02/Add-More-Than-One-Bank-Account-In-PhonePe.png)
PhonePe ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು Add ಮಾಡಿಕೊಳ್ಳಬಹುದು..!
ಸಾಮಾನ್ಯವಾಗಿ UPI Payment ಖಾತೆಯನ್ನು ರಚಿಸಿಕೊಳ್ಳಲು ಬ್ಯಾಂಕ್ ಅಕೌಂಟ್ ನ ಮಾಹಿತಿ ಬೇಕಾಗುತ್ತದೆ. Bank account ವಿವರ ಹಾಗೆಯೆ ATM ವಿವರವನ್ನು ನೀಡುವ ಮೂಲಕ PhonePe ನಲ್ಲಿ ಖಾತೆಯನ್ನು ರಚಿಸಿಕೊಳ್ಳಬಹುದು. ಆದರೆ ನಿಮಗೆ ಗೊತ್ತೇ..? ಫೋನ್ ಪೇ ನಲ್ಲಿ ಒಂದಕ್ಕಿಂತ ಹೆಚ್ಚು Bank Account ಅನ್ನು ಕೂಡ Add ಮಾಡಲು ಸಾಧ್ಯವಾಗುತ್ತದೆ.
ಹೌದು, ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಯನ್ನು ಹೊಂದಿರುತ್ತಾರೆ. ಒಂದಕ್ಕಿಂತ ಹೆಚ್ಚು ಖಾತೆಯನ್ನು ನೀವು ಹೊಂದಿದ್ದರೆ ಎಲ್ಲ ಖಾತೆಗಳಿಂದ ನೀವು UPI ವಹಿವಾಟನ್ನು ಒಂದೇ Application ನಿಂದ ಮಾಡಲು ಸಾಧ್ಯವಿದೆ. PhonePe Account ಅನ್ನು ಸೇರಿಸಿಕೊಳ್ಳುವ ಮೂಲಕ ನೀವು ಒಂದೇ Application ನಲ್ಲಿ ಎರಡು ಖಾತೆಗಳನ್ನು ಬಳಸಬಹುದು. ಫೋನ್ ಪೆ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಸೇರಿಸುವುದು ಹೇಗೆ…? ಎನ್ನುವ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ.
![PhonePe Latest News Update](https://nadunudi.in/wp-content/uploads/2024/02/PhonePe-Latest-News-Update-1.png)
ಫೋನ್ ಪೆ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಸೇರಿಸುವುದು ಹೇಗೆ…?
•ಮೊದಲು PhonePay ಅಪ್ಲಿಕೇಶನ್ ತೆರೆಯಿರಿ
•PhonePay ಮುಖಪುಟದಲ್ಲಿ ಹಣ ವರ್ಗಾವಣೆ ವಿಭಾಗದಲ್ಲಿ “To Self Account’ ಕ್ಲಿಕ್ ಮಾಡಿ
•’To Self Account’ ಪುಟದಲ್ಲಿ ಕೆಳಭಾಗದಲ್ಲಿ ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಿ ಕ್ಲಿಕ್ ಮಾಡಿ
•ಈಗಾಗಲೇ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಯಾವ ಬ್ಯಾಂಕ್ ಖಾತೆಯನ್ನು ಸೇರಿಸಬೇಕೆಂದು ಆಯ್ಕೆಮಾಡಿ.
•ಬ್ಯಾಂಕ್ ಖಾತೆಯ ಮೇಲೆ ಕ್ಲಿಕ್ ಮಾಡಿದ ನಂತರ, ನಿಮ್ಮ ಮೊಬೈಲ್ ಸಂಖ್ಯೆ
•ನೋಂದಾಯಿಸಲಾದ ಖಾತೆಗಳ ವಿವರಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತವೆ
•ಬ್ಯಾಂಕ್ ಹೆಸರು, ಬ್ರಾಂಚ್ ಮತ್ತು ನಿಮ್ಮ ಹೆಸರಿನೊಂದಿಗೆ ಕಾಣುವ Bank Account ಆಯ್ಕೆ ಮಾಡಿ Proceed To Add ಮೇಲೆ ಕ್ಲಿಕ್ ಮಾಡಿ.
•ನಿಮ್ಮ ಬ್ಯಾಂಕ್ ಖಾತೆ ATM ಕಾರ್ಡ್ ವಿವರಗಳನ್ನು ನಮೂದಿಸಿ.
•ನಂತರ ಮೊಬೈಲ್ ಗೆ ಕಳುಹಿಸಿದ OTP ಅನ್ನು ನಮೂದಿಸಿ ಮತ್ತು ನಿಮ್ಮ UPI ಪಿನ್ ಪಡೆಯಿರಿ.