Adhipurush Verdict: ಆದಿಪುರುಷ್ ಚಿತ್ರದ ಮೇಲೆ ದೊಡ್ಡ ತೀರ್ಪು ನೀಡಿದ ಹೈಕೋರ್ಟ್, ಸಂಕಷ್ಟದಲ್ಲಿ ಚಿತ್ರತಂಡ.

ಅಲಹಾಬಾದ್ ಹೈಕೋರ್ಟ್ ಆದಿಪುರುಷ್ ಚಿತ್ರತಂಡದ ವಿರುದ್ಧ ನೀಡಲಾದ ದೂರಿನ ಕುರಿತು ಮಹತವಾದ ತೀರ್ಪನ್ನು ನೀಡಿದೆ.

Allahabad High Court: ಇದೀಗ ಭಾರತೀಯ ಚಿತ್ರರಂಗದಲ್ಲಿ ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adhipurush) ಚಿತ್ರ ಹೊಸ ಅಲೆಯಲ್ಲೂ ಎಬ್ಬಿಸಿದೆ. ಇನ್ನು ಬಿಡುಗಡೆಗೊಂಡು ಆದಿಪುರುಷ್ ಚಿತ್ರ ವಿವಾದಗಳಿಂದಾಗಿ ಕೋರ್ಟ್ ಮೆಟ್ಟಿಲೇರಿತ್ತು. ಇನ್ನು ಆದಿಪುರುಷ್ ಚಿತ್ರದಲ್ಲಿ ಕೆಲವು ದ್ರಶ್ಯವು ಹಿಂದೂ ಧರ್ಮಕ್ಕೆ ಅವಮಾನ ಮಾಡುವ ರೀತಿ ಇದೆ ಎಂದು ಚಿತ್ರದ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೀಗ ಅಲಹಾಬಾದ್ ಹೈಕೋರ್ಟ್ ಆದಿಪುರುಷ್ ಚಿತ್ರತಂಡದ ವಿರುದ್ಧ ನೀಡಲಾದ ದೂರಿನ ಕುರಿತು ಮಹತವಾದ ತೀರ್ಪನ್ನು ನೀಡಿದೆ.

Adhipurush Verdict
Image Source: Koimoi

ಆದಿಪುರುಷ್ ಚಿತ್ರದ ವಿರುದ್ಧ ದೂರು ದಾಖಲು
ಆದಿಪುರುಷ್ ಸಿನಿಮಾದಲ್ಲಿ ರಾಮ, ಸೀತೆ, ರಾವಣ ಮತ್ತು ಹನುಮಾನ್ ನಂತಹ ಪಾತ್ರಗಳನ್ನೂ ಒಳಗೊಂಡಿರುವ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ಅಥವಾ ಸರಿಪಡಿಸಲು ನಿರ್ದೇಶನಗಳನ್ನು ಕೋರಿ ಬಲಪಂಥೀಯ ಗುಂಪು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಚಿತ್ರದಲ್ಲಿ ರಾವಣ ಮತ್ತು ಹನುಮಾನ್‌ ನಂತಹ ಪಾತ್ರಗಳ ಚಿತ್ರಣವು ಭಾರತೀಯ ನಾಗರಿಕತೆಯಿಂದ ಸಂಪೂರ್ಣವಾಗಿ ದೂರವಿದೆ ಎಂದು ದೂರಿನಲ್ಲಿ ಪ್ರಕಟಿಸಲಾಗಿದೆ.

ಮಹರ್ಷಿ ವಾಲ್ಮೀಕಿ ಮತ್ತು ಸಂತ ತುಳಸಿದಾಸರಂತಹ ಲೇಖಕರ ಕೃತಿಗಳಲ್ಲಿ ಕಂಡುಬರುವ ವಿವರಣೆಗಳಿಗೆ ವಿರುದ್ಧವಾಗಿ ಧಾರ್ಮಿಕ ಪಾತ್ರಗಳನ್ನು ಅಸಮರ್ಪಕ ಮತ್ತು ಸೂಕ್ತವಲ್ಲದ ರೀತಿಯಲ್ಲಿ ಪ್ರಸ್ತುತಪಡಿಸುವ ಮೂಲಕ ಚಲನಚಿತ್ರವು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆದಿಪುರುಷ್ ಚಿತ್ರದ ವಿರುದ್ಧ ದೂರು ದಾಖಲಿಸಲಾಗಿದೆ. ಇದೀಗ ಚಿತ್ರದ ವಿರುದ್ದ ನೀಡಲಾಗಿದ್ದ ದೂರಿನ ಕುರಿತು ವಿಚಾರಣೆ ನಡೆಸಿ ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀ ಪ್ರಕಾಶ್ ಸಿಂಗ್ ಆದಿಪುರುಷ್ ಚಿತ್ರತಂಡಕ್ಕೆ ಆದೇಶವನ್ನು ಹೊರಡಿಸಿದ್ದಾರೆ.

Adhipurush Verdict
Image Source: Koimoi

ಆದಿಪುರುಷ್ ಚಿತ್ರದ ಮೇಲೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್
ಇದೆ ರೀತಿ ತಪ್ಪಾಗಿ ಕುರಾನ್ ಬಗ್ಗೆ ಸಣ್ಣದೊಂದು ಡಾಕ್ಯುಮೆಂಟರಿ ಮಾಡು ಮುಂದೇನಾಗುತ್ತದೆ ನೋಡಿ ಎಂದು ಮೌಖಿಕವಾಗಿ ಉತ್ತರಿಸಿದ್ದಾರೆ. ಯಾವುದೇ ಧರ್ಮದ ವಿಷಯಗಳನ್ನು ತಪ್ಪಾಗಿ ತೋರಿಸಬೇಡಿ.

ಕೋರ್ಟಿಗೆ ಯಾವುದೇ ಧರ್ಮವಿಲ್ಲ, ಬೈಬಲ್, ಕುರಾನ್ ನಂತಹ ವಿಚಾರಗಳನ್ನು ತೆಗೆದುಕೊಳ್ಳಬೇಡಿ. ಧಾರ್ಮಿಕ ವಿಷಯವನ್ನು ಎತ್ತಿಕೊಂಡು ಸಿನಿಮಾ ಮಾಡುವುದು ತಮಾಷೆಯ ವಿಷಯವಲ್ಲ. ಸಿನಿಮಾ ಮಾಡುವವರು ಧಾರ್ಮಿಕ ವಿಚಾರಗಳನ್ನು ದೂರವಿರಿ. ಆದಿಪುರುಷ ಸಿನಿಮಾ ನಿರ್ಮಾಪಕರು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.

Join Nadunudi News WhatsApp Group

Join Nadunudi News WhatsApp Group