Adipurush: ಬಿಡುಗಡೆಗೂ ಮುನ್ನವೇ ಆದಿಪುರುಷ ಚಿತ್ರಕ್ಕೆ ಆಘಾತ, ಚಿತ್ರದ ವಿರುದ್ಧ ದೂರು ದಾಖಲು.

ಬಿಡುಗಡೆಗೂ ಮುನ್ನವೇ ಆದಿಪುರುಷ್ ಚಿತ್ರದ ಮೇಲೆ ದೂರು ದಾಖಲು.

Adipurush Movie Controversy: ತೆಲುಗು ಚಿತ್ರರಂಗದ ಖ್ಯಾತ ನಟ ಪ್ರಭಾಸ್ (Prabhas) ಇದೀಗ ಆದಿಪುರುಷ ಚಿತ್ರದ (Adipurush Movie) ಸಲುವಾಗಿ ಸುದ್ದಿಯಲ್ಲಿದ್ದಾರೆ. ಆದಿಪುರುಷ ಚಿತ್ರ ರಿಲೀಸ್ ಗು ಮುನ್ನ ದಾಖಲೆ ನಿರ್ಮಾಣ ಮಾಡುತ್ತಿದೆ.

ಆದಿಪುರುಷ ಚಿತ್ರದ ಟ್ರೈಲರ್ (Adipurush Movie Trailer) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು ಆದಿಪುರುಷ ಚಿತ್ರ ದಾಖಲೆಯ ಜೊತೆಗೆ ಹೊಸ ವಿವಾದಕ್ಕೆ (Adipurush Movie Controversy) ಸಿಲುಕಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Adipurush Movie Controversy
ImageSource: The Indian Express

ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಲುಕಿದ ಆದಿಪುರುಷ ಚಿತ್ರ
ಆದಿಪುರುಷ ಚಿತ್ರದ ವಿರುದ್ಧ ಸಂಜಯ್ ದೀನನಾಥ್ ತಿವಾರಿ ಎಂಬುವವರು ದೂರು ನೀಡಿದ್ದಾರೆ. ಬಾಂಬೆ ಹೈಕೋರ್ಟ್ ನ CBFC ಮಂಡಳಿಯ ಮುಂದೆ ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಆದಿಪುರುಷ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಸಿಕ್ಕಿದೆ.

‘ಬಿಡುಗಡೆ ಮಾಡಲಾದ ಪೋಸ್ಟರ್ ನಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ಕಾಲವಿದರು ಗಂಭೀರ ಎನಿಸುವಂತಹ ತಪ್ಪುಗಳನ್ನು ಎಸಗಿದ್ದಾರೆ. ಆದ್ದರಿಂದ ಇಂತಹ ಗಂಭೀರ ತಪ್ಪುಗಳು ಆದಿಪುರುಷ ಚಿತ್ರದಲ್ಲಿ ಮತ್ತೆ ಸಂಭವಿಸುವ ಸಾಧ್ಯತೆಯಿದೆ ಎಂದು ದೂರು ನೀಡಲಾಗಿದೆ.

ಇದು ನಿಜವಾಗಿದ್ದರೆ, ಭವಿಷ್ಯದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅದರ ಜೊತೆಗೆ ದೇಶದ ಕಾನೂನಿನ ಸುವ್ಯವಸ್ಥೆಗೆ ಅಡ್ಡಿ ಆಗಲಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Join Nadunudi News WhatsApp Group

Adipurush Movie Controversy
Image Source: Gulte

ದಾಖಲೆ ಬರೆದ ಆದಿಪುರುಷ ಚಿತ್ರ
ಇನ್ನು ಆದಿಪುರುಷ ಸಿನಿಮಾ 700 ಕೋಟಿಗಿಂತ ಹೆಚ್ಚು ಬಜೆಟ್ ನಲ್ಲಿ ಚಿತ್ರೀಕರಣಗೊಂಡಿದೆ. ನಟ ಪ್ರಭಾಸ್ ಈ ಸಿನಿಮಾದಲ್ಲಿ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕೃತಿ ಸನೋನ್ ಸೀತೆಯಾಗಿ ಪ್ರಭಾಸ್ ಗೆ ಜೋಡಿಯಾಗಲಿದ್ದಾರೆ. ಇನ್ನು ಸೈಫ್ ಅಲಿ ಖಾನ್ ರಾವಣ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಅನೇಕ ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, 70 ಮಿಲಿಯನ್ ಗು ಹೆಚ್ಚು ವೀಕ್ಷಣೆ ಕಂಡಿದೆ.

Adipurush Movie Controversy
Image Source: News18

Join Nadunudi News WhatsApp Group