Adipurush Controversy: ಹನುಮಂತನ ಬಗ್ಗೆ ಈ ಮಾತಾಡಿದ್ದಕ್ಕೆ ಆದಿಪುರುಷ್ ಸದ್ಯದಲ್ಲೇ ಬ್ಯಾನ್, ಹೊಸ ತಿರುವು

ಹನುಮಂತನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆದಿಪುರುಷ್ ಚಿತ್ರತಂಡ.

Adipurush Movie Update: ಇದೀಗ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಬಗ್ಗೆ ಸುದ್ದಿಗಳು ಸಾಕಷ್ಟು ಹರಿದಾಡುತ್ತಿವೆ. ತೆಲುಗು ಚಿತ್ರರಂಗದಲ್ಲಿ ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದೆ. ತೆರೆ ಕಂಡ ನಾಲ್ಕೇ ದಿನದಲ್ಲಿ ಬರೋಬ್ಬರಿ 375 ಕೋಟಿ ಕಲೆಕ್ಷನ್ ಮಾಡಿದೆ.

ಇನ್ನು ಚಿತ್ರ ಭರ್ಜರಿ ಕಲೆಕ್ಷನ್ ನ ಬೆನ್ನಲ್ಲೇ ವಿವಾದಕ್ಕೆ ಒಳಗಾಗಿದೆ. ಇದೀಗ ಆದಿಪುರುಷ್ ಚಿತ್ರ ಬ್ಯಾನ್ ಆಗುವ ಭೀತಿಯಲ್ಲಿದೆ. ಇನ್ನು ವಿವಾದದ ನಡುವೆ ಚಿತ್ರತಂಡ ಮತ್ತೊಂದು ವಿವಾದವನ್ನು ಸೃಷ್ಟಿ ಮಾಡಿದೆ. ಈ ಕುರಿತು ಮಾಹಿತಿ ತಿಳಿಯೋಣ.

Adipurush film team made a controversial statement about Hanuman
Image Credit: Siasat

ಆದಿಪುರುಷ್ ಚಿತ್ರದ ವಿರುದ್ಧ ಟೀಕೆ
ಇನ್ನು ಆದಿಪುರುಷ್ ಚಿತ್ರ ವಿವಾದವನ್ನು ಹುಟ್ಟುಹಾಕಿಕೊಂಡಿದೆ. ಹಿಂದೂ ಭಾವನೆಗಳಿಗೆ ದಕ್ಕೆ ಬರುವ ರೀತಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಸಿನಿಮಾದಲ್ಲಿ ತೋರಿಸಲಾದ ಪ್ರತಿ ಪಾತ್ರವು ಕೂಡ ರಾಮಾಯಣಕ್ಕೆ ಅವಮಾನ ಮಾಡುವ ರೀತಿ ಇದೆ ಎಂದು ನೆಟ್ಟಿಗರು ಚಿತ್ರವನ್ನು ಟ್ರೋಲ್ ಮಾಡುತ್ತಿದ್ದಾರೆ.

ಇನ್ನು ಚಿತ್ರದಲ್ಲಿ ಹನುಮಂತನ ಪಾತ್ರ ಕೂಡ ವಿಭಿನ್ನವಾಗಿದ್ದು, ಹನುಮಂತ ಹೇಳಿರುವ ಕೆಲವು ಸಂಭಾಷಣೆಗಳು ಈಗಿನ ಕಾಲದ ಸಂಭಾಷಣೆ ರೀತಿ ಇದೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಚಿತ್ರತಂಡ ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಗಳನ್ನು ಬದಲಿಸುವುದಾಗಿ ಘೋಷಣೆ ಹೊರಡಿಸಿದೆ. ಚಿತ್ರದ ಸಹ ಬರಹಗಾರ ಹಾಗು ಹಾಡುಗಳನ್ನು ಬರೆದಿರುವ ಮನೋಜ್ ಮುಂತಾಶೀರ್ ಮುಂದಿನ ವಾರದಲ್ಲಿ ಚಿತ್ರದಲ್ಲಿ ಬದಲಾವಣೆ ತರುವುದಾಗಿ ಹೇಳಿಕೆ ನೀಡಿದ್ದಾರೆ.

Adipurush film team made a controversial statement about Hanuman
Image Credit: twitter

ಹನುಮಂತನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆದಿಪುರುಷ್ ಚಿತ್ರತಂಡ
ಇನ್ನು ಮನೋಜ್ ಮುಂತಾಶೀರ್ ಅವರು ಸಂದರ್ಶನದಲ್ಲಿ ಮಾತನಾಡುವಾಗ ಇವರು ಹನುಮಂತನ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. “ಹನುಮಂತ ಶ್ರೀರಾಮನ ಹಾಗೆ ಅಲ್ಲ. ಹನುಮಂತ ತಾತ್ವಿಕವಾಗಿ ಮಾತನಾಡುವುದಿಲ್ಲ. ಹನುಮಂತ ದೇವರಲ್ಲ. ಆತ ಓರ್ವ ಭಕ್ತ. ಬಳಿಕ ಆತನನ್ನು ನಾವು ದೇವರನ್ನಾಗಿ ಮಾಡಿದೆವು.

Join Nadunudi News WhatsApp Group

ಏಕೆಂದರೆ ಆತನ ಭಕ್ತಿ ಅಂತಹ ಶಕ್ತಿಯನ್ನು ಹೊಂದಿತ್ತು” ಎಂದು ಹೇಳಿದ್ದಾರೆ. ಇನ್ನು ಮನೋಜ್ ಮುಂತಾಶೀರ್ ಅವರ ಈ ಹೇಳಿಕೆ ವಿವಾದವನ್ನು ಇನ್ನಷ್ಟು ಹೆಚ್ಚಿಸಿದೆ. ಇನ್ನು ಆದಿಪುರುಷ್ ಚಿತ್ರ ಬ್ಯಾನ್ ಆಗುವಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Nadunudi News WhatsApp Group