Adopted Children: ದತ್ತು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಪಾಲಿದೆ, ಭಾರತದ ಕಾನೂನಿನಲ್ಲಿದೆ ನಿಯಮ.

ದತ್ತು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಎಷ್ಟು ಹಕ್ಕಿದೆ, ಕಾನೂನಿನ ಈ ನಿಯಮದ ಬಗ್ಗೆ ತಿಳಿದುಕೊಳ್ಳಿ.

Adopted Children Propety Rights: ಇತ್ತೀಚಿಗೆ ಆಸ್ತಿಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಆಸ್ತಿಯ ವಿಚಾರದಲ್ಲಿ ಸಾಕಷ್ಟು ಕಾನೂನು ನಿಯಮಗಳಿವೆ. ಇದನ್ನು ಅನುಸರಿಸದೆ ಜನರು ಆಸ್ತಿಯ ಪಾಲನ್ನು ಮಾಡಿಕೊಳ್ಳಲು ಆಗುವುದಿಲ್ಲ. ಗಂಡು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಹೇಗೆ ಹಕ್ಕು ಇದೆಯೋ ಅದೇ ರೀತಿ ಹೆಣ್ಣು ಮಕ್ಕಳಿಗೆ ಸಹ ಇರುತ್ತದೆ.

ಆದರೆ ದತ್ತು ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಹಕ್ಕಿದೆ ಎಂಬುದರ ಬಗ್ಗೆ ಇದೀಗ ಚರ್ಚೆ ಆಗುತ್ತಿದೆ. ದತ್ತು ಮಕ್ಕಳಿಗೆ ತಂದೆ ತಾಯಿಯ ಆಸ್ತಿಯಲ್ಲಿ ಎಷ್ಟು ಹಕ್ಕಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

How much right do adopted children have in father's property
Image Credit: Fortunemanning

ದತ್ತು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಎಷ್ಟು ಹಕ್ಕಿರುತ್ತದೆ
ದತ್ತು ಮಕ್ಕಳಿಗೆ ತಂದೆ ಆಸ್ತಿಯಲ್ಲಿ ಸಂಪೂರ್ಣ ಹಕ್ಕಿದೆ ಎಂದು ಕಾನೂನು ಹೇಳುತ್ತದೆ. ತಂದೆ ಮರಣ ಹೊಂದಿದ ನಂತರ ಸಹ ತಂದೆಯ ಆಸ್ತಿಯಲ್ಲಿ ದತ್ತು ಮಗುವಿದೆ ಸಮಾನವಾದ ಹಕ್ಕಿದೆ ಎಂದು ಕಾನೂನು ಹೇಳುತ್ತದೆ.

ತಂದೆ ವೀಲ್ ಬರೆಯದೆ ಮರಣ ಹೊಂದಿದರು ಸಹ ತಂದೆಯ ಆಸ್ತಿಯಲ್ಲಿ ದತ್ತು ಮಕ್ಕಳಿಗೆ ಸಮಾನದ ಹಕ್ಕು ಇರುತ್ತದೆ. ಏಕೆಂದರೆ ದತ್ತು ಪಡೆದಿದ್ದರು ಸಹ ಅವರು ಮನೆಯ ಮಕ್ಕಳಾಗಿರುತ್ತಾರೆ. ಆದ್ದರಿಂದ ಅವರಿಗೆ ಮನೆಯ ಆಸ್ತಿಯಲ್ಲಿ ಸಂಪೂರ್ಣವಾಗಿ ಹಕ್ಕಿರುತ್ತದೆ.

ತಂದೆಯ ಆಸ್ತಿಯಲ್ಲಿ ದತ್ತು ಪುತ್ರನಿಗೆ ಸಂಪೂರ್ಣ ಹಕ್ಕು ಇರುತ್ತದೆ
ತಂದೆಯ ಆಸ್ತಿಯಲ್ಲಿ ದತ್ತು ಪುತ್ರನು ಸ್ವಂತ ಮಗನ ರೀತಿಯೇ ಆಸ್ತಿಯಲ್ಲಿ ಸಮಾನ ಹಕ್ಕನ್ನು ಪಡೆಯುತ್ತಾನೆ. ತಂದೆ ಆಸ್ತಿಯಲ್ಲಿ ಸ್ವಂತ ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಪಾಲು ದತ್ತು ಪಡೆದ ಮಕ್ಕಳಿಗೂ ಸಿಗಬೇಕು.

Join Nadunudi News WhatsApp Group

How much right do adopted children have in father's property
Image Credit: Magicbricks

ಒಂದು ವೇಳೆ ಸಹೋದರ ಸಹೋದರಿಯರು ಆಸ್ತಿಯಲ್ಲಿ ಪಾಲನ್ನು ಕೊಡಲು ನಿರಾಕರಿಸಿದರೆ ದತ್ತು ಮಕ್ಕಳು ಇದನ್ನು ಕಾನೂನಿನ ಮುಕಾಂತರ ಪಡೆದುಕೊಳ್ಳಬಹುದು. ಒಂದು ವೇಳೆ ದತ್ತು ಪುತ್ರನಿಗೆ ಯಾವುದೇ ಸಹೋದರ ಸಹೋದರಿಯರು ಇಲ್ಲದಿದ್ದರೆ ತಂದೆಯ ಪೂರ್ಣ ಆಸ್ತಿಯನ್ನು ಅವನೊಬ್ಬನೇ ಪಡೆಯಬಹುದು.

Join Nadunudi News WhatsApp Group