Airplane Mode: ವಿಮಾನ ಪ್ರಯಾಣ ಮಾಡುವಾಗ ಮೊಬೈಲ್ ಏರೋಪ್ಲೇನ್ ಮೋಡ್ ಯಾಕೆ ಹಾಕಬೇಕು, ಸಾಕಷ್ಟು ಜನರಿಗೆ ತಿಳಿದಿಲ್ಲ.

ವಿಮಾನ ಪ್ರಯಾಣದ ಸಮಯದಲ್ಲಿ ಮೊಬೈಲ್ ಅನ್ನು ಯಾಕೆ ಏರೋಪ್ಲೇನ್ ಮೋಡ್ ಹಾಕಬೇಕು ತಿಳಿದುಕೊಳ್ಳಿ.

Mobile Phone Airplane Mode: ಸಾಮಾನ್ಯವಾಗಿ ಸ್ಮಾರ್ಟ್ ಫೋನ್ (Smart Phone)ಗಳನ್ನೂ ಎಲರೂ ಬಳಸುತ್ತಾರೆ. ಮೊಬೈಲ್ ಫೋನ್ ಗಳು ಮನೋರಂಜನೆಯ ಸಾಧನವಾಗಿದೆ. ಎಲ್ಲರ ಬಳಿ ಕೂಡ ವಿವಿದ ರೀತಿಯ ಮೊಬೈಲ್ ಫೋನ್ ಗಳು ಇರುತ್ತದೆ. ಆದ್ರೆ ಮೊಬೈಲ್ ಗಳನಲ್ಲಿನ ಫೀಚರ್ ಗಳು ಕೆಲವು ಎಲ್ಲಾ ರೀತಿಯ ಮೊಬೈಲ್ ಫೋನ್ ಗಳಲ್ಲೂ ಇರುತ್ತದೆ.

Mobile Phone Aeroplane Mode
Image Credit: lifewire

ಇನ್ನು ಸಾಮಾನ್ಯವಾಗಿ ಮೊಬೈಲ್ ಫೋನ್ ಗಳಲ್ಲಿ ಏರೋಪ್ಲೇನ್ ಮೋಡ್ (Airplane Mode) ಇರುತ್ತದೆ. ಈ ಏರೋಪ್ಲೇನ್ ಮೋಡ್ ಅನ್ನು ಎಲ್ಲರು ಬಳಸಿರುತ್ತೀರಿ. ಇದೀಗ ವಿಮಾನಗಳಲ್ಲಿ ಸಂಚರಿಸುವಾಗ ಏರೋಪ್ಲೇನ್ ಮೋಡ್ ಅನ್ನು ಏಕೆ ಬಳಸಬೇಕು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

ಮೊಬೈಲ್ ಫೋನ್ ಗಳಲ್ಲಿ ಏರೋಪ್ಲೇನ್ ಮೋಡ್ ಆಯ್ಕೆ
ಇನ್ನು ಮೊಬೈಲ್ ಫೋನ್ ಗಳನ್ನೂ ಸ್ವಿಚ್ ಆಫ್ ಮಾಡುವ ಬದಲಾಗಿ ಕೆಲವರು ಏರೋಪ್ಲೇನ್ ಮೋಡ್ ನಲ್ಲಿಇಡುತ್ತಾರೆ. ಇದು ಒಂದು ರೀತಿಯಲ್ಲಿ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿದ ರೀತಿಯೇ ಆಗಿರುತ್ತದೆ. ಏರೋಪ್ಲೇನ್ ಮೋಡ್ ಆನ್ ಮಾಡುವುದರಿಂದ ಯಾವುದೇ ರೀತಿಯ ಕರೆ, ಸಂದೇಶ ಹಾಗೂ ಇಂಟೆರ್ ನೆಟ್ ಸೌಲಭ್ಯ ಸಿಗುವುದಿಲ್ಲ. ಇನ್ನು ಹೆಚ್ಚಾಗಿ ವಿಮಾನದಲ್ಲಿ ಪ್ರಯಾಣಿಸುವ ಮುನ್ನ ಮೊಬೈಲ್ ಫೋನ್ ಗಳನ್ನೂ ಏರೋಪ್ಲೇನ್ ಮೋಡ್ ನಲ್ಲಿ ಇರಿಸಲು ಸೂಚನೆ ನೀಡಲಾಗುತ್ತದೆ.

If passengers use mobile phones, the signal system of the plane will be disturbed.
Image Credit: rd

ವಿಮಾನ ಪ್ರಯಾಣದಲ್ಲಿ ಏರೋಪ್ಲೇನ್ ಮೋಡ್ ಏಕೆ ಅನಿವಾರ್ಯ
ವಿಮಾನ ಪ್ರಯಾಣದಲ್ಲಿ ಏರೋಪ್ಲೇನ್ ಮೋಡ್ ಇಡಲು ಕಾರಣ ಏನೆಂದರೆ, ವಾಯುಯಾನದ ಸಮಯದಲ್ಲಿ ಅನೇಕ ರೀತಿಯ ಸಂಚಾರಣೆಯ ಹಾಗೂ ಸಂವಹನ ವ್ಯವಸ್ಥೆಗಳನ್ನು ಬಳಸಲಾಗುತ್ತದೆ. ಈ ಪರಿಸ್ಥಿಯಲ್ಲಿ ವಿಮಾನ ಪ್ರಯಾಣಿಕರು ಮೊಬೈಲ್ ಫೋನ್ ಗಳನ್ನೂ ಬಳಸಿದರೆ ವಿಮಾನದ ಸಿಗ್ನಲ್ ವ್ಯವಸ್ಥೆಗೆ ತೊಂದರೆ ಆಗುತ್ತದೆ. ಇದರಿಂದಾಗಿ ಪೈಲೆಟ್ ಗಳು ರಾಡಾರ್ ಮತ್ತು ಕಂಟ್ರೋಲ್ ರೂಮ್ ನೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತದೆ.

ವಿಮಾನದಲ್ಲಿ ಮೊಬೈಲ್ ಬಳಸುದರಿಂದ ಮೊಬೈಲ್ ಫೋನ್ ನಿಂದ ಹೊರಬರುವ ಅಲೆಗಳು ರಾಡಾರ್ ಗೆ ಡಿಕ್ಕಿ ಹೊಡೆಯಲು ಪ್ರಾರಂಭಿಸುತ್ತವೆ. ಪ್ರಯಾಣಿಕರು ಮೊಬೈಲ್ ಗಳನ್ನೂ ಬಳಸಿದರೆ ರೇಡಿಯೋ ಕೇಂದ್ರದ ಸಂಪರ್ಕವನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗುತ್ತದೆ.

Join Nadunudi News WhatsApp Group

Mobile Phone Airplane Mode
Image Source: News`18

Join Nadunudi News WhatsApp Group