After SSLC: SSLC ಪಾಸಾದ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್ ಸಾಕಷ್ಟು ಉತ್ತಮ, ಶಿಕ್ಷಣ ಮಾಹಿತಿ.

SSLC ನಂತರ ಯಾವ ಯಾವ ಕೋರ್ಸ್ ಮಾಡಿದರೆ ಸಾಕಷ್ಟು ಪ್ರಯೋಜನ ಇದೆ ಅನ್ನುವುದರ ಬಗ್ಗೆ ತಿಳಿದುಕೊಳ್ಳಿ.

SSLC Next Education: ನಿನ್ನೆ ಎಸ್ ಎಸ್ ಎಲ್ ಸಿ (SSLC) ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಹತ್ತನೇ ತರಗತಿ ಮಕ್ಕಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಮ್ಮ ಪರೀಕ್ಷೆ ಫಲಿತಾಂಶ ಚೆಕ್ ಮಾಡಿಕೊಂಡಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಯು ಮಾರ್ಚ್ 31 ರಿಂದ ಆರಂಭಗೊಂಡಿತ್ತು.

ಏಪ್ರಿಲ್ 15 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಕ್ತಾಯಗೊಂಡಿತ್ತು. ಇನ್ನು ನಿನ್ನೆ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಸುಲಭ ವಿಧಾನದ ಮೂಲಕ ತಮ್ಮ ಫಲಿತಾಂಶವನ್ನ ನೋಡಿದ್ದಾರೆ.

SSLC Next Education
Image Credit: livemint

ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಮಾಹಿತಿ
ಇನ್ನು ನಿನ್ನೆಯಷ್ಟೇ sslc ರಿಸಲ್ಟ್ ಪ್ರಕಟವಾಗಿದ್ದು ವಿದ್ಯಾರ್ಥಿಗಳು ಮುಂದಿನ ವಿದ್ಯಾಬ್ಯಾಸಕ್ಕಾಗಿ ಏನು ಮಾಡಬೇಕೆಂಬ ಗೊಂದಲದಲ್ಲಿ ಇದ್ದಾರೆ. ವಿದ್ಯಾರ್ಥಿಗಳು ಈ ವೇಳೆ ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ.

ಎಸ್ ಎಸ್ ಎಲ್ ಸಿ ಮುಗಿದ ಬಳಿಕ ಸಾಮಾನ್ಯವಾಗಿ ಮೂರೂ ವಿಭಾಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್, ಕಾಮರ್ಸ್, ಆರ್ಟ್ಸ್. ಈ ಮೂರೂ ವಿಭಾಗಳಲ್ಲಿ ನಿಮಗೆ ಯಾವುದು ಉತ್ತಮ ಎನಿಸುತ್ತದೆ ಆ ಕೋರ್ಸ್ ನಲ್ಲಿ ಅಧ್ಯಯನ ಮಾಡಬಹುದಾಗಿದೆ. ನೀವು ತೆಗೆದುಕೊಂಡ ಅಂಕಗಳ ಮೇಲೆ ಕೋರ್ಸ್ ಆಯ್ಕೆ ಮಾಡಬಹುದಾಗಿದೆ.

ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ
ಇನ್ನು 10 ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಪಿಯುಸಿ ಬಿಟ್ಟು ಇನ್ನು ಬೇರೆ ಯಾವುದೇ ಕೋರ್ಸ್ ತೆಗೆದುಕೊಳ್ಳುವುದರ ಬಗ್ಗೆ ಮಾಹಿತಿ ಇಲ್ಲಿದೆ. ಎಸ್ ಎಸ್ ಎಲ್ ಸಿ ನಂತರ ಡಿಪ್ಲೋಮ ಇಂಜಿನಿಯರಿಂಗ್ ಮಾಡುವುದಕ್ಕೂ ಮಕ್ಕಳಿಗೆ ಅವಕಾಶವಿದೆ.

Join Nadunudi News WhatsApp Group

Useful information about which course after SSLC is very beneficial.
Image Credit: shiksha

ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ 2 ರಿಂದ 3 ವರ್ಷದ ಕೋರ್ಸ್,ಡಿಪ್ಲೊಮಾ ಇನ್ ಏರೋನಾಟಿಕಲ್ ಇಂಜಿನಿಯರಿಂಗ್ 2 ರಿಂದ 3 ವರ್ಷದ ಕೋರ್ಸ್,ಫೈನ್ ಆರ್ಟ್ಸ್ ಡಿಪ್ಲೊಮಾ 1 ವರ್ಷದ ಕೋರ್ಸ್, ಡಿಪ್ಲೋಮಾ ಇನ್ ನರ್ಸಿಂಗ್ ಕೇರ್ ಅಸಿಸ್ಟೆಂಟ್ 2 ವರ್ಷದ ಕೋರ್ಸ್ ಕೂಡ ಮಾಡಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ನಿಟ್ಟಿನಲ್ಲಿ ತಮಗೆ ಬೇಕಾದ ಕೋರ್ಸ್ ಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

Join Nadunudi News WhatsApp Group